ಸಂಸ್ಕೃತಿಕೋಶ

ಮಿತಿ ಇಲ್ಲದ ಬೆಳಕಿನ ಅಮಿತಾಭ

ಮಹಾಯಾನಪಂಥದವರು ನಿರೂಪಿಸುವ ಐವರು ಧ್ಯಾನಿಬುದ್ಧರಲ್ಲಿ ಒಬ್ಬ ಅಮಿತಾಭ. ‘ಅಮಿತಾಭ’ ಎಂದರೆ ‘ಮಿತಿಯಿಲ್ಲದ ಬೆಳಕು’ ಎಂದರ್ಥ. ಧ್ಯಾನಮಗ್ನನಾದ ಬುದ್ಧ ತನ್ನ ಪ್ರಭೆಯಿಂದ ವಿಶ್ವವನ್ನೆಲ್ಲ ಬೆಳಗಿ ಜನರಲ್ಲೆಲ್ಲ ಬೋಧೆಯನ್ನು ಮೂಡಿಸುವನೆಂಬ ಶ್ರದ್ಧೆಯಿಂದ ರೂಪುಗೊಂಡ ಕಲ್ಪನೆಯಿದು. ಇವನ ವರ್ಣವು ರಕ್ತವೆಂದೂ, ಆಧಿಪತ್ಯವು ಸೂರ್ಯ ಮುಳುಗುವ ಪಶ್ಚಿಮದಿಕ್ಕೆಂದೂ ನಂಬಿಕೆ. ಸುಖಾವತೀವ್ಯೂಹವೆಂಬ ಸಂಸ್ಕೃತ ಗ್ರಂಥದಲ್ಲಿ ಅಮಿತಾಭ ಮತ್ತು ಅವನ ಸ್ವರ್ಗವಾದ ಸುಖಾವತಿಯ ವರ್ಣನೆಗಳಿವೆ.

(ಸೌಜನ್ಯ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ)

Leave a Reply

Your email address will not be published. Required fields are marked *