ಸಂಶೋಧನೆ ಕ್ಷೇತ್ರದಲ್ಲಿ ಕುಂಠಿತವಾಗುತ್ತಿರುವ ವಿದ್ವತ್ತು

ಧಾರವಾಡ: ಸಾಹಿತ್ಯ, ಸಂಶೋಧನೆ ಕ್ಷೇತ್ರದಲ್ಲಿ ವಿದ್ವತ್ತು ಸಂಪೂರ್ಣ ಬತ್ತಿ ಹೋಗದಿದ್ದರೂ ಕಡಿಮೆಯಾಗಿದೆ. ಸಂಶೋಧಕರಿಗೆ ಮಾರ್ಗದರ್ಶಕರಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಅವರ ಜಾಗ ತುಂಬುವುದು ಕಷ್ಟ. ಅವರ ಪಥದಲ್ಲಿ ನಡೆಯುವ ಪಡೆಯನ್ನು ಸಿದ್ಧಗೊಳಿಸ-ವುದೇ ಅವರಿಗೆ ಸಲ್ಲಿಸುವ ಗೌರವ ಎಂದು ಹಿರಿಯ ವಿದ್ವಾಂಸ, ನಾಡೋಜ ಡಾ. ಹಂ.ಪ. ನಾಗರಾಜಯ್ಯ ಹೇಳಿದರು.

ಡಾ. ಎಂ.ಎಂ. ಕಲಬುರ್ಗಿ ಅವರ 80ನೇ ಜನ್ಮದಿನದ ಅಂಗವಾಗಿ ನವನಗರದ ಶಿವಚಂದ್ರ ಪ್ರಕಾಶನದಡಿ ಡಾ. ಬಾಳಣ್ಣ ಶೀಗೀಹಳ್ಳಿ, ಡಾ. ಜಿ.ಎಂ. ಹೆಗಡೆ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ಕಲಬುರ್ಗಿ- 80 ಸಂಸ್ಮರಣ ಗ್ರಂಥ’ವನ್ನು ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಬುಧವಾರ ಬಿಡಗಡೆ ಮಾಡಿ ಅವರು ಮಾತನಾಡಿದರು.

ಕಲಬುರ್ಗಿ ಅವರನ್ನು ನೆನೆಯá-ವುದು ಹಳೇಹನ್ನಡ ಸಾಹಿತ್ಯವನ್ನು ಮೆಲಕು ಹಾಕಿದಂತೆ. ಸಾಹಿತ್ಯ, ಸಂಶೋಧನಾ ಕ್ಷೇತ್ರಕ್ಕೆ ರಾಜಪಥ ಹಾಕಿಕೊಟ್ಟ ಅವರೊಬ್ಬ ಚತ-ಮುಖ ಬ್ರಹ್ಮ. ಸಂಶೋಧನಾಂಗ, ಆಡಳಿತಾಂಗ, ಬೋಧನಾಂಗ, ಲೇಖನಾಂಗಗಳಲ್ಲಿ ಸೃಜನಶೀಲರಾಗಿದ್ದರು. ಅವರ ಹತ್ಯೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ಪತ್ನಿ ಉಮಾದೇವಿ ಅವರು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ಶ್ಲಾಘಿಸಲೇಬೇಕು. ಅವರೊಂದಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.

ಮೈಸೂರಿನ ವಿದ್ವಾಂಸ ಎನ್.ಎಸ್. ತಾರಾನಾಥ ‘ಕಲಬುರ್ಗಿ ಅವರ ಸಂಶೋಧನೆ’ ಕುರಿತು ಮಾತನಾಡಿ, ಡಾ. ಕಲಬುರ್ಗಿ ಸಾಹಿತ್ಯ, ಸಂಶೋಧನಾ ಕ್ಷೇತ್ರದ

ಪ್ರಾತಃಸ್ಮರಣೀಯರು. ಅಗ್ರಪಂಕ್ತಿಯ ಮಹಾ ಸಂಶೋಧಕರಾಗಿದ್ದ ಅವರ ಪ್ರೀತಿ ಅಸದೃಶವಾದುದು. ಶಾಸನ, ಜಾನಪದ, ಗ್ರಂಥ ಸಂಪಾದನೆ, ಸಾಂಸ್ಥಿಕ ಸಂಶೋಧನೆ ಅಪರಿಮಿತವಾದುದು ಎಂದರು.

