More

  ಸಗರ ಗ್ರಾಮದಲ್ಲಿಂದು ನುಡಿಜಾತ್ರೆ

  ಯಾದಗಿರಿ: ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಮೂರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸೋಮವಾರ (ಜು.24) ರಂದು ನಡೆಯಲಿದ್ದು ಕಾರ್ಯಕ್ರಮದ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ.


  ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಹೊಂದಿರುವ ಗ್ರಾಮದಲ್ಲಿ ಕನ್ನಡದ ಕಂಪು ಪಸರಿಸಲು ಸಾಹಿತ್ಯ ಪರಿಷತ್ತು ಮುಂದಾಗಿದೆ. ಇಲ್ಲಿನ ಕರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಸಮ್ಮೇಳನದ ಪ್ರಧಾನ ವೇದಿಕೆಗೆ ಹೈದರಾಬಾದ್ ಕನರ್ಾಟಕ ವಿಮೋಚನಾ ಹೋರಾಟಗಾರ ದಿ.ಅಚ್ಚಪ್ಪಗೌಡ ಸುಬೇದಾರ ಹೆಸರಿಡಲಾಗಿದೆ.

  ಅಲ್ಲದೆ ಗ್ರಾಮದಲ್ಲಿನ ನಿಮರ್ಿಸಲಾದ ಮಹಾದ್ವಾರಗಳಿಗೆ ಸ್ವಾತಂತ್ರ್ಯ ಹೋರಾಟಗಾರ ದಿ. ಮಹಾಂತಪ್ಪ ವಮ್ಮಾ, ಕನರ್ಾಟಕ ಕವಿಭೂಷಣ ರಸ್ತಾಪುರದ ಭೀಮಕವಿ, ರೈತ ಹೋರಾಟಗಾರ ದಿ.ಮೈಲಾರಪ್ಪ ಸಗರ ನಾಮಕರಣ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮಕ್ಕೆ ನಾಡಿನ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಹರಗುರು, ಚರಮೂತರ್ಿಗಳು ಸಾನಿಧ್ಯ ವಹಿಸಲಿದ್ದಾರೆ.

  ಬೆಳಿಗ್ಗೆ 8ಗಂಟೆಯಿಂದ 10.30ರವರೆಗೆ ಗ್ರಾಮದ ಚೌಡೇಶ್ವರಿ ದೇವಸ್ಥಾನದಿಂದ ಕರಬಸವೇಶ್ವರ ಕಲ್ಯಾಣ ಮಂಟಪದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಕಲಾ ತಂಡಗಳು ಮತ್ತು ವಿವಿಧ ಶಾಲೆಗಳ ವಿದ್ಯಾಥರ್ಿಗಳಿಂದ ಸ್ಥಬ್ಧಚಿತ್ರ, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು, ಗ್ರಾಮದ ಕಲಾತಂಡಗಳು ಭಾಗವಹಿಸಲಿವೆ.

  ಸಮಗ್ರತೆ, ಸಾಂಸ್ಕೃತಿಕ ಪರಂಪರೆ, ಸಮ್ಮೇಳನಾಧ್ಯಕ್ಷರ ಬದುಕು ಬರಹ, ಕವಿಗೊಷ್ಠಿ, ಹಾಸ್ಯ ಗೋಷ್ಠಿ, ಸಮಾರೋಪ ಸಮಾರಂಭ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅನೇಕ ವಿದ್ವಾಂಸರು ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts