Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಸಂಕಷ್ಟಕರ ಶ್ರುತಿ ಲಿಖಿತ್

Tuesday, 01.08.2017, 3:00 AM       No Comments

ಬೆಂಗಳೂರು: ‘ಪನ್ಮಂಡ್ರಿ ಕ್ರಾಸ್’ ಕಿರುಚಿತ್ರದ ಮೂಲಕ ಸೈಮಾ ಪ್ರಶಸ್ತಿ (ಅತ್ಯುತ್ತಮ ನಿರ್ದೇಶನ) ಗಿಟ್ಟಿಸಿಕೊಂಡಿರುವ ಅರ್ಜುನ್ ಈಗ ‘ಸಂಕಷ್ಟಕರ ಗಣಪತಿ’ ಎಂಬ ಪೂರ್ಣಾವಧಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ನಾಯಕನಾಗಿ ಲಿಖಿತ್ ಶೆಟ್ಟಿ ಅಭಿನಯಿಸುತ್ತಿದ್ದರೆ ಅವರಿಗೆ ಜೋಡಿಯಾಗಿ ನವನಟಿ ಶ್ರುತಿ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ.

ಮೂಲತಃ ಗುಜರಾತಿನ ವರಾದರೂ ಚಿಟಪಟ ಅಂತ ಕನ್ನಡ ಮಾತನಾಡುವುದು ಶ್ರುತಿ ವಿಶೇಷತೆ. ಹಾಗಾಗಿ ಅವರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ‘ಆಡಿಷನ್​ನಲ್ಲಿ ಒಂದು ಎಮೋಷನಲ್ ದೃಶ್ಯಕ್ಕೆ ಅಭಿನಯಿಸುವಂತೆ ಹೇಳಿದ್ದೆವು. ಉದ್ದದ ಡೈಲಾಗ್ ಇದ್ದರೂ ತುಂಬ ಚೆನ್ನಾಗಿ ನಟಿಸಿದರು’ ಎಂದು ಶ್ರುತಿ ಪ್ರತಿಭೆ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ ನಿರ್ದೇಶಕರು. ಕಾಪೋರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶ್ರುತಿ ಈ ಸಿನಿಮಾಗಾಗಿ ಮೂರು ತಿಂಗಳು ರಜೆ ಪಡೆದು ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರಂತೆ. ಈ ಹಿಂದೆ ಕಿರುತೆರೆಯಲ್ಲಿ ನಿರೂಪಕನಾಗಿ ಕೆಲಸ ಮಾಡಿರುವ ಲಿಖಿತ್ ಇದೇ ಮೊದಲ ಬಾರಿಗೆ ‘ಸಂಕಷ್ಟಕರ..’ ಮೂಲಕ ಸೋಲೋ ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರೆ.

‘ಸಂಕಷ್ಟಹರ’ ಎನ್ನುವುದು ಸಹಜ. ಆದರೆ ಇದೇನಿದು ಸಂಕಷ್ಟ‘ಕರ’? ‘ಗಣಪತಿ ಎಂಬ ಕಥಾನಾಯಕ ವ್ಯಂಗ್ಯಚಿತ್ರಕಾರ ಆಗಿರುತ್ತಾನೆ. ಆದರೆ ಆತನಿಗೆ ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ಕಾಯಿಲೆ ಬರುತ್ತದೆ. ಅಂದರೆ ಎಡಗೈ ಮೇಲೆ ಸಂಪೂರ್ಣ ನಿಯಂತ್ರಣ ತಪ್ಪಿಹೋಗುವುದು. ಈ ಕೈ (ಕರ) ಸಮಸ್ಯೆಯು ನಾಯಕನ ಬದುಕಿನಲ್ಲಿ ಏನೆಲ್ಲ ತಿರುವುಗಳಿಗೆ ಕಾರಣವಾಗುತ್ತದೆ ಎಂಬುದೇ ಕಥಾ ಸಾರಾಂಶ. ಹಾಗಾಗಿ ಸಂಕಷ್ಟ‘ಕರ’ ಗಣಪತಿ ಎಂದು ಹೆಸರಿಟ್ಟಿದ್ದೇವೆ’ ಎನ್ನುತ್ತಿದೆ ಚಿತ್ರತಂಡ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ವೇಳೆಗೆ ಚಿತ್ರ ತೆರೆ ಕಾಣಲಿದೆ.

Leave a Reply

Your email address will not be published. Required fields are marked *

Back To Top