Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಸಂಭ್ರಮದ ರೇವಣ ಸಿದ್ದೇಶ್ವರಸ್ವಾಮಿ ಅಗ್ನಿಕೊಂಡ

Wednesday, 11.07.2018, 3:37 AM       No Comments

ರಾಮನಗರ: ಶೆಟ್ಟಿಹಳ್ಳಿ ಬೀದಿಯಲ್ಲಿರುವ ರೇವಣ ಸಿದ್ದೇಶ್ವರಸ್ವಾಮಿ ಅಗ್ನಿಕೊಂಡ ಮಹೋತ್ಸವ ಮಂಗಳವಾರ ಸಡಗರದಿಂದ ನೆರವೇರಿತು.

ಬೆಳಗ್ಗೆ 4 ಗಂಟೆಗೆ ಕರಗದ ಆಚರಣೆಗೆ ಚಾಲನೆ ನೀಡಲಾಯಿತು. ಕೈಯಲ್ಲಿ ದೇವರ ಹಲಗೆ ಹೊತ್ತ ಪ್ರಧಾನ ಆರ್ಚಕ ರೇಣುಕಾ ಪ್ರಸಾದ್ ಶೆಟ್ಟಿಹಳ್ಳಿ, ಕಾಯಿಸಪ್ಪನ ಬಡಾವಣೆಗಳಲ್ಲಿ ಸಂಚರಿಸಿ ಬೆಳಗ್ಗೆ 9ಕ್ಕೆ ಅಗ್ನಿಕೊಂಡ ಪ್ರವೇಶಿಸಿದರು. ನಂತರ ಭಕ್ತರು ಕೊಂಡಕ್ಕೆ ಉಪ್ಪು, ಎಳ್ಳು ಸಮರ್ಪಿಸಿದರು. ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಅಗ್ನಿಕೊಂಡ ಮಹೋತ್ಸವದಲ್ಲಿ ರಾಯರದೊಡ್ಡಿ, ಗೋಪಾಲಪುರ, ರಾಂಪುರ, ವಡೇರಹಳ್ಳಿ, ಕೊತ್ತೀಪುರ, ಬಾಲಗೇರಿ ಮುಂತಾದೆಡೆಯ ಭಕ್ತರು ಭಾಗವಹಿಸಿದ್ದರು.

ಕರಗ ಸಂಚರಿಸುವ ರಸ್ತೆಯಲೆಲ್ಲ ಹೂವಿನ ಅಲಂಕಾರ ಮಾಡಲಾಗಿತ್ತು. ಅಗ್ನಿಕೊಂಡ ಪ್ರವೇಶ ನಂತರ ದೇವಾಲಯ ಆವರಣದಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು. ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.

 

Leave a Reply

Your email address will not be published. Required fields are marked *

Back To Top