ಗ್ರಂಥ ಸಂಪಾದಕ ಡಾ. ಜಿ.ಎಂ. ಹೆಗಡೆ ಮಾತನಾಡಿ, ಸಂಸ್ಮರಣ ಗ್ರಂಥ ರಚನೆಗೆ ಉಮಾದೇವಿ ಕಲಬುರ್ಗಿ ಪ್ರೇರಣೆ. 42 ಸಂಶೋಧನಾ ಲೇಖನಗಳನ್ನು ಬಳಸಿಕೊಳ್ಳಲಾಗಿದ್ದು, ಇನ್ನೂ ಒಂದು ಸಂಪುಟ ಆಗುವಷ್ಟು ಲೇಖನ ಉಳಿದಿವೆ. ಸಂಸ್ಮರಣ ಗ್ರಂಥ ಲಿಂ. ತೋಂಟದ ಶ್ರೀಗಳಿಗೆ ಸಮರ್ಪಣೆ ಎಂದರು.

‘ಡಾ. ಕಲಬುರ್ಗಿ ಅವರ ವ್ಯಕ್ತಿತ್ವ’ ಕುರಿತು ಸಂಕೇಶ್ವರದ ಸಾಹಿತಿ ಡಾ. ಗುರುಪಾದ ಮರಿಗುದ್ದಿ ಮಾತನಾಡಿದರು. ಇನ್ನೋರ್ವ ಗ್ರಂಥ ಸಂಪಾದಕ ಡಾ. ಬಾಳಣ್ಣ ಶೀಗೀಹಳ್ಳಿ, ಪ್ರಕಾಶಕಿ ಹನುಮಾಕ್ಷಿ ಗೋಗಿ, ಉಮಾದೇವಿ ಕಲಬುರ್ಗಿ ವೇದಿಕೆಯಲ್ಲಿದ್ದರು.

ನಾಡೋಜ ಡಾ. ಚನ್ನವೀರ ಕಣವಿ, ಚಂದ್ರಕಾಂತ ಬೆಲ್ಲದ, ವೀರಣ್ಣ ರಾಜೂರ, ಡಾ. ಗುರುಲಿಂಗ ಕಾಪಸೆ, ಶ್ರೀವಿಜಯ ಕಲಬುರ್ಗಿ, ರೂಪದರ್ಶಿ ಕಲಬುರ್ಗಿ, ಇತರರಿದ್ದರು.

ಸರ್ಕಾರ, ಪೊಲೀಸ್ ವ್ಯವಸ್ಥೆಯ ವೈಫಲ್ಯ ಖಂಡನೀಯ 

ಪ್ರಕಾಶಕಿ ಹನುಮಾಕ್ಷಿ ಗೋಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಷ್ಟೋ ಪ್ರಕರಣಗಳನ್ನು ಪೊಲೀಸರು ಕೆಲವೇ ದಿನಗಳಲ್ಲಿ ಭೇದಿಸುತ್ತಾರೆ. ಆದರೆ ಕಲಬುರ್ಗಿ ಅವರ ಹತ್ಯೆಯಾಗಿ 3 ವರ್ಷವಾಗುತ್ತ ಬಂದರೂ ಹಂತಕರನ್ನು ಪತ್ತೆ ಹಚ್ಚದಿರುವುದು ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯ ವೈಫಲ್ಯ, ದೌರ್ಬಲ್ಯಕ್ಕೆ ಸಾಕ್ಷಿ. ಈ ಬಗ್ಗೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಛಾಟಿ ಬೀಸಿದೆ. ಹಂತಕರಿಗೆ ಶಿಕ್ಷೆಯಾಗಬೇಕು ಎಂದು ಸಾಹಿತ್ಯ ವಲಯ ಆಶಿಸುತ್ತಿದೆ. ಇನ್ನಾದರೂ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದರು.