More

  ಸಂಭ್ರಮದಿಂದ ನಡೆಸಿ ಸ್ವಾತಂತ್ರೃ ಅಮೃತೋತ್ಸವ

  ಯಾದಗಿರಿ: ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜನತೆ ಸ್ವಾತಂತ್ರ್ಯ ದಿನವನ್ನು ಹಬ್ಬದಂತೆ ಆಚರಿಸುವಂತೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಕರೆ ನೀಡಿದ್ದಾರೆ.
  ಭಾನುವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದಿದ್ದ ಮನೆ ಮನೆಯಲ್ಲೂ ತಿರಂಗಾ ಅಭಿಯಾನದ ಸಭೆಯಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷದ ಸಂಭ್ರಮದಲ್ಲಿ ಭಾರತೀಯರಿದ್ದಾರೆ. ಹೀಗಾಗಿ ಜನತೆ ಸ್ವಾತಂತ್ರ ದಿನವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಬೇಕು. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ತಿರಂಗಾ ಹಾರಿಸಬೇಕು ಎಂದು ಕೋರಿದರು.

  13ರಂದು ಬೆಳಗ್ಗೆ 10ಕ್ಕೆ ಮೈಲಾಪುರ ಅಗಸಿಯಿಂದ ಬೈಕ್ ಜಾಥಾಕ್ಕೆ ಜಾಲನೆ ನೀಡಲಾಗುವುದು. ಈ ಜಾಥಾ ಪ್ರತಿ ವಾಡರ್್ನಲ್ಲಿ ಸಂಚರಿಸಿ ತ್ರಿವರ್ಣ ಧ್ವಜದ ಬಗ್ಗೆ ಜಾಗೃತಿ ಮೂಡಿಸಲಿದೆ. ಯುವ ಮೋಚರ್ಾ ಕಾರ್ಯಕರ್ತರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.

  ಯಾದಗಿರಿ ಮತಕ್ಷೇತ್ರದ ಪ್ರತಿ ಬೂತ್ಗೆ 100 ರಾಷ್ಟ್ರಧ್ವಜ ವಿತರಿಸಲಾಗುವುದು. 20 ಸಾವಿರಕ್ಕೂ ಹೆಚ್ಚು ತ್ರಿವರ್ಣ ಧ್ವಜ ವಿತರಣೆ ಮಾಡಲಾಗುವುದು. ಜಿಲ್ಲೆಯ ಪ್ರತಿಯೊಬ್ಬರೂ ಅವರವರ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

  ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಗುವುದು. ದೇಶದಲ್ಲಿ 30 ಕೋಟಿ ಮನೆ ಮೇಲೆ ಧ್ವಜ ರಾರಾಜಿಸಬೇಕು ಎಂಬ ಕನಸು ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿ ಜಾಗೃತವಾಗಲಿ ಎಂಬ ಉದ್ದೇಶ ಪ್ರಧಾನಿ ಹೊಂದಿದ್ದಾರೆ ಎಂದರು.

  ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಯುಡಾ ಅಧ್ಯಕ್ಷ ರುದ್ರಗೌಡ ಪಾಟೀಲ್, ಬಿಜೆಪಿ ಪ್ರಧಾನ ಕಾರ್ಯದಶರ್ಿ ಗುರು ಕಾಮಾ, ಪ್ರಮುಖರಾದ ವೆಂಕಟರಡ್ಡಿ ಅಬ್ಬೆತುಮಕೂರು, ಮಹೇಶರಡ್ಡಿ ಮುದ್ನಾಳ್, ಸಿದ್ದನಗೌಡ ಕಾಡಂನೋರ್, ಖಂಡಪ್ಪ ದಾಸನ್, ಸ್ವಾಮಿದೇವ ದಾಸನಕೇರಿ, ಹಣಮಂತ ಇಟಗಿ, ವಿಲಾಸ ಪಾಟೀಲ್, ಚಂದ್ರಕಾಂತ ಮಡ್ಡಿ ಇದ್ದರು.

  See also  ಕೂಡಲೇ ಜಮೀನು ಗುರುತಿಸಲು ಮುಂದಾಗಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts