ಚಿತ್ರದುರ್ಗ: ಉಡುಪಿ ಅಮೋಘ ಸಾಂಸ್ಕೃತಿಕ-ಸಾಮಾಜಿಕ-ಸಾಹಿತ್ಯ ಸಂಸ್ಥೆಯ ಪ್ರತಿಷ್ಠಿತ ‘ಸಾಮರಸ್ಯ’ಪ್ರಶಸ್ತಿಗೆ ಚಿತ್ರದುರ್ಗದ ಶ್ರೀ ಶಿವಶರಣ ಮಾ ದಾರ ಚನ್ನಯ್ಯಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಅವರು ಭಾಜನರಾಗಿದ್ದಾರೆ. ಮೇ 24ರಂದು ಸಂಜೆ 4 ಕ್ಕೆ ಉಡುಪಿ ಎಂಜಿಎಂ ಕಾಲೇಜು ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಲಿದೆ.
ಸಂಶೋಧಕ ಡಾ.ಪಾದೇಕಲ್ಲು ವಿಷ್ಣುಭಟ್,ಮಣಿಪಾಲ ಮಾಹೆ ಉಪ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್,ಸಾಮಾಜಿಕ ಕಾರ‌್ಯಕ ರ್ತವಾದಿರಾಜ್,ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,ಎಂಜಿಎಂ ಕಾಲೇಜು ಪ್ರಾಚಾರ‌್ಯ ಪ್ರೊ.ಲಕ್ಷ್ಮೀನಾರಾಯ ಣಕಾರಂತ,ಲೇಖಕಿ ಪಾರ್ವತಿ ಬಿ.ಐತಾಳ್ ಇತರ ಗಣ್ಯರು ಉಪಸ್ಥಿತರಿರುವರು.
ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠವು ಹೆಸರಿಂದ ಜಾತಿ ಸೂಚಕವಾಗಿದ್ದರೂ ಪೀಠಾಧ್ಯಕ್ಷರಾದ ಡಾ.ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀಗಳು,ಸಮಾಜದ ಎಲ್ಲ ಜಾತಿ,ವರ್ಗಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಮಾಜದಲ್ಲಿರುವ ಮೇಲು -ಕೀಳು ಭಾವನೆಗಳು,ಮೂಢನಂಬಿಕೆ,ಕಂದಾಚಾರ,ಜಾತೀಯತೆ ನಿರ್ಮೂಲನೆಗೆ ಶ್ರಮಿಸುತ್ತಿದ್ದಾರೆ.
ಮಾನವ ಸಂಘ ಜೀವಿ,ಸಮಾಜದಲ್ಲಿ ಸಹಬಾಳ್ವೆ ನಡೆಸುವಾಗ ಎಲ್ಲ ಜಾತಿ ವರ್ಗಗಳ ಜನರು ಪರಸ್ಪರ ಹೊಂದಿಕೊಂಡು ಬಾಳಿದಾಗ ಮಾನವನ ಅಭ್ಯುದಯ ಸಾಧ್ಯವೆಂದು ಬಲವಾಗಿ ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಶ್ರೀಗಳ ಈ ಸಾಮಾಜಿಕ,ಸಾಮರಸ್ಯದ ನಿರಂತರ ಬದ್ಧತೆಯನ್ನು ಗುರುತಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

—