More

  ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ ಮುಕ್ಕೋಟ ದ್ವಾದಶಿ ಪ್ರಯುಕ್ತ ವಿಶೇಷ ಪೂಜೆ

  ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ ಮುಕ್ಕೋಟ ದ್ವಾದಶಿ ಪ್ರಯುಕ್ತ ಬೆಳಗ್ಗೆ 5.30 ರಿಂದ ಪುಣ್ಯಹಂ, ಶ್ರೀ ಸ್ವಾಮಿಯ ಮೂರ್ತಿಗೆ ಪಂಚಾಮೃತ ಅಭಿಷೇಕ, ವೇದ ಪಾರಾಯಣ, ಸ್ತೋತ್ರಪಾಠ ಪಠಣ,ಮಹಾ ನಿವೇದನ ನಡೆಸಲಾಯಿತು.

  ನಂತರ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ದೇವಾಲಯದ ಆವರಣದಲ್ಲಿ ಪ್ರಕಾರೋತ್ಸವ ನಡೆಸಲಾಯಿತು. ತದಿಯಾರಾಧನೆ ಸೇವೆ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಅರ್ಚಕ ರಾಮಸ್ವಾಮಿಭಟ್ಟರ ನೇತೃತ್ವದಲ್ಲಿ ಪೋಜಾ ಕೈಂಕರ್ಯಗಳನ್ನು ನಡೆಸಲಾಯಿತು.

  ಪೂಜಾ ಕಾರ್ಯದಲ್ಲಿ ಡಾ. ಸೂರಜ್ ರೇವಣ್ಣ, ನಾರಾಯಣಭಟ್ಟ, ವೆಂಕಟ ನರಸಿಂಹನ್, ರಾಮ ಪ್ರಸನ್ನ, ವಲ್ಲಭ, ಸಿಂಹಾದ್ರಿ, ವೆಂಕಟೇಶ್, ಶಿವಕುಮಾರ್, ರಜನಿ ರಾಮಸ್ವಾಮಿ, ತೇಜಸ್ವಿನಿ, ರಾಜಲಕ್ಷ್ಮಿ, ರವಿಚಂದ್ರ, ರಾಧಮ್ಮ ಕೃಷ್ಣಯ್ಯಂಗಾರ್, ವಾಣಿ ಸುಂದರೇಶ್ ಹಾಗೂ ಇತರರು ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts