25.9 C
Bengaluru
Wednesday, January 22, 2020

ಸಕಾರಾತ್ಮಕ ಬದಲಾವಣೆಯತ್ತ ದೃಢ ಹೆಜ್ಜೆ

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...

ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ನವೆಂಬರ್ 30ರಂದು ತನ್ನ ಎರಡನೇ ಅವಧಿಯ ಅಧಿಕಾರದ 6 ತಿಂಗಳನ್ನು ಪೂರ್ಣಗೊಳಿಸಿದೆ. ಈ ಆರು ತಿಂಗಳಲ್ಲಿ ಹಲವಾರು ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಬಡವರು, ಶೋಷಿತರು, ರೈತರು, ಮಹಿಳೆಯರು, ಯುವಜನರು, ಮಧ್ಯಮ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಜೀವನಮಟ್ಟ ಬದಲಿಸುವ ನಿರ್ಧಾರಗಳನ್ನು ಮೋದಿ 2.0 ಸರ್ಕಾರ ಸಕಾರಾತ್ಮಕವಾಗಿ ಕೈಗೊಂಡಿದೆ. ಸರ್ಕಾರದ ಎಲ್ಲ ನಿರ್ಧಾರಗಳ ವ್ಯಾಪಕ ತತ್ತ್ವ ಮತ್ತು ಮನೋಭಾವ ‘ಭಾರತ ಮೊದಲು’ ಎಂಬುದೇ ಆಗಿದೆ.

ಭಾರತದ ಜನತೆ ಮತ್ತೆ ನೀಡಿದ ಆದೇಶ ಮತ್ತು ಇಟ್ಟ ನಂಬಿಕೆಗೆ ಅನುಗುಣವಾಗಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ ಭರವಸೆಗಳನ್ನು ಸಾಕಾರಗೊಳಿಸುವಲ್ಲಿ ಮತ್ತು ಈಡೇರಿಸುವಲ್ಲಿ ಸರ್ಕಾರ ತೊಡಗಿದೆ. ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ನ ದೃಷ್ಟಿಯೊಂದಿಗೆ, ಮೋದಿ 2.0 ಸರ್ಕಾರ ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಬ್ಕಾ ವಿಶ್ವಾಸವನ್ನೂ ಬಯಸುತ್ತಿದೆ.

ಬಿಜೆಪಿ ನೀಡಿದ ಹಲವಾರು ಪ್ರಮುಖ ಭರವಸೆಗಳು ಈಗಾಗಲೇ ಈಡೇರಿವೆ. ಅವುಗಳಲ್ಲಿ ಪ್ರಮುಖವಾದುದು 370ನೇ ವಿಧಿ ಮತ್ತು 35ಎ ವಿಧಿಗಳನ್ನು ರದ್ದುಗೊಳಿಸಿದ್ದು, ಮುಸ್ಲಿಂ ಮಹಿಳೆಯರಿಗೆ ಲಿಂಗ ಸಮಾನತೆ ನ್ಯಾಯವನ್ನು ನೀಡುವ ತ್ರಿವಳಿ ತಲಾಕ್ ಮಸೂದೆ ಅಂಗೀಕಾರವನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಆರು ತಿಂಗಳ ಅಧಿಕಾರಾವಧಿಯಲ್ಲಿಯೇ ದೇಶ ಅಯೋಧ್ಯೆ ಬಗ್ಗೆ ಗೌರವಾನ್ವಿತ ಸುಪ್ರೀಂ ಕೋರ್ಟ್​ನ ಐತಿಹಾಸಿಕ ತೀರ್ಪನ್ನು ಕಂಡಿದೆ.

ರಾಮ ಜನ್ಮಭೂಮಿಯಲ್ಲಿ ಭವ್ಯವಾದ ರಾಮ ಮಂದಿರ ನಿರ್ವಿುಸಲು ಅನುವು ಮಾಡಿಕೊಟ್ಟಿದೆ. ಗಮನಾರ್ಹವಾದುದೇನೆಂದರೆ, ಕೆಲವು ಪ್ರಮುಖ ರಾಜಕೀಯ ವಿರೋಧಿಗಳು ಅಯೋಧ್ಯೆ ತೀರ್ಪನ್ನು ವಿಳಂಬಗೊಳಿಸಲು ಪ್ರಯತ್ನಿಸಿದರೂ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ರಚನಾತ್ಮಕ ಪಾತ್ರ ನಿರ್ವಹಿಸಿದವು. ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದಂತೆ, ಅಯೋಧ್ಯೆ ತೀರ್ಪಿನ ನಂತರ ದೇಶದಲ್ಲಿದ್ದ ಶಾಂತಿ ಮತ್ತು ಸಾಮರಸ್ಯದ ಮನೋಭಾವ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಗೆ ಸಾಕ್ಷಿಯಾಗಿದೆ.

ಮೋದಿ ಸರ್ಕಾರದ ಅಡಿಯಲ್ಲಿ ‘ಒಂದು ರಾಷ್ಟ್ರ, ಒಂದು ಧ್ವಜ, ಒಂದು ಸಂವಿಧಾನ’ ಎಂಬುದು ನಿಜವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಡಿಸಿದ 370ನೇ ವಿಧಿ ರದ್ದುಗೊಳಿಸುವ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ್ದು ಐತಿಹಾಸಿಕ ಕ್ಷಣ.

ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಸರಿಯಾದ ಹಾದಿಯಲ್ಲಿ ಸಾಗಿದೆ. ಸಾರ್ವಜನಿಕ ಉದ್ದಿಮೆಗಳಲ್ಲಿನ ಕಾರ್ಯತಂತ್ರದ ಬಂಡವಾಳ ಹಿಂತೆಗೆತ ಮತ್ತು ತೆರಿಗೆ, ಕಾರ್ವಿುಕ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿನ ಸುಧಾರಣೆಗಳಂತಹ ಪ್ರಮುಖ ನಿರ್ಧಾರಗಳೊಂದಿಗೆ ಭಾರತದ ಆರ್ಥಿಕತೆ ಬಲಗೊಳ್ಳುತ್ತಿದೆ.

ಕಾರ್ಪೆರೇಟ್ ತೆರಿಗೆ ದರಗಳನ್ನು ಅಸ್ತಿತ್ವದಲ್ಲಿರುವ ಕಂಪನಿಗಳಿಗೆ ಶೇಕಡ 22 ಮತ್ತು ಹೊಸ ದೇಶೀಯ ಉತ್ಪಾದನಾ ಕಂಪನಿಗಳಿಗೆ ಶೇ.15ಕ್ಕೆ ಇಳಿಸಲಾಗಿದೆ. ಭಾರತ ಈಗ ಅತ್ಯಂತ ಕಡಿಮೆ ತೆರಿಗೆ ದರವನ್ನು ಹೊಂದಿದೆ. ಇದು ಸ್ಪರ್ಧಾತ್ಮಕ ಜಾಗತಿಕ ಆರ್ಥಿಕತೆಗಳಲ್ಲಿ ಒಂದಾಗಿದೆ.

ಬ್ಯಾಂಕಿಂಗ್ ಕ್ಷೇತ್ರವನ್ನು ಸುಧಾರಿಸಲು ಬೃಹತ್ ಬ್ಯಾಂಕ್ ವಿಲೀನವನ್ನು ಆರಂಭಿಸಲಾಗಿದೆ. ಇದರನುಸಾರ 10 ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆ. 2019-20ನೇ ಸಾಲಿಗೆ 70,000 ಕೋಟಿ ರೂ.ಗಳನ್ನು ಬ್ಯಾಂಕುಗಳಿಗೆ ಪುನರ್ಧನವಾಗಿ ನೀಡಲಾಗಿದೆ. ಭಾರತ ಜಾಗತಿವಾಗಿ ತನ್ನ ಛಾಪು ಮೂಡಿಸುತ್ತಿದೆ. ಸುಲಲಿತ ವ್ಯವಹಾರ, ಜಾಗತಿಕ ನಾವೀನ್ಯತೆ ಸೂಚ್ಯಂಕ ಮತ್ತು ಇತರ ಹಲವಾರು ಜಾಗತಿಕ ಸೂಚ್ಯಂಕಗಳಲ್ಲಿನ ಹೆಚ್ಚಳ ಇದಕ್ಕೆ ಸಾಕ್ಷಿ.

ವಿಶ್ವಬ್ಯಾಂಕಿನ ‘ಡೂಯಿಂಗ್ ಬಿಸಿನೆಸ್ ರಿಪೋರ್ಟ್’(ಡಿಬಿಆರ್) 2019ರಲ್ಲಿ ಭಾರತ 190 ದೇಶಗಳಲ್ಲಿ 63ನೇ ಸ್ಥಾನದಲ್ಲಿದೆ. 3 ವರ್ಷಗಳಲ್ಲಿ ಸುಲಲಿತ ವ್ಯವಹಾರದಲ್ಲಿ ಭಾರತ 67 ಸ್ಥಾನ ಮೇಲಕ್ಕೆ ಜಿಗಿದಿದೆ. ಇದು 2011ರಿಂದೀಚೆಗೆ ಯಾವುದೇ ಬೃಹತ್ ದೇಶದ ಅತಿ ಹೆಚ್ಚು ಜಿಗಿತವಾಗಿದೆ. ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್​ಅಪ್ ವ್ಯವಸ್ಥೆಯನ್ನು ಹೊಂದಿದೆ.

ಗ್ಲೋಬಲ್ ಇನ್ನೋವೇಶನ್ ಸೂಚ್ಯಂಕದಲ್ಲಿ 2015ರಲ್ಲಿದ್ದ 81ನೇ ಸ್ಥಾನದಿಂದ ಭಾರತದ ಶ್ರೇಯಾಂಕವು 2019ರಲ್ಲಿ 52 ನೇ ಸ್ಥಾನಕ್ಕೆ ಏರಿದೆ. ಐಎಮ್​ಯು ವಿಶ್ವ ಡಿಜಿಟಲ್ ಸ್ಪರ್ಧಾತ್ಮಕತೆ ಸೂಚ್ಯಂಕ 2019ರಲ್ಲಿ, ಭಾರತವು 2018ರಲ್ಲಿದ್ದ 48ನೇ ಸ್ಥಾನದಿಂದ 44ನೇ ಸ್ಥಾನಕ್ಕೆ ಏರಿದೆ. ಕೊನೆಯದಾಗಿ, ಡಬ್ಲು್ಯಇಎಫ್​ನ ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕ-2019ರಲ್ಲಿ ಭಾರತ 2015 ರಲ್ಲಿದ್ದ 52ನೇ ಶ್ರೇಯಾಂಕದಿಂದ 34ನೇ ಸ್ಥಾನಕ್ಕೆ ಜಿಗಿದಿದೆ. ದೇಶದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿರುವ ಸರ್ಕಾರ ಒಂದು ವಿಶಿಷ್ಟತೆಯನ್ನು ಹೊಂದಿದೆ.

‘ಪ್ರಧಾನಮಂತ್ರಿ ಕಿಸಾನ್ ಯೋಜನೆ’ ಅಡಿಯಲ್ಲಿ ಎಲ್ಲ ರೈತರಿಗೆ ವರ್ಷಕ್ಕೆ -ಠಿ; 6000 ನೆರವು ಒದಗಿಸಲಾಗುತ್ತಿದೆ. ಈ ಯೋಜನೆ ಈಗ ದೇಶದ 14.5 ಕೋಟಿ ರೈತರನ್ನು ಒಳಗೊಂಡಿದೆ. ಸರ್ಕಾರ ರಫೇಲ್ ಯುದ್ಧವಿಮಾನಗಳನ್ನು ಭಾರತಕ್ಕೆ ತಂದಿದೆ. ಸಾರ್ವಜನಿಕರ ಭಾಗವಹಿಸುವಿಕೆಯಿಂದ ಯಾವ ನಡವಳಿಕೆಯನ್ನಾದರೂ ಬದಲಾಯಿಸಬಹುದು ಎಂದು ಮೋದಿ ನಂಬಿದ್ದಾರೆ.

‘ಸ್ವಚ್ಛ ಭಾರತ ಅಭಿಯಾನ’ದ ಮುಂದುವರಿದ ಭಾಗವಾಗಿ, ಅವರು ಏಕಬಳಕೆಯ ಪ್ಲಾಸ್ಟಿಕ್​ಗೆ ವಿದಾಯ ಹೇಳಿ ಎಂದು ಕರೆ ನೀಡಿದ್ದಾರೆ. 15 ದಿನಗಳ ಅಭಿಯಾನದ ಮೂಲಕ 13 ಸಾವಿರ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಜಾಗಿಂಗ್ ಅಥವಾ ವಾಕಿಂಗ್ ಮಾಡುವಾಗ ತ್ಯಾಜ್ಯವನ್ನು ಆಯುವಂತೆ ಪ್ರಧಾನಿ ಜನರಿಗೆ ಮನವಿ ಮಾಡಿದ್ದಾರೆ. ಆರು ತಿಂಗಳು ಬಹಳ ಕಡಿಮೆ ಅವಧಿಯಾದರೂ, ನಾವು ಹಿಂತಿರುಗಿ ನೋಡಿದಾಗ, ಮೋದಿ ಸರ್ಕಾರ 2.0 ಅದ್ಭುತ ಸಾಧನೆ ಮಾಡಿದೆ.

(ಲೇಖಕರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ;ವಾರ್ತಾ ಮತ್ತು ಪ್ರಸಾರ; ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಕೇಂದ್ರ ಸಚಿವರು)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...