ಸರಕು ಸಾಗಣೆ ವಾಹನಗಳಲ್ಲಿ ಬೇಡ ಪ್ರಯಾಣ

ದಾಬಸ್​ಪೇಟೆ: ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದನ್ನು ನಿಷೇಧಿಸಲಾಗಿದ್ದು, ಕುರಿತು ಕಾಲ್ನಡಿಗೆ ಜಾಥಾ ಮೂಲಕ ಅರಿವು ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ತಾಲೂಕು ಕಾನೂನು ಸೇವಾ ಪ್ರಾಧಿಕಾರ, ನೆಲಮಂಗಲ ತಾಲೂಕು ಕಾರ್ವಿುಕ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್, ಸಾರಿಗೆ, ಶಿಕ್ಷಣ ಇಲಾಖೆ, ವಕೀಲರ ಸಂಘ ಹಾಗೂ ಕಲ್ಪತರು ಬ್ರೇವರೀಸ್ ಡಿಸ್ಟಲರೀಸ್ ಲಿಮಿಟೆಡ್​ನಿಂದ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿದರು.

ಸರಕು ಸಾಗಣೆ ವಾಹನಗಳ ಸಂಖ್ಯೆ ಹೆಚ್ಚಾಗಿವೆ. ಅದರಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಪಘಾತ ಸಂಭವಿಸಿ ಮೃತ ಪಟ್ಟರೆ ವಿಮೆ ಸೇರಿ ಇತರೆ ಸೌಲಭ್ಯ ಪಡೆಯುವುದು ಕಷ್ಟ ಎಂದರು.

ಕಾರ್ಖಾನೆ ಹಾಗೂ ಬಾಯ್ಲರ್ ಇಲಾಖೆ ಜಂಟಿ ನಿರ್ದೇಶಕ ಕೆ.ಜಿ.ನಂಜಪ್ಪ ಮಾತನಾಡಿ, ಸರಕು ಸಾಗಣೆ ವಾಹನ ನೋಂದಣಿ ವೇಳೆ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು ಎಂದರು.

ಕಾರ್ವಿುಕ ಆಯುಕ್ತ ಎಸ್.ರೇವಣ್ಣ ಮಾತನಾಡಿ, ಕಾರ್ವಿುಕರನ್ನು ಕರೆದೊಯ್ಯಬೇಕಾದರೆ ಬಸ್, ಮಿನಿಬಸ್ ಸೇರಿ ಸುಸ್ಥಿತಿಯಲ್ಲಿರುವ ವಾಹನ ಬಳಸಬೇಕು ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಓಡೆಯರ್ ಮಾತನಾಡಿ, ವಾಹನ ಚಾಲನೆ ಮಾಡುವಾಗ ಚಾಲನ ನಿಯಮ ಅರಿಯಬೇಕು. ಚಾಲನೆ ವೇಳೆ ಮೊಬೈಲ್​ನಲ್ಲಿ ಮಾತನಾಡಬಾರದು. ಅತಿವೇಗದಿಂದ ಚಲಾಯಿಸಬಾರದು ಎಂದು ತಿಳಿಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಬಿ.ಪ್ರಸಾದ್, ಪ್ರಧಾನ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಧೀಶ ಚಿನ್ಮಯಿ, ಪೊಲೀಸ್ ಅಧೀಕ್ಷಕ ರಾಮ್ ವಿಲಾಸ್ ಸೆಪಟ್, ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಕೈಗಾರಿಕ ಪ್ರದೇಶದ ಅಧ್ಯಕ್ಷ ಕಂಠಪ್ಪ, ಕೈಗಾರಿಕೆ ಅಧಿಕಾರಿ ಶ್ಯಾಮರಾವ್, ಡಿವೈಎಸ್​ಪಿ ಎಸ್.ಪಾಂಡುರಂಗ, ದಾಬಸ್​ಪೇಟೆ ಆರಕ್ಷಕ ಉಪನಿರೀಕ್ಷಕ ಜಿ.ಕೆ.ಶಂಕರ್ ನಾಯಕ್, ನೆಲಮಂಗಲ ಸಂಚಾರಿ ಠಾಣೆ ಪಿಎಸ್​ಐ ಕೃಷ್ಣಕುಮಾರ್, ಕಾರ್ವಿುಕ ನಿರೀಕ್ಷಕಿ ಸಿ.ಡಿ.ನಾಗರತ್ನಾ, ಉಪತಹಸೀಲ್ದಾರ್ ಜುಂಜೇಗೌಡ, ರಾಜಸ್ವ ನಿರೀಕ್ಷಕ ಟಿ.ಪಂಚಾಕ್ಷರಿ, ಗ್ರಾಮಲೆಕ್ಕಿಗರಾದ ರಘುಪತಿ, ಬಾಲಕೃಷ್ಣ ಮತ್ತಿತರರಿದ್ದರು.

Leave a Reply

Your email address will not be published. Required fields are marked *