More

  ಸಂಗೀತೋತ್ಸವ ಜು.11ರಂದು

  ಕಲಬುರಗಿ: ಅಫಜಲಪುರ ತಾಲೂಕಿನ ಅವರಳ್ಳಿ ಗ್ರಾಮದ ಪಂಡಿತ ಪುಟ್ಟರಾಜ ಗವಾಯಿ ಸಮಗ್ರ ಸೇವಾ ಚಾರಿಟೇಬಲ್ ಟ್ರಸ್ಟ್ನಿಂದ ಜುಲೈ ೧೧ರಂದು ಗಾನಯೋಗಿ ಪಂ.ಪುಟ್ಟರಾಜ ಕವಿ ಗವಾಯಿಗಳವರ ೧೧೦ನೇ ಜಯಂತ್ಯುತ್ಸವ ಪ್ರಯುಕ್ತ ಸಂಗೀತೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಸಿದ್ದಾರೂಢ ಅವರಳ್ಳಿ ತಿಳಿಸಿದರು.

  ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಬೆಳಗ್ಗೆ ೧೧.೩೦ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಸಾಮವೇದ ಸಾಮ್ರಾಟ ಪುಟ್ಟರಾಜಶ್ರೀ ರಾಷ್ಟಿçÃಯ ಪ್ರಶಸ್ತಿ ಪ್ರದಾನ, ಗಾನಯೋಗಿ ಗುರುಪುಟ್ಟರಾಜ ಮಾಸಿಕ ಸಂಗೀತ ಸಾಹಿತ್ಯ ಲಹರಿ ಉದ್ಘಾಟಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ಬೆಳಗ್ಗೆ ೧೧ಕ್ಕೆ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯದಲ್ಲಿ ಜಿಪಂ ಮಾಜಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ್ ಉದ್ಘಾಟಿಸುವರು. ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಜ್ಯೋತಿ ಬೆಳಗಿಸಲಿದ್ದಾರೆ. ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ ಅಧ್ಯಕ್ಷತೆ ವಹಿಸಲಿದ್ದಾರೆ. ತಾಪಂ ಮಾಜಿ ಸದಸ್ಯ ರಾಜುಗೌಡ ಪೊಲೀಸ್ ಪಾಟೀಲ್ ಪೋಟೊ ಪೂಜೆ ಸಲ್ಲಿಸುವರು. ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ದಿಲೀಪ್ ಆರ್.ಪಾಟೀಲ್, ಜಿಪಂ ಮಾಜಿ ವಿಪಕ್ಷ ನಾಯಕ ಶಿವಾನಂದ ಪಾಟೀಲ್, ಹೈಕೋರ್ಟ್ನ ಹೆಚ್ಚುವರಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಸಿದ್ಧಲಿಂಗ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು.

  ಉದ್ಘಾಟನೆ ನಂತರ ರಾಜ್ಯದ ಖ್ಯಾತ ಕಲಾವಿದರಿಂದ ಸಂಗೀತೋತ್ಸವ ನಡೆಯಲಿದೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ, ಸನ್ಮಾನ ಮಾಡಲಾಗುವುದು ಎಂದು ವಿವರಿಸಿದರು. ಸುನೀತಾ ತಳವಾರ, ಶಾಂತವೀರ, ಶ್ರೀನಿವಾಸ ಇತರರಿದ್ದರು.

  See also  ಕೋಲಿ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ : ಡಾ.ಮಲ್ಲಿಕಾರ್ಜುನ ಮುಕ್ಕಾ ಸಲಹೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts