ಸಂಕಟ ಬಿಟ್ಟು ಸಂತಸದತ್ತ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಎಸ್ಎಸ್ಎಲ್ಸಿ ಮತ್ತು ಪದವಿಪೂರ್ವ ಕಾಲೇಜಿನ ವಾರ್ಷಿಕ ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ಗೊಂದಲದಲ್ಲಿದ್ದ ವಿದ್ಯಾರ್ಥಿ ಸಮುದಾಯಕ್ಕೆ ಅನೇಕ ಟಿಪ್ಸ್ಗಳನ್ನು ನೀಡುವ ಮೂಲಕ ಅವರ ಮನೋಬಲ ಹೆಚ್ಚಿಸುವ ಅಪರೂಪದ ಕಾರ್ಯಕ್ರಮಕ್ಕೆ ಸೋಮವಾರ ಎಚ್ಕೆಸಿಸಿಐ ಸಭಾಂಗಣ ಸಾಕ್ಷಿಯಾಯಿತು.
ನಾಡಿನ ನಂ. 1ಕನ್ನಡ ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ಚಾನಲ್, ಪವರ್ ನ್ಯೂಸ್ ಮತ್ತು ಹೈದರಾಬಾದ್-ಕರ್ನಾಟಕ ವಾಣಿಜ್ಯ ಮಂಡಳಿ ಆಶ್ರಯದಲ್ಲಿ ಇಂಥದೊಂದು ಕಾರ್ಯಕ್ರಮವನ್ನು ಮನೋವೈದ್ಯ ಡಾ. ಸಿ. ಆರ್. ಚಂದ್ರಶೇಖರ ನಡೆಸಿಕೊಡುವ ಮೂಲಕ ವಿದ್ಯಾಥರ್ಿ ಸಮುದಾಯದಲ್ಲಿದ್ದ ಅನೇಕ ತುಮುಲುಗಳನ್ನು ಹೋಗಲಾಡಿಸಿದರು.
ಪರೀಕ್ಷೆ ಎದುರಿಸುವ ಬಗೆಯ ಕುರಿತು ಇದ್ದ ಅನುಮಾನಗಳನ್ನು ನಿವಾರಿಸಿಕೊಂಡ ವಿದ್ಯಾರ್ಥಿಗಳು ಸೆಲೆಬಸ್ ಓದುವ ಬಗೆ ಹೇಗೆ?ಓದುವ ವಿಧಾನ ಮತ್ತು ಸಮಯ ನಿರ್ವಹಣೆ ಮಾಡಿಕೊಳ್ಳುವುದು ಹೇಗೆ ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು.
ಪರೀಕ್ಷೆ ಕುರಿತು ಅನುಮಾನ, ಗೊಂದಲ, ಭಯ, ಆತಂಕಗಳ ಮೂಟೆ ಹೊತ್ತು ಬಂದಿದ್ದ ವಿದ್ಯಾಥರ್ಿ ಸಮುದಾಯಕ್ಕೆ ಡಾ.ಸಿ.ಆರ್. ಚಂದ್ರಶೇಖರ ಸಮಾಧಾನದ ಮಾತುಗಳು, ಓದುವ ವಿಧಾನಕ್ಕೆ ನೀಡಿದ ಸರಳ ಸೂತ್ರಗಳು, ಸಮಯ ನಿರ್ವಹಣೆ ಕುರಿತ ತಂತ್ರಗಳು ದಿವ್ಯ ಔಷಧಿಯಂತೆ ಕೆಲಸ ಮಾಡಿದವು.
ಪರೀಕ್ಷೆ ಎಂಬುದು ಸಂಕಟವೆಂದು ಭಾವಿಸಿದ್ದ ವಿದ್ಯಾಥರ್ಿಗಳಿಗೆ ಪರೀಕ್ಷೆ ಭೂತವಲ್ಲ, ರಾಕ್ಷಸನಲ್ಲ, ಅಪಾಯಕಾರಿ ಅಲ್ಲವೇ ಅಲ್ಲ. ಶ್ರದ್ಧೆಯಿಂದ ಓದಿ, ಓದಿದ್ದನ್ನು ಬರೆದು, ಬರೆದಿದ್ದನ್ನು ಮನನ ಮಾಡಿಕೊಂಡು, ನೆನಪಿನಿಂದ ಬರೆದರೆ ಪರೀಕ್ಷೆಯು ಸಂತಸವಾಗಿ ಪರಿಣಮಿಸುತ್ತದೆ. ಪರೀಕ್ಷೆಯನ್ನು ಸಂಭ್ರಮದಿಂದ ಎದುರು ನೋಡಿ, ಹಬ್ಬದಂತೆ ಅದನ್ನು ಆಚರಿಸಬೇಕು ಎಂದು ಡಾ.ಚಂದ್ರಶೇಖರ ವಿದ್ಯಾಥರ್ಿಗಳಿಗೆ ಮನಮುಟ್ಟುವಂತೆ ಮಾಹಿತಿ ನೀಡಿದರು.
ಸಂವಾದಕ್ಕೆ ಸಾಕ್ಷಿಯಾದ ಶಿಕ್ಷಣ ಪ್ರೇಮಿಗಳು: ಸಂವಾದ ಸಮಾರಂಭದಲ್ಲಿ ಎಚ್ಕೆಸಿಸಿ ಉಪಾಧ್ಯಕ್ಷ ಶರಣು ಪಪ್ಫಾ, ಆನಂದ ದಂಡೋತಿ, ವೈದ್ಯಸಾಹಿತಿ ಡಾ.ಎಸ್.ಎಸ್.ಗುಬ್ಬಿ ಸದಾಶಯದ ಎಸ್.ಎಸ್.ಹಿರೇಮಠ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ, ವಿಶ್ವಜ್ಯೋತಿ ಪ್ರತಿಷ್ಠಾನದ ವಿಜಯ ಕುಮಾರ ತೇಗಲತಿಪ್ಪಿ, ಡಿ.ಎಂ.ಪಾಟೀಲ, ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಅಧ್ಯಕ್ಷ ಎಂ.ಬಿ.ಅಂಬಲಗಿ, ಡಾ.ಶಶಿಶೇಖರ ರೆಡ್ಡಿ, ಹಿರಿಯ ಪತ್ರಕರ್ತ ರಾಮಕೃಷ್ಣ ಬಡಶೇಷಿ ಇತರರು ಸಾಕ್ಷಿಯಾದರು. ವಿಜಯವಾಣಿ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಸಾಲಿಮಠ ನಿರೂಪಣೆ ಮಾಡಿದರು. ರಾಜಕುಮಾರ ಉದನೂರ ಪ್ರಾರ್ಥಿಸಿದರು.

ಪರೀಕ್ಷಾರ್ಥಿಗಳಿಗೆ ಪುಸ್ತಕ ದಾಸೋಹ: ಸಂವಾದ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಡಾ.ಸಿ.ಆರ್.ಚಂದ್ರಶೇಖರ ರಚಿಸಿದ ಓದುವ ಖುಷಿಯ ಪುಸ್ತಕ ಸಂಭ್ರಮ ಕೃತಿಯನ್ನು ವೈದ್ಯ ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಮತ್ತು ನಮ್ಮ ಹೋಮಿಯೋಪತಿ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಉಚಿತವಾಗಿ ನೀಡಲಾಯಿತು.