ಸಂಭ್ರಮದ ಫಕೀರೇಶ್ವರರ ರಥೋತ್ಸವ

ಸಂಶಿ: ನಾಡಿನಾದ್ಯಂತ ಭಾವೈಕ್ಯತೆಯ ಸಂದೇಶ ಸಾರುತ್ತಿರುವ ಗ್ರಾಮದ ಶ್ರೀ ಜಗದ್ಗುರು ಫಕೀರೇಶ್ವರರ ಮಹಾರಥೋತ್ಸವವು ಸಾವಿರಾರು ಭಕ್ತರ ಸಮ್ಮುಖ ಸೋಮವಾರ ಅದ್ದೂರಿಯಾಗಿ ಜರುಗಿತು.

ಶ್ರೀಮಠದ 13ನೇ ಪೀಠಾಧ್ಯಕ್ಷರಾದ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಗ್ರಾಮದ ಹಿರಿಯರೊಂದಿಗೆ ರಥೋತ್ಸವವನ್ನು ಐದು ಸುತ್ತು ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ತೆಂಗಿನ ಕಾಯಿ ಒಡೆಯುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವ ಮುಂದೆ ಸಾಗುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಹರಹರ ಮಹಾದೇವ, ಜಗದ್ಗುರು ಫಕೀರೇಶ್ವರ ಮಹಾರಾಜ ಕೀ, ಫಕೀರ ಸ್ವಾಮಿಕೀ ದೋಸ್ತರಾ ಹೋದೀನ್ ಎಂಬ ಘೊಷಣೆಗಳನ್ನು ಕೂಗಿದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣು ಎಸೆದು ತಮ್ಮ ಮನೋಕಾಮನೆಗಳನ್ನು ಈಡೇರಿಸá-ವಂತೆ ದೇವರಲ್ಲಿ ಬೇಡಿಕೊಂಡು ಭಕ್ತಿ ಸಮರ್ಪಿಸಿದರು.

ಆನೆ, ಕುದುರೆ, ನಗಾರಿ, ಜಾಂಜ್ ಮೇಳ ಮತ್ತಿತರ ವಾದ್ಯಗಳು ರಥೋತ್ಸವಕ್ಕೆ ಮೆರಗು ನೀಡಿದವು. ಶ್ರೀಮಠದಿಂದ ಪೇಟೆ ಮಾರ್ಗವಾಗಿ ಭರಮದೇವರ ದೇವಸ್ಥಾನದವರೆಗೆ ಸಂಚರಿಸಿದ ರಥೋತ್ಸವ ಮೂಲ ಸ್ಥಳಕ್ಕಾಗಮಿಸಿ ಸಂಪನ್ನಗೊಂಡಿತು.

ರಥೋತ್ಸವಕ್ಕೂ ಮುನ್ನ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಕ್ತರ ಮನೆಯಲ್ಲಿ ಬಿನ್ನಹ ಮಾಡಿಕೊಂಡು ಮೆರವಣಿಗೆ ಮೂಲಕ ಶ್ರೀ ಮಠಕ್ಕೆ ಆಗಮಿಸಿತು.

ರಥೋತ್ಸವದಲ್ಲಿ ಕುಂದಗೋಳದ ಬಸವಣ್ಣಜ್ಜ ಗ್ರಾಮ ಹಾಗೂ ಸುತ್ತಮá-ತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.