Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಶ್ವಾನಪ್ರಿಯೆ ಸಂಯುಕ್ತಾ

Wednesday, 12.09.2018, 2:00 AM       No Comments

ಬೆಂಗಳೂರು: ಕಿರಿಕ್ ಪಾರ್ಟಿ’ ಚಿತ್ರದಿಂದ ಏಕಾಏಕಿ ಖ್ಯಾತಿ ಗಿಟ್ಟಿಸಿದ ನಟಿ ಸಂಯುಕ್ತಾ ಹೆಗಡೆ, ಸಾಮಾಜಿಕ ಜಾಲತಾಣದಲ್ಲೂ ಅಷ್ಟೇ ಫೇಮಸ್. ಟಾಲಿವುಡ್​ಗೆ ‘ಕಿರಿಕ್ ಪಾರ್ಟಿ’ ರಿಮೇಕ್ ಆದಾಗ ಅದರಲ್ಲೂ ನಟಿಸಿ ತೆಲುಗು ಸಿನಿಪ್ರಿಯರಿಗೆ ಪರಿಚಿತವಾದರು. ‘ರೋಡಿಸ್’ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಮೂಲಕ ಹಿಂದಿ ಕಿರುತೆರೆ ಪ್ರೇಕ್ಷಕರನ್ನೂ ರಂಜಿಸಿದ್ದರು. ಈಗ ಸಂಯುಕ್ತಾ ಕಾಲಿವುಡ್ ಬಾಗಿಲು ತಟ್ಟಲು ಸಜ್ಜಾಗಿದ್ದಾರೆ. ಅದು ಕೂಡ ಒಂದು ವಿಶೇಷ ಕಥಾಹಂದರದ ಸಿನಿಮಾ ಮೂಲಕ. ಆ ಚಿತ್ರಕ್ಕೆ ‘ಪಪ್ಪಿ’ ಎಂದು ಶೀರ್ಷಿಕೆ ಇಡಲಾಗಿದ್ದು, ಸಂಯುಕ್ತಾ ಜತೆ ಹೊಸ ನಟ ವರುಣ್ ಬಣ್ಣ ಹಚ್ಚುತ್ತಿದ್ದಾರಂತೆ.

ಅಂದಹಾಗೆ, ಇದೊಂದು ಲವ್​ಸ್ಟೋರಿ ಸಿನಿಮಾ. ಅದರ ಜತೆಗೆ ನಾಯಿ ಬಗೆಗಿನ ಪ್ರೀತಿಯನ್ನೂ ತೋರಿಸಲಿದ್ದಾರಂತೆ ಹೊಸ ನಿರ್ದೇಶಕ ನಟ್ಟು ದೇವ್. ಈ ಹಿಂದೆ ಕೆಲವು ಕಿರುಚಿತ್ರಗಳಿಗೆ ನಿರ್ದೇಶನ ಮಾಡಿ, ನಟನೆಯಲ್ಲೂ ತೊಡಗಿಕೊಂಡು ಅನುಭವ

ಪಡೆದಿರುವ ದೇವ್​ಗೆ ‘ಪಪ್ಪಿ’ ಚೊಚ್ಚಲ ಪೂರ್ಣಾವಧಿ ಸಿನಿಮಾ ಆಗಲಿದೆ. ಈ ಚಿತ್ರದಲ್ಲಿ ಸಂಯುಕ್ತಾ ಶ್ವಾನಪ್ರಿಯೆಯಾಗಿ ಕಾಣಿಸಿಕೊಳ್ಳಲಿರುವುದು ವಿಶೇಷ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ ಬೆಳ್ಳಿಪರದೆ ಮೇಲೆ ಕಟ್ಟಿಕೊಡುವುದು ನಿರ್ದೇಶಕರ ಆಶಯ. ಹಾಗಾಗಿ ಚಿತ್ರದಲ್ಲಿ ಒಂದು ನಾಯಿ ಕೂಡ ಪ್ರಮುಖ ಪಾತ್ರ ವಹಿಸಲಿದೆಯಂತೆ. ಕನ್ನಡದಲ್ಲೂ ಇಂಥ ಪ್ರಯತ್ನಗಳು ನಡೆಯುತ್ತಿವೆ. ರಕ್ಷಿತ್ ಶೆಟ್ಟಿ ನಟಿಸುತ್ತಿರುವ ‘777 ಚಾರ್ಲಿ’, ಸಂಯುಕ್ತಾ ಹೊರನಾಡು ಮುಖ್ಯ ಭೂಮಿಕೆಯ ‘ನಾನು ಮತ್ತು ಗುಂಡ’ ಚಿತ್ರಗಳದ್ದು ಕೂಡ ನಾಯಿಗೆ ಸಂಬಂಧಿಸಿದ ಕಥೆಯೇ ಆಗಿರಲಿದೆ. ‘ಪಪ್ಪಿ’ ಜತೆಗೆ ಕನ್ನಡದ ‘ತುರ್ತ ನಿರ್ಗಮನ’ ಚಿತ್ರದಲ್ಲೂ ಸಂಯುಕ್ತಾ ಹೆಗಡೆ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top