ಸಂಡೂರು: ಪಂಚನಾಮೆ ವೇಳೆ ಪೇದೆ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಅತ್ಯಾಚಾರ ಆರೋಪಿಗೆ ಪೊಲೀಸರು ಗುಂಡು ಹೊಡೆದ ಘಟನೆ ಗುರುವಾರ ನಡೆದಿದೆ.
ವಿಜಯನಗರ ಜಿಲ್ಲೆಯ ಹಳ್ಳೇಬೀಡು ನಿವಾಸಿ ಮಂಜುನಾಥ (26) ಬಂಧಿತ. ಇತ್ತೀಚೆಗೆ ಬಿಹಾರ್ ಮೂಲದ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ, ಆರೋಪಿಯನ್ನು ಬುಧವಾರ ಕೊಪ್ಪಳದ ಹುಲಿಗಿಯಲ್ಲಿ ಬಂಧಿಸಿ ತೋರಣಗಲ್‌ಗೆ ಕರೆತಂದಿದ್ದರು. ಗುರುವಾರ ಬೆಳಗ್ಗೆ ಆತನನ್ನು ಘಟನಾ ಸ್ಥಳಕ್ಕೆ ಪಂಚನಾಮೆ ಮಾಡಲು ಕರೆದೊಯ್ಯಲಾಗಿತ್ತು. ಈ ವೇಳೆ ಪೇದೆ ರಘುಪತಿ ಮೇಲೆ ಆರೋಪಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಆಗ ಆರೋಪಿ ಮೊಣಕಾಲಿಗೆ ಪಿಎಸ್‌ಐ ಧಾಕೇಶ್ ಗುಂಡು ಹಾರಿಸಿದ್ದಾರೆ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.