More

  ಸಂಸದ ಪ್ರಜ್ವಲ್ ನಗರದ ಹಲವು ಬಿಜೆಪಿ ಮುಖಂಡರ ಮನೆಗೆ ಭೇಟಿ: ಬೆಂಬಲಕ್ಕೆ ಮನವಿ

  ಹಾಸನ:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಸಂಸದ ಪ್ರಜ್ವಲ್ ರೇವಣ್ಣ ನಗರದ ಹಲವು ಬಿಜೆಪಿ ಮುಖಂಡರ ಮನೆಗೆ ಭೇಟಿ ಮಾಡಿ ಬೆಂಬಲ ಕೋರಿದರು.
  ತಮಗೆ ಬೆಂಬಲ ನೀಡಲು ಅಪಸ್ವರ ವ್ಯಕ್ತಪಡಿಸುತ್ತಿರುವ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡರಿಗೆ ಠಕ್ಕರ್ ಕೊಡುವ ರೀತಿಯಲ್ಲಿ ಬಿಜೆಪಿ ನಿಷ್ಠಾವಂತ ಮುಖಂಡರು, ಕಾರ್ಯಕರ್ತರು ಹಾಗೂ ಆರ್‌ಎಸ್‌ಎಸ್ ಹಿನ್ನೆಲೆ ಇರುವವರ ಮನೆಗೆ ಭೇಟಿ ನೀಡಿ ಬೆಂಬಲ ನೀಡುವಂತೆ ಮನವಿ ಮಾಡಿದರು.
  ಇದಕ್ಕೂ ಮೊದಲು ಕಡೂರು, ಬೇಲೂರು, ಆಲೂರು, ಸಕಲೇಶಪುರ ಭಾಗದ ಮುಖಂಡರನ್ನು ಭೇಟಿ ಮಾಡಿದ್ದ ಪ್ರಜ್ವಲ್ ಇದೀಗ, ಹಾಸನದಲ್ಲಿ ಸರಣಿ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಇವರಿಗೆ ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಹಾಗೂ ಇತರರು ಸಾಥ್ ನೀಡಿದರು.

  ಯಾವುದೇ ಸಂದೇಶ ಬಂದಿಲ್ಲ:
  ಆದರೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಸತ್ಯ. ಆದರೆ ಮೈತ್ರಿ ವಿಷಯವಾಗಿ ರಾಜ್ಯ ಬಿಜೆಪಿಯಿಂದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಜಿಲ್ಲಾಧ್ಯಕ್ಷರಿಗೆ ಅಥವಾ ಪಕ್ಷಕ್ಕೆ ಯಾವುದೇ ಮಾಹಿತಿ ಎಂದು ಜಿಲ್ಲಾ ಬಿಜೆಪಿ ಹೇಳಿದೆ.
  ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ತೀರ್ಮಾನ ಆಗದೆ ನಮ್ಮ ಪಕ್ಷದ ಕಾರ್ಯಕರ್ತರು, ಜೆಡಿಎಸ್ ನಾಯಕರು, ಜನಪ್ರತಿನಿಧಿಗಳನ್ನು ಭೇಟಿ ಮಾಡುವುದು, ಅವರ ಜೂತೆ ಪ್ರಚಾರಕ್ಕೆ ಹೋಗುವುದು ಸೂಕ್ತವಲ್ಲ. ರಾಜ್ಯ ಬಿಜೆಪಿಯಿಂದ ಮೈತ್ರಿ ಬಗ್ಗೆ ನಮಗೆ ಸ್ಪಷ್ಟ ಸಂದೇಶ ಬರುವ ತನಕ ನಮ್ಮ ಕಾರ್ಯಕರ್ತರು ಜೆಡಿಎಸ್ ನಾಯಕರನ್ನು ಭೇಟಿ ಮಾಡುವುದು, ಪ್ರಚಾರಕ್ಕೆ ಹೋಗುವುದು, ಬಹಿರಂಗವಾಗಿ ಅಥವಾ ಪತ್ರಿಕಾ ಹೇಳಿಕೆ ನೀಡಬಾರದು ಎಂದು ಮನವಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts