ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಲ್ಲಿ ಭಾನುವಾರ ನಡೆದ ಶ್ವಾನ ಪ್ರದರ್ಶನ ಶ್ವಾನಪ್ರಿಯರ ಗಮನ ಸೆಳೆಯಿತು.
ಬೆಸ್ಟ್ ಇಂಡಿಯನ್ ಬ್ರೀಡ್ ವಿಭಾಗದಲ್ಲಿ ಹಿರಿಯೂರಿನ ಮನೋಜ್ ಅವರ ಮುಧೋಳ ಪ್ರಥಮ, ಶಿವಮೊಗ್ಗದ ಕೆನತ್-ಹರ್ಷ ಅವರ ಕ್ಯಾರವನ್ ಹೌಂಡ್ ದ್ವಿತೀಯ ಬಹುಮಾನ ಮುಡಿಗೇರಿಸಿಕೊಂಡಿತು.
ಬೆಸ್ಟ್ ಇನ್ ಶೋನಲ್ಲಿ ಭದ್ರಾವತಿ ಪ್ರಕಾಶ್-ಜರ್ಮನ್ ಶೆಪರ್ಡ್ ಪ್ರಥಮ, ಚಿತ್ರದುರ್ಗದ ಶಶಿ-ರ‌್ಯಾಟ್ ವೀಲರ್ ದ್ವಿತೀಯ, ನಾಯಕನಹಟ್ಟಿ ಕಿರಣ್ ಮತ್ತು ಪ್ರಕಾಶ್-ಡಾಬರ್‌ಮನ್ ತೃತೀಯ, ಶಿವಮೊಗ್ಗದ ಕೆನತ್ ಮತ್ತು ಹರ್ಷ- ಕ್ಯಾರವನ್ ನಾಲ್ಕನೇ, ಚಿತ್ರದುರ್ಗದ ನಿವೇದಿತಾ ಶಿವಪ್ರಕಾಶ-ಗೋಲ್ಡನ್ ರಿಟ್ರೀವರ್-ಐದನೇ, ನಾಯಕನಹಟ್ಟಿಯ ಕಿರಣ್-ಬೀಗಲ್ ಆರನೇ, ತರಿಕೆರೆ ರಜತ್-ಡಾಷ್ ಹೌಂಡ್ ಏಳನೇ, ಮಂಗಳೂರಿನ ಅನುಷಾ-ಲಾಸಾ ಅಪ್ರೋ-ಎಂಟನೇ ಸ್ಥಾನ ಪಡೆದವು. ವಿಜೇತರಿಗೆ ಕ್ರಮವಾಗಿ 15, 12, 10, 8, 5, 4, 3, 2 ಸಾವಿರ ರೂ. ಬಹುಮಾನ ವಿತರಿಸಲಾಯಿತು. ಬೆಸ್ಟ್ ಹ್ಯಾಂಡಲರ್-ವಿಜಯಕುಮಾರ್, ಬೆಸ್ಟ್ ಜ್ಯೂನಿಯರ್ ಹ್ಯಾಂಡಲರ್ ಆಗಿ ಪೃಥ್ವಿರಾಜ್ ಹೊರಹೊಮ್ಮಿದರು.
ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ ಕಳಸದ, ಸದಸ್ಯರಾದ ಡಾ.ಬಸವಕುಮಾರ ಶ್ರೀ, ಚಂದ್ರಶೇಖರ್, ಬಸವ ಮಲ್ಲಿಕಾರ್ಜುನ ಶ್ರೀ, ಬಸವ ರಮಾನಂದ ಶ್ರೀ, ಡಾ.ಕುಮಾರ, ಡಾ.ಬಸವರಾಜ ಬೆಣ್ಣೆ, ಇಂದಿರಾಬಾಯಿ, ಡಾ.ಮುರುಗೇಶ್, ಮುಖ್ಯ ತೀರ್ಪುಗಾರ ಸತೀಶ್ ಇತರರಿದ್ದರು.