ಶನಿವಾರಸಂತೆ: ಸಮೀಪದ ನಂದಿಗುಂದ ಗ್ರಾಮದ ಶ್ರೀ ನಂಜುಂಡೇಶ್ವರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಕಾರ್ತಿಕ ಮಾಸದ ವಿಶೇಷ ಪೂಜೆ ಹಾಗೂ ದೇವರಿಗೆ ಬೆಳ್ಳಿ ಮುಖಭಾವ ಧಾರೆ ಕಾರ್ಯಕ್ರಮ ನೆರವೇರಿಸಲಾಯಿತು.
ಮುಂಜಾನೆ 4.30ರಿಂದ 6 ಗಂಟೆ ವರೆಗೆ ಗಂಗೆಪೂಜೆ ನೆರವೇರಿಸಲಾಯಿತು. ದೇವಸ್ಥಾನದಲ್ಲಿ ಬೆಳಗ್ಗೆ 7 ಗಂಟೆಗೆ ರುದ್ರಾಭಿಷೇಕ ನೆರವೇರಿಸಲಾಯಿತು. 11 ಗಂಟೆಯಿಂದ ದೇವಸ್ಥಾನದ ಗರ್ಭಗುಡಿಯಲ್ಲಿರುವ ದೇವರ ವಿಗ್ರಹಕ್ಕೆ ಬೆಳ್ಳಿ ಮುಖಭಾವ ಧಾರಣೆ ಮಾಡಲಾಯಿತು. ಬಳಿಕ ದೇವಸ್ಥಾನದ ಮುಂಭಾಗದಲ್ಲಿ ನವಗ್ರಹ ಪೂಜೆ ಹಾಗೂ ಶ್ರೀಗಣಪತಿ ಹೋಮ ನೆರವೇರಿಸಿದ ಬಳಿಕ ಮಹಾಪೂಜೆ, ಮಹಾಮಂಗಳಾರತಿ ಮುಂತಾದ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು.
ಮಧ್ಯಾಹ್ನ 12 ಗಂಟೆಗೆ ಧಾನಿ ಚಾಮೇರ ಪವನ್ ಅವರು ನಿರ್ಮಿಸಿರುವ ಶ್ರೀ ನಂಜುಂಡೇಶ್ವರ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಲಾಯಿತು. ಅರ್ಚಕರಾದ ನಂದೀಶ್, ರಾಜಶೇಖರ್, ರಾಜಪ್ಪ ತಂಡ ಪೀಜಾ ಕಾರ್ಯಕ್ರಮ ನೆರವೇರಿಸಿತು.