More

  ಶ್ರೀ ಶನೈಶ್ಚರಸ್ವಾಮಿ ದೇಗುಲದಲ್ಲಿ ವಾರ್ಷಿಕ ಮಹೋತ್ಸವ ನಾಳೆ

  ತಿ.ನರಸೀಪುರ: ಪಟ್ಟಣದ ತ್ರಿವೇಣಿ ಸಂಗಮ ದಡದಲ್ಲಿರುವ ಶ್ರೀ ಬಳ್ಳೇಶ್ವರಸ್ವಾಮಿ ದೇವಾಲಯದಲ್ಲಿ ಶ್ರೀ ಶನೈಶ್ಚರಸ್ವಾಮಿ ದೇಗುಲದ ವಾರ್ಷಿಕ ಬಾದಾಮಿ ಅಮಾವಾಸ್ಯೆ ಕುಂಭಾಭಿಷೇಕ ಮಹೋತ್ಸವ ಮೇ 19ರಂದು ಏರ್ಪಡಿಸಲಾಗಿದೆ.


  ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಶ್ರೀ ಗಣಪತಿ ಹೋಮ, ಶ್ರೀ ಶನೈಶ್ಚರಸ್ವಾಮಿ ಹೋಮ, ನವಗ್ರಹ ಹೋಮ, ಶ್ರೀ ಶನೈಶ್ಚರ ಪ್ರಧಾನ ಪೂರ್ಣಾಹುತಿ, ಕುಂಭಾಭಿಷೇಕ, ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ.


  ಮಧ್ಯಾಹ್ನ 1 ಗಂಟೆಗೆ ಬದನವಾಳು ಬಿ.ಶಿವಕುಮಾರಶಾಸ್ತ್ರಿ ಅವರ ನಾದ ಸಂಗಮ ತಂಡದ ಸದಸ್ಯರಿಂದ ಶ್ರೀ ಶನೈಶ್ಚರಸ್ವಾಮಿ ಕಥೆ ಆಯೋಜಿಸಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts