ಬಾಗಲಕೋಟೆ: ಜಿಲ್ಲೆಯ ವಿವಿಧ ನಗರದ ಒಟ್ಟು ೨೨ ಸ್ಥಳಗಳಲ್ಲಿ ಈಗಾಗಲೇ ಎಎನ್‌ಪಿ ಆರ್ ಕ್ಯಾಮರಾ ಅಳವಡಿಸಲಾಗಿದ್ದು, ಇನ್ನು ಮುಂದೆ ಹೆಲ್ಮೆಟ್ ಧರಿಸದೇ, ಮೊಬೈಲ್ ಬಳಸುತ್ತ ವಾಹನ ಚಾಲನೆ, ಟ್ರಿಪಲ್ ರೈಡಿಂಗ್ ಸೇರಿದಂತೆ ಇನ್ನಿತರ ಸಂಚಾರಿ ನಿಯಮ ಪಾಲಿಸದಿದ್ದಲ್ಲಿ ನೇರವಾಗಿ ಅಂತವರ ಮನೆಗಳಿಗೆ ದಂಡ ಕಟ್ಟುವಂತೆ ನೋಟಿಸ್ ಕಳಿಹಿಸಲಾಗುತ್ತದೆ ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ. ಹೇಳಿದರು.
ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ರೀತಿಯ ರಸ್ತೆ ಅಪಘಾತಗಳಾದರೂ, ಅದಕ್ಕೆ ನಾವೂ, ನೀವುಗಳೆಲ್ಲ ಸೇರಿ ಸಮಾನರಾಗಿ ಕಾರಣರಾಗುತ್ತೇವೆ. ಆದ್ದರಿಂದ ರಸ್ತೆ ಸುರಕ್ಷತೆಗೆ ಅಽಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದರು.
ಅಲ್ಲದೇ, ಶಾಲಾ ಸಮಯಕ್ಕನುಗುಣವಾಗಿ ಬೆಳಗ್ಗೆ ಮತ್ತು ಸಂಜೆ ಬಸ್ ಸೌಲಭ್ಯ ಹೆಚ್ಚಿಸುವಂತೆ, ಹೆಚ್ಚಿನ ವಿದ್ಯಾರ್ಥಿಗಳ ಸಂಚಾರದ ಮಾರ್ಗಕ್ಕೆ ಬಸ್ ಸೌಲಭ್ಯ ಒದಗಿಸಬೇಕು ಮತ್ತು ಶಾಲಾ ಕಾಲೇಜುಗಳಲ್ಲಿ ರಸ್ತೆ ಸುರಕ್ಷತೆ, ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಸಂಬAಧಪಟ್ಟ ಅಽಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ್ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು ೫೮೭೮ ಕಿ.ಮೀ ರಸ್ತೆ ಇದ್ದು, ೫ ಲಕ್ಷ ಕ್ಕೂ ಹೆಚ್ಚಿನ ವಾಹನಗಳು ಸಂಚರಿಸುತ್ತಿವೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಮಟ್ಟದ ಎಚ್ಚರಿಕೆ ಕ್ರಮಗಳನ್ನ ವಹಿಸಿದ್ದರೂ ಕೂಡ ಕಳೆದ ವರ್ಷಕ್ಕಿಂತÀ ಹೆಚ್ಚಿನ ಅಪಘಾತಗಳು ಈ ವರ್ಷ ಸಂಭವಿಸಿದ್ದು, ಅದರಲ್ಲೂ ಪ್ರತಿಶತ ೯೫ ದ್ವಿಚಕ್ರ ವಾಹನಗಳೇ ಅಪಘಾತಕ್ಕಿಡಾಗಿರುವುದು ಕಂಡುಬAದಿದೆ. ಈ ಅಪಘಾತಳಿಗೆಲ್ಲ ಸಂಚಾರಿ ನಿಯಮ ಸರಿಯಾಗಿ ಪಾಲನೆ ಮಾಡದಿರುವುದೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ಇಳಿಕೆ ಮಾಡುವ ಉದ್ದೇಶದಿಂದ ಪದೇ ಪದೇ ಅಪಘಾತಗಳಾಗುತ್ತಿರುವ ಜಿಲ್ಲೆಯ ಒಟ್ಟು ೨೧ ಪ್ರಮುಖ ಸ್ಥಳಗಳನ್ನು ಬ್ಲಾಕ್ ಸ್ಪಾಟ್ ಗಳೆಂದು ಗುರುತಿಸಿಕೊಂಡಿದ್ದು, ಅವುಗಳನ್ನು ವೈಜ್ಞಾನಿಕವಾಗಿ ಸರಿಪಡಿಸಬೇಕಾಗಿರುತ್ತದೆ ಎಂದರು.
ಸಭೆಯಲ್ಲಿ ಅರಣ್ಯ ಸಂರಕ್ಷಣಾಽಕಾರಿ ರುಥ್ರೇಟ್ ಪಿ., ಬಾಗಲಕೋಟೆ ಉಪ ವಿಭಾಗಾಽಕಾರಿ ಸಂತೋಷ ಜಗಲಾಸರ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಎಸ್.ಕುಲಕರ್ಣಿ, ಡಿಡಿಪಿಐ ಐ.ಎಚ್.ಜಿ ಮಿರ್ಜಿ ಸೇರಿದಂತೆ ವಿವಿಧ ಇಲಾಖೆಗಳ ಅಽಕಾರಿಗಳು ಉಪಸ್ಥಿತರಿದ್ದರು.