ಸಚಿವ ಪ್ರಿಯಾಂಕ್ ರಾಜೀನಾಮೆ ಕೊಡಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಡೆದಾಡುವ ದೇವರು, ಕರ್ನಾಟಕ ರತ್ನ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ರಜೆ ಘೋಷಿಸಿದ್ದರೂ ಬೆಂಗಳೂರಿನಲ್ಲಿ ಸಭೆ ನಡೆಸಿ ಅಗೌರವ ತೋರಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಒತ್ತಾಯಿಸಿದ್ದಾರೆ.

ಇಡೀ ದೇಶದ ಜನತೆ ದುಃಖದಲ್ಲಿ ಮುಳುಗಿ ಕಣ್ಣೀರು ಹರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸಹ ಒಂದು ದಿನದ ರಜೆ ಜತೆಗೆ ಮೂರು ದಿನದ ಶೋಕಾಚರಣೆ ಘೋಷಿಸಿದೆ. ಇಂಥದರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ದೇಶದ್ರೋಹಿ ಓವೈಸಿಗೆ ಕರೆಸಿ ಸಭೆ ನಡೆಸಿದ್ದು, ವೀರ ಸನ್ಯಾಸಿಗೆ ತೋರಿದ ಅಗೌರವ ಎಂದು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಬಳಗದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ನಡೆಸಿದ್ದು ಸಂವಿಧಾನದ ವಿರೋಧಿ ನಡೆ. ಹೀಗಾಗಿ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ಕಲಬುರಗಿಯಿಂದ ಬೆಂಗಳೂರಿನ ವಿಧಾನಸೌಧವರೆಗೆ ಪಾದಯಾತ್ರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಮಹಿಳಾ ಘಟಕ ಅಧ್ಯಕ್ಷ್ಷೆ ದಿವ್ಯಾ ಹಾಗರಗಿ, ಗುರುಶಾಂತ ಟೆಂಗಳೆ, ಲಕ್ಷ್ಮೀಕಾಂತ ಸ್ವಾದಿ, ಸಂತೋಷ ಬೇನಕನಳ್ಳಿ, ಸಿದ್ದು ಅಂಬಲಗಿ, ಅಮೃತ ಸ್ವಾಮಿ, ರಾಜಶೇಖರ ಬಂಡೆ, ಪ್ರತೀಕ್ ಕ್ಷೀರಸಾಗರ, ಮಲ್ಲಿಕಾಜರ್ುನ ವಾರದ, ಬಸವರಾಜ ಹಂಗರಗಿ, ಉಮೇಶ ರೋಜಾ, ಮಲ್ಲು ಚಿಂಚನಸೂರ, ನಾಗರಾಜ ಡೊಂಗರಗಾಂವ, ಪ್ರಕಾಶ ರೋಜಾ ಇತರರು ಪಾಲ್ಗೊಂಡಿದ್ದರು.