ಸುಂಟಿಕೊಪ್ಪ: ಇಲ್ಲಿನ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವಕ್ಕೆ ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ಶನಿವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.
ಶನಿವಾರ ಬೆಳಗ್ಗೆ 6.45 ಗಂಟೆಗೆ ಗಣಪತಿ ಹವನ 7.15 ಗಂಟೆಗೆ ಶುದ್ಧಿ ಪುಣ್ಯಾಹ ವಿಶೇಷ ಪೂಜೆಯನ್ನು ಶ್ರೀಚಾಮುಂಡೇಶ್ವರಿ ದೇವಾಲಯದ ಆರ್ಚಕ ಮಂಜುನಾಥ ಉಡುಪ ನೆರವೇರಿಸುವ ಮೂಲಕ 7.30 ಗಂಟೆಗೆ ಬಾವುಟ ಏರಿಸಿ ಚಾಲನೆ ನೀಡಿದರು.
ಸಂಜೆ 4 ಗಂಟೆಗೆ ಶ್ರೀಮುತ್ತಪ್ಪ ದೇವರ ಮಲೆ ಇಳಿಸುವಿಕೆ, ರಾತ್ರಿ 6 ಗಂಟೆಗೆ ಚಂಡೆಮೇಳ, 7. ಗಂಟೆಗೆ ಶ್ರೀಮುತ್ತಪ್ಪ ವೆಳ್ಳಾಟಂ ನಡೆಯಿತು.
ಭಾನುವಾರ ಬೆಳಗ್ಗೆ 7 ಗಂಟೆಗೆ ವಾದ್ಯಮೇಳ, 11 ಗಂಟೆಗೆ ಶ್ರೀಶಾಸ್ತಪ್ಪನ ವೆಳ್ಳಾಟಂ, ಮಧ್ಯಾಹ್ನ 1 ಗಂಟೆಗೆ ಶ್ರೀ ಗುಳಿಗ ವೆಳ್ಳಾಟಂ, ಸಂಜೆ 4 ಗಂಟೆಗೆ ಅಡಿಯರ ಮೆರವಣಿಗೆ, ರಾತ್ರಿ 7 ಗಂಟೆಗೆ ಶ್ರೀಮುತ್ತಪ್ಪ ವೆಳ್ಳಾಟಂ, 8 ಗಂಟೆಗೆ ಶ್ರೀಚಾಮುಂಡೇಶ್ವರಿ ಮತ್ತು ಶ್ರೀರಕ್ತ ಚಾಮುಂಡಿ ವೆಳ್ಳಾಟಂ, 8.30 ಗಂಟೆಗೆ ಶ್ರೀವಸೂರಿಮಾಲೆ ಸ್ನಾನಕ್ಕೆ ಹೊರಡುವುದು, 9.ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ,11 ಗಂಟೆಗೆ ಕಳಿಗ ಪಾಟ್ ಅಂದಿವೇಳ ಕಳಸಂ ಸ್ವೀಕರಿಸುವುದು, ವೆಳ್ಳಕಟ್ಟ್, 1-15ಕ್ಕೆ ಗುಳಿಗನ ಕೋಲ,2 ಗಂಟೆಗೆ ಶಾಸ್ತಪ್ಪನ ಕೋಲ, ಬೆಳಗಿನ ಜಾವ 4 ಗಂಟೆಗೆ ಶ್ರೀಮುತ್ತಪ್ಪ ಮತ್ತು ಶ್ರೀ ತಿರುವಪ್ಪನ ಕೋಲ, 5 ಗಂಟೆಗೆ ಗಂಭೀರ ಪಟಾಕಿ ಸಿಡಿಸಲಾಗುವುದು.
ಮಾ.24ರಂದು ಬೆಳಗ್ಗೆ 7 ಗಂಟೆಗೆ ಶ್ರೀರಕ್ತ ಚಾಮುಂಡಿಕೋಲ, 8 ಗಂಟೆಗೆ ಶ್ರೀಮುತ್ತಪ್ಪ ಮತ್ತು ಶ್ರೀತಿರುವಪ್ಪ ದೇವರ ಪಳ್ಳಿವೇಟ, 9. ಗಂಟೆಗೆ ಶ್ರೀವಿಷ್ಣುಮೂರ್ತಿಕೋಲ, 10 ಗಂಟೆಗೆ ಶ್ರೀಚಾಮುಂಡೇಶ್ವರಿ ಕೋಲ, 11 ಗಂಟೆಗೆ ಶ್ರೀವಸೂರಿ ಮಾಲೆ ಕೋಲ, ಮಧ್ಯಾಹ್ನ 12 ಗಂಟೆಗೆ ಗುರುಶ್ರೀ ದರ್ಪಣ, ಅಪರಾಹ್ನ 2 ಗಂಟೆಗೆ ಬಾವುಟ ಇಳಿಸಲಾಗುವುದು.
ಸಮಿತಿಯ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್,ಉಪಾಧ್ಯಕ್ಷ ಯಂಕನ ಶ್ರೀರಾಮ್, ಬಿ.ಡಿ.ರಾಜುರೈ, ಎನ್.ಆರ್.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋಹನ್, ಖಜಾಂಜಿ ರಮೇಶ್‌ಪಿಳ್ಳೆ, ಸಹ ಕಾರ್ಯದರ್ಶಿ ಯಂಕನ ಕೌಶಿಕ್, ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರ, ಪ್ರವೀಣ, ದಿವಾಕರ ರೈ, ವಿನೋದ್, ಪ್ರಾಂತ್, ಎ.ಲೋಕೇಶ್ ಕುಮಾರ್, ರಾಮಮೂರ್ತಿ, ಪಳನಿ, ವೀಣಾ ರೈ, ಗಿರೀಜಾ ಉದಯಕುಮಾರ್ ಹಾಗೂ ರಮ್ಯಾ ಮೋಹನ್ ಮತ್ತಿತರರಿದ್ದರು.
