More

  ಸಂಗೀತ ದಿನ ಆಚರಣೆ

  ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದೂಸ್ತಾನಿ ಸಂಗೀತ ವಿಭಾಗದಿಂದ ಇತ್ತೀಚೆಗೆ ವಿಶ್ವ ಸಂಗೀತ ದಿನವನ್ನು ಅದ್ದೂರಿಯಾಗಿ ಆಚರಿಸಿ, ಸಂಗೀತೋತ್ಸವನ್ನು ನಡೆಸಲಾಯಿತು.
  ಗುಲ್ಬರ್ಗ ವಿವಿ ಸಂಗೀತ ವಿಬಾಗದ ಪ್ರಾಧ್ಯಾಪಕಿ ಡಾ.ಸುನಂದಾ ಸಾಲ್ವಾಡಗಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಂಗೀತದಲ್ಲಿ ಸಾಧನೆ ಪ್ರಮುಖ ಎಂದರು.
  ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡ, ಡಾ.ಮುಖಿಮ್ ಮಿಯಾ, ಉಪನ್ಯಾಸಕರಾದ ಶಿವಲೀಲಾ ದೋತ್ರೆ, ಡಾ.ಶರಣಮ್ಮ ಕುಪ್ಪಿ, ಡಾ.ಮಮತಾ ಮೇಳಕುಂದಿ ಇತರರಿದ್ದರು.
  ವಿಂದ್ಯಶ್ರೀ, ಸಾಕ್ಷಿತಾ, ಮಮತಾ ಹಾಗೂ ವಾರಿಧಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಉಪಪ್ರಚಾರ್ಯೆ ಡಾ.ವೀಣಾ ವಚನ ಗಾಯನ ನಡೆಸಿದರು. ಡಾ.ರೇಣುಕಾ ಹಾಗರಗುಂಡಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಾಕ್ಷಿತಾ ಅತಿಥಿ ಪರಿಚಯ ಮಾಡಿದರು. ಸುಶ್ಮಿತಾ ನಿರೂಪಣೆ ಮಾಡಿದರು. ಮಮತಾ ವಂದಿಸಿದರು.

  See also  ಹಾಲು ಒಕ್ಕೂಟದ ಸವಲತ್ತು ಪಡೆಯಿರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts