ಬೆಳಗಾವಿ: ಅನಗೋಳ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಭ್ರಮದಿಂದ ಜರುಗಿದವು.
ಶ್ರೀಜಗದ್ಗುರು ಮೌನೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ 31ನೇ ವರ್ಷದ ಜಯಂತ್ಯುತ್ಸವದ ನಿಮಿತ್ತ ಭಾನುವಾರ ಬೆಳಗ್ಗೆ 7ಗಂಟೆಗೆ ಶ್ರೀ ಮೌನಪ್ರಭುಗಳನ್ನು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ ಜರುಗಿತು.
ನಂತರ ಉಪನಯನ ಕಾರ್ಯಕ್ರಮ, ಪುರವಂತರ ಸೇವೆ ಹಾಗೂ ಪಲ್ಲಕ್ಕಿ ಉತ್ಸವದ ಸೇವೆಯು ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು. ಕಲ್ಲೋಳಿಯ ಶ್ರೀರಾಮಲಿಂಗೇಶ್ವರ ಸಂಬಾಳ ಹಾಗೂ ಕರಡಿ ಮಜಲು ಕಣ್ಮನ ಸೆಳೆಯಿತು. ನಂತರ ಸದ್ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಶ್ರೀಜಗದ್ಗುರು ಮೌನ ಪ್ರಭುಗಳನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡು ಹಾಡುವ ಮೂಲಕ ಮುತ್ತೈದೆಯರಾದ ಮಂಗಲಾ ಬಡಿಗೇರ, ಶಶಿಕಲಾ ರಥಕಾರ, ಪ್ರೇಮಾ ಮುನವಳ್ಳಿ, ರಾಧಾ ಮುನವಳ್ಳಿ, ಭಾರತಿ ಬಡಿಗೇರ, ಸ್ನೇಹಾ ಸುತಾರ, ಸರೀತಾ ಕಡ್ಲಸ್ಕಾರ, ಶೈಲಜಾ ಪಂಡಿತ, ಆರತಿ ಬಡಿಗೇರ, ಶಾಂತಾ ಬಡಿಗೇರ, ಲಕ್ಷ್ಮೀ ಮೋಹನ ಬಡಿಗೇರ, ಪದ್ಮಾ ಪಂಡಿತ, ಜ್ಯೋತಿ ಸುನೀಲ್ ಸುತಾರ, ರೇವತಿ ಸುತಾರ, ಅಂಜು ಪತ್ತಾರ, ಸುಷ್ಮಾ ಸುತಾರ, ಅನ್ನವ್ವ ಬಡಿಗೇರ, ದಾಕ್ಷಾಯಿಣಿ ಸುತಾರ, ರತ್ನಾ ಬಡಿಗೇರ ತೊಟ್ಟಿಲು ತೂಗಿದರು.
ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಿದ್ಧಾರ್ಥ ಸುತಾರ, ಉಪಾಧ್ಯಕ್ಷ ಪ್ರಶಾಂತ ಮುನವಳ್ಳಿ, ಖಜಾಂಚಿ ಮೌನೇಶ ಪಂಡಿತ, ಉಪ-ಖಜಾಂಚಿ ಸಂಜಯ ಕಡ್ಲಾಸ್ಕರ, ಕಾರ್ಯದರ್ಶಿ ವಿನಾಯಕ ರಥಕಾರ, ಉಪ ಕಾರ್ಯದರ್ಶಿ ಪ್ರಶಾಂತ ಸುತಾರ, ಸದಸ್ಯರಾದ ನಿರಂಜನ ಬಡಿಗೇರ, ಆನಂದ ರಥಕಾರ, ಚಂದ್ರಕಾತ ಬಡಿಗೇರ, ಪ್ರಶಾಂತ ಸುತಾರ, ಮಂಜುನಾಥ ಸುತಾರ, ಗಂಗಾಧರ ಬಡಿಗೇರ, ರಾಜು ಸುತಾರ, ಮಂಜುನಾಥ ಬಡಿಗೇರ, ಶಂಕರ ರಥಕಾರ, ಮಂಜುನಾಥ ಬಡಿಗೇರ, ಹಿರಿಯ ಸಲಹಾ ಮಂಡಳಿ ಸದಸ್ಯರಾದ ಮೋಹನ ಬಡಿಗೇರ, ಶಶಿಕಾಂತ ಪಂಡಿತ, ಪ್ರಭಾಕರ ರಥಕಾರ, ರವಿಕಾಂತ ಪಂಡಿತ, ರಮೇಶ ಮುನವಳ್ಳಿ, ಹೇಮಂತ ಅಂಬೇವಾಡಿಕರ, ಶ್ರೀಕಾಂತ ಪಂಡಿತ, ಬಸವರಾಜ ಪತ್ತಾರ, ಚಿದಾನಂದ ಬಡಿಗೇರ, ಅರುಣ ಬಡಿಗೇರ, ಅನೀಲ ಸುತಾರ, ರಾಘವೇಂದ್ರ ಸುತಾರ, ಓಂಕಾರ ಬಡಿಗೇರ, ಗಂಗಾಧರ ಪಂಡಿತ, ಶುಭಂ ಪಂಡಿತ, ಪವನ ಸುತಾರ, ಭೂಷಣ ಪತ್ತಾರ, ರಾಜು ಸುತಾರ, ಬಸವರಾಜ ಬಡಿಗೇರ, ಮೌನೇಶ ಬಡಿಗೇರ, ಸೇರಿ ಭಕ್ತಾದಿಗಳು ಪಾಲ್ಗೊಂಡಿದ್ದರು.