24.7 C
Bangalore
Tuesday, December 10, 2019

ಸಂಸದರ ಎದುರು ಹಲವು ಸವಾಲುಗಳು

Latest News

ರೈಲಿನಲ್ಲಿಯೇ ಗಂಡುಮಗುವಿಗೆ ಜನ್ಮ ನೀಡಿದ ಮಹಿಳೆ; ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಅಂಗನವಾಡಿ ಕಾರ್ಯಕರ್ತೆಯರು

ಯಾದಗಿರಿ: ಮಹಿಳೆಯೋರ್ವರು ರೈಲಿನಲ್ಲಿಯೇ ಗಂಡುಮಗುವಿಗೆ ಜನ್ಮನೀಡಿದ್ದಾರೆ. ಯಾದಗಿರಿ ಜಿಲ್ಲೆಯ ಸೈದಾಪುರ ನಿವಾಸಿ ಗೀತಾ ಎಂಬುವರು ಪತಿಯ ಜತೆ ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಪ್ರಯಾಣದ ಮಧ್ಯೆ ಹೆರಿಗೆ ನೋವು...

ಲೋಕಸಭೆಯಲ್ಲಿ 12 ತಾಸು ಚರ್ಚೆ ಬಳಿಕ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ; ಅಮಿತ್​ ಷಾ ಅವರನ್ನು ಪ್ರಶಂಸಿಸಿದ ಪ್ರಧಾನಿ ಮೋದಿ

ನವದೆಹಲಿ: ಬಹು ವಿವಾದ ಸೃಷ್ಟಿಸಿದ್ದ ಪೌರತ್ವ ತಿದ್ದುಪಡಿ ಮಸೂದೆ ನಿನ್ನೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಗೃಹಸಚಿವ ಅಮಿತ್​ ಷಾ ಅವರು ಬಿಲ್​ ಮಂಡನೆ ಮಾಡುವುದನ್ನೇ ಕಾಂಗ್ರೆಸ್​ ನೇತೃತ್ವದ ಪ್ರತಿಪಕ್ಷಗಳು...

ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡುವ ವರ್ತಕರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ: ದಾಸ್ತಾನು ಪ್ರಮಾಣ ಘೋಷಿಸಿದ ಸರ್ಕಾರ

ಮೈಸೂರು: ಗಗನಕ್ಕೆ ಏರಿರುವ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ. ಈರುಳ್ಳಿಯನ್ನು ಅಕ್ರಮವಾಗಿ ದಾಸ್ತಾನು ಮಾಡುವ ವರ್ತರು ಹಾಗೂ ದಲ್ಲಾಳಿಗಳ ವಿರುದ್ಧ...

ಹೊಸಕೋಟೆ ಸಂಭ್ರಮಾಚರಣೆ ವೇಳೆ ಶರತ್​ ಬಚ್ಚೇಗೌಡ ಮತ್ತು ಎಂಟಿಬಿ ಬೆಂಬಲಿಗರ ನಡುವೆ ಹೊಡೆದಾಟ; ಗ್ರಾಪಂ ಸದಸ್ಯ ಆಸ್ಪತ್ರೆಗೆ ದಾಖಲು

ಹೊಸಕೋಟೆ: ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್​ ಬಚ್ಚೇಗೌಡ ಗೆದ್ದ ಬೆನ್ನಲ್ಲೇ ಅವರ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ನಡೆಸಿದ್ದಾರೆ. ಬಾಣಮಾಕನಹಳ್ಳಿಯಲ್ಲಿ ನಡೆದ ಸಂಭ್ರಮದ ವೇಳೆ ಶರತ್​...

ಸ್ವಾಮಿ ನಿತ್ಯಾನಂದನ ಕಾಲುಮುಟ್ಟಿ ನಮಸ್ಕರಿಸಿದ್ದು ಕೇಂದ್ರ ಗೃಹಸಚಿವ ಅಮಿತ್​ ಷಾ ಅವರಾ? ಫ್ಯಾಕ್ಟ್​ಚೆಕ್​ನಲ್ಲಿ ಬಯಲಾದ ಸತ್ಯ ಏನು ಗೊತ್ತಾ?

ಸ್ವಘೋಷಿತ ದೇವಮಾನವ ಬಿಡದಿ ಧ್ಯಾನಪೀಠದ ನಿತ್ಯಾನಂದ ತಲೆ ಮರೆಸಿಕೊಂಡು ವಿದೇಶಕ್ಕೆ ಪಲಾಯನವಾಗಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಆತನ...

ಹುಬ್ಬಳ್ಳಿ:ಧಾರವಾಡ ಲೋಕಸಭೆ ಕ್ಷೇತ್ರದಿಂದ 4ನೇ ಬಾರಿ ಸದಸ್ಯರಾಗಿ ಆಯ್ಕೆಯಾಗಿರುವ ಪ್ರಲ್ಹಾದ ಜೋಶಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಪ್ರಚಾರದ ಸಂದರ್ಭದಲ್ಲಿ ಹೇಳಿಕೊಂಡಿದ್ದರು. ಅದಕ್ಕಿಂತ 5 ಸಾವಿರ ಜಾಸ್ತಿ ಅಂತರದಿಂದ ಮತದಾರರು ಗೆಲ್ಲಿಸಿದ್ದು, ತಮ್ಮ ನಿರೀಕ್ಷೆಗಳೂ ಜಾಸ್ತಿ ಇವೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಸತತ ನಾಲ್ಕನೇ ಅವಧಿಗೆ ಸಂಸದರಾಗಿ ಆಯ್ಕೆಯಾಗಿರುವ ಜೋಶಿ ಅವರು ಕಳೆದ ಎನ್​ಡಿಎ ಸರ್ಕಾರದಲ್ಲಿ ಐದು ವರ್ಷದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ದಾಖಲೆಯ ಅನುದಾನ ತಂದಿದ್ದಾರೆ. ವಾಣಿಜ್ಯೋದ್ಯಮಿಗಳ ಅಹವಾಲಿಗೆ ಸ್ಪಂದಿಸಿ ಬಿಐಎಸ್ (ಭಾರತೀಯ ಮಾನಕ ಸಂಸ್ಥೆ) ಶಾಖೆಯನ್ನು ತಂದಿದ್ದು ಸೇರಿದಂತೆ, ಸಾರ್ವಕಾಲಿಕ ಪ್ರಯೋಜನದ ಕೆಲಸಗಳನ್ನೂ ವಿಶೇಷ ಆಸಕ್ತಿ ವಹಿಸಿ ಮಾಡಿದ್ದಾರೆ. ಹೀಗಾಗಿ, ಮತ್ತೆ ಸಂಸತ್ತಿನಲ್ಲಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಲು ಇವರೇ ಸರಿ ಎಂದು ತೀರ್ವನಿಸಿದ ಜನರು, ಈಗ ಇನ್ನೂ ಹೆಚ್ಚಿನದನ್ನು ಅಪೇಕ್ಷಿಸುತ್ತಿದ್ದಾರೆ.

ಕುಡಿಯುವ ನೀರು ಪೂರೈಕೆ ಮತ್ತು ನೀರಾವರಿ ವಿಷಯದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರ ಹಿಂದುಳಿದಿದೆ. ಕುಡಿಯುವ ನೀರು ಒದಗಿಸುವುದು ರಾಜ್ಯ ಸರ್ಕಾರದ ಹೊಣೆಗಾರಿಕೆಯೇ. ಆದರೆ, ರಾಜ್ಯ ಸರ್ಕಾರಕ್ಕೆ ಪೂರಕವಾಗಿ ಮಹದಾಯಿ ಯೋಜನೆ ಜಾರಿಯಾಗುವುದು ಅತ್ಯಗತ್ಯ.

ಮಹದಾಯಿಯಲ್ಲಿಯ ಕರ್ನಾಟಕದ ಹಕ್ಕು ಪಡೆಯುವ ಧಾರವಾಡ, ಬೆಳಗಾವಿ, ಬಾಗಲಕೋಟೆ ಈ ಮೂರೂ ಕ್ಷೇತ್ರದಲ್ಲಿ ಕಳೆದ ಸಲದಂತೆ ಬಿಜೆಪಿಯೇ ಗೆದ್ದಿದೆ. ಇವುಗಳಲ್ಲಿ ಧಾರವಾಡ ಕ್ಷೇತ್ರ ಹೆಚ್ಚು ಜನಸಂಖ್ಯೆ ಹೊಂದಿದೆ. ಗ್ರಾಮಾಂತರಕ್ಕಿಂತ ನಗರ ಪ್ರದೇಶದಲ್ಲೇ ಹೆಚ್ಚು ಜನ ಇರುವುದು ಈ ಕ್ಷೇತ್ರದ ಇನ್ನೊಂದು ವಿಶೇಷ. ನೀರಾವರಿ ಇಲ್ಲದ ಕಾರಣದಿಂದಾಗಿ ಗ್ರಾಮೀಣ ಭಾಗದಲ್ಲಿ ಜಮೀನ್ದಾರರು ಕೂಲಿಕಾರರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಭೂಮಿ ಪಾಳುಬಿದ್ದು, ಜಿಲ್ಲೆಯ ತಲಾ ಆದಾಯವೇ ಕುಸಿಯುತ್ತಿರುವುದು ಶೋಚನೀಯ.

ಮಹದಾಯಿ ಯೋಜನೆ ಜಾರಿ ಕ್ಷೇತ್ರದ ಚಿತ್ರಣವನ್ನೇ ಬದಲಿಸಬಲ್ಲದು. ರೈತರಿಗೆ ಅನುಕೂಲ ಮಾಡಿಕೊಟ್ಟ ನಿತಿನ್ ಗಡ್ಕರಿ, ಶರದ ಪವಾರ್ ಅಂಥವರು ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಲ್ಲದೇ ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಬಲ ರಾಜಕೀಯ ಇಚ್ಛಾಶಕ್ತಿ, ರಾಜ್ಯ-ಕೇಂದ್ರದ ಮಧ್ಯೆ ಸಮನ್ವಯತೆಯಿಂದಾಗಿ ಪ್ರಲ್ಹಾದ ಜೋಶಿಯವರು ಮಲಪ್ರಭೆ ಒಡಲಿಗೆ ಮಹದಾಯಿ ನೀರು ಹರಿಯುವಂತೆ ಮಾಡಿದರೆ ಅದೊಂದು ಚರಿತ್ರಾರ್ಹ ಸಂಗತಿಯೇ ಆಗುತ್ತದೆ.

ಧಾರವಾಡ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆಗೆ ವಿಪುಲ ಅವಕಾಶವಿದೆ. ಹೂಡಿಕೆದಾರರ ಸಂಪರ್ಕ ಸಾಧಿಸಿ ಇಲ್ಲಿಗೆ ಕರೆತರುವುದು, ಹುಬ್ಬಳ್ಳಿ ಉತ್ತರ ಕರ್ನಾಟಕದ ಕೇಂದ್ರ ಸ್ಥಾನವಾಗಿರುವುದರಿಂದ ಇಲ್ಲಿಗೊಂದು ಏಮ್್ಸ ಮಂಜೂರಿ ಮಾಡಿಸುವುದು, ದಿ. ಅಟಲ ಬಿಹಾರಿ ವಾಜಪೇಯಿಯವರೇ ಶಂಕುಸ್ಥಾಪನೆ ನೆರವೇರಿಸಿದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿ, ಬೆಳಗಾವಿ-ಧಾರವಾಡ ನೇರ ರೈಲ್ವೆ ಸೇರಿ 5 ವರ್ಷದಲ್ಲಿ ಮಾಡಿ ಮುಗಿಸಬಹುದಾದ ಅನೇಕ ಬೇಡಿಕೆಗಳು ಬೇರೆ ಬೇರೆ ಸ್ತರದಿಂದ ಕೇಳಿಬರುತ್ತಲೇ ಇವೆ.

ಈಗಾಗಲೇ ಮಂಜೂರಿಯಾಗಿರುವ ಸ್ಮಾರ್ಟ್ ಸಿಟಿ, ರಸ್ತೆ ಯೋಜನೆಗಳ ಸಮರ್ಪಕ ಅನುಷ್ಠಾನ ಕೂಡ ಅಷ್ಟೇ ಮುಖ್ಯ. ಕೇಂದ್ರ ಸರ್ಕಾರಿ ಇಲಾಖೆಗಳು ಸೇರಿದಂತೆ ಜಿಲ್ಲೆಯಲ್ಲಿಯ ಸಮಗ್ರ ಸರ್ಕಾರಿ ಯಂತ್ರವನ್ನು ಹೆಚ್ಚು ಹರಿತ ಮತ್ತು ಚುರುಕುಗೊಳಿಸದೇ ಇದ್ದಲ್ಲಿ ಯಾವ ಯೋಜನೆ ತಂದರೂ ಕುಂಟುತ್ತ ಕುಂಟುತ್ತ ಕ್ರಮೇಣ ಮಲಗಿಬಿಡುತ್ತವೆ. ಹಾಗಾಗದಂತೆ ನೋಡಿಕೊಳ್ಳುವಲ್ಲಿ ಸಂಸದರು ವಿಶೇಷ ಗಮನ ಹರಿಸಲಿ ಎಂದು ಜನರು ನಿರೀಕ್ಷಿಸುತ್ತಿದ್ದಾರೆ.

ಸಚಿವ ಸ್ಥಾನ ಸಿಕ್ಕೀತೆ?:4ನೇ ಸಲ ಗೆದ್ದಿರುವ, ರಾಜ್ಯದ ಸಂಸದರಲ್ಲಿ ಕ್ರಿಯಾಶೀಲ ಎಂದು ಗುರುತಿಸಿಕೊಂಡು ಪ್ರಧಾನಿಯವರ ಗಮನವನ್ನೂ ಸೆಳೆದಿರುವ ಪ್ರಲ್ಹಾದ ಜೋಶಿಯವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬಹುದೆ ಎಂಬ ಕುತೂಹಲವಿದ್ದೇ ಇದೆ. ಸಿಕ್ಕಲ್ಲಿ, ಅದು ಧಾರವಾಡ ಕ್ಷೇತ್ರಕ್ಕೇ ದೊಡ್ಡ ಹೆಮ್ಮೆಯಾಗುತ್ತದೆ. ಜನರ ನಿರೀಕ್ಷೆಗಳೂ ಹೆಚ್ಚುತ್ತವೆ.

ಸುತ್ತಮುತ್ತ ಸ್ವಚ್ಛವಿರಲಿ :ಪ್ರಲ್ಹಾದ ಜೋಶಿಯವರ ಸುತ್ತಮುತ್ತಲೇ ಇದ್ದು ಅವರ ಪಕ್ಕಾ ಅನುಯಾಯಿ ಎಂದು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವ ಎಲ್ಲರೂ ಒಂದೇ ರೀತಿ ಇದ್ದಂತೆ ಕಾಣುತ್ತಿಲ್ಲ. ಉನ್ನತ ಮಟ್ಟಕ್ಕೆ ಬೆಳೆಯುವವರಿಗೆ ಅವರ ಸಮೀಪವರ್ತಿಗಳೆಂದು ಗುರುತಿಸಿಕೊಳ್ಳುವ ಕೆಲವರು ಬೇರೆ ಕಡೆಗೆ ತೋರುವ ವರ್ತನೆ, ಚಟುವಟಿಕೆಗಳೇ ಸ್ಪೀಡ್ ಬ್ರೇಕರ್​ನಂತಾಗುವುದಿದೆ. ಜೋಶಿಯವರು ಅಂಥವರನ್ನು ಗುರುತಿಸಿ ಸೂಕ್ತ ಅಂತರದಲ್ಲಿ ಇಡುವುದು ಸೂಕ್ತ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಆಗಾಗ ಕೇಳಿಬರುವುದಿದೆ.</

Stay connected

278,743FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...