More

  ಶ್ರೀ ಆದಿರಂಗನಾಥಸ್ವಾಮಿ ದೇಗುಲಕ್ಕೆ ಕೇಂದ್ರ ಸಚಿವರ ಭೇಟಿ

  ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀಆದಿರಂಗನಾಥಸ್ವಾಮಿ ದೇವಾಲಯಕ್ಕೆ ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಅವರು ಬುಧವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.

  ಪಟ್ಟಣದ ಪ್ರಸಿದ್ಧ ದೇವಾಲಯಕ್ಕೆ ಬಿಜೆಪಿ ಮುಖಂಡ, ಮಾಜಿ ಕ್ರೀಡಾಪಟು ಆರ್.ಕೆ.ಸಿಂಗ್ ಹಾಗೂ ಜಿಲ್ಲೆಯ ಬಿಜೆಪಿ ಮುಖಂಡರೊಂದಿಗೆ ಆಗಮಿಸಿ ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ಅವರ ಸಮ್ಮುಖದಲ್ಲಿ ಆಷಾಢ ಮಾಸದ ವಿಶೇಷ ಪೂಜೆ ಸಲ್ಲಿಸಿದರು.

  ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕಳೆದ ಚುನಾವಣೆಯಷ್ಟೇ ಈ ಬಾರಿಯೂ ಮತ ಸಿಕ್ಕಿದ್ದು, ಮತ ಗಳಿಕೆಯಲ್ಲಿ ಬಿಜೆಪಿಗೆ ಕಡಿಮೆ ಆಗಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಉತ್ತಮ ಫಲಿತಾಂಶ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುಂಬರುವ ಚುನಾವಣೆಯನ್ನು ಎದುರಿಸುತ್ತೇವೆ. ಕಾಂಗ್ರೆಸ್ ಪರವಾಗಿ ಮೋದಿ ವಿರುದ್ಧ ನಿಲ್ಲುವವರು ಯಾರೂ ಇಲ್ಲ. ಸ್ಥಿರ ಹಾಗೂ ಶಕ್ತಿ ಸರ್ಕಾರ ಕೊಡೋದು ಬಿಜೆಪಿ ಮತ್ತು ಮೋದಿ ಅವರಿಂದ ಸಾಧ್ಯ. ಇನ್ನು ಶೀಘ್ರದಲ್ಲಿ ವಿಪಕ್ಷ ನಾಯಕನ ನೇಮಕವಾಗುತ್ತೆ. ಈಗಾಗಲೇ ಪಕ್ಷದಿಂದ ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ವಿಪಕ್ಷ ನಾಯಕ ನೇಮಕ ಆಗಲಿದ್ದಾರೆ ಎಂದು ತಿಳಿಸಿದರು.
  ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್, ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಮುಖಂಡ ದರ್ಶನ್ ಲಿಂಗರಾಜು ಇತರರು ಇದ್ದರು.
  ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂಬ ಸುಳ್ಳು ವದಂತಿಯನ್ನು ಸಿಎಂ ಸಿದ್ದರಾಮಯ್ಯ ಹಬ್ಬಿಸಿದ್ದಾರೆ. ಆದರೆ ಸಿದ್ದರಾಮಯ್ಯ ರಾಜ್ಯದ ಜನರಿಗೆ ಭರವಸೆ ನೀಡಿದಾಗ ಕೇಂದ್ರ ಸರ್ಕಾರವನ್ನು ಏನಾದ್ರೂ ಕೇಳಿದ್ರಾ? ಪುಕ್ಸಟ್ಟೆಯಾಗಿ ಹಂಚುತ್ತೇವೆ ಎಂದು ಇವರು ಹೇಳಿದರೆ, ಕೇಂದ್ರ ಸರ್ಕಾರ ಕೊಡೋಕೆ ಆಗುತ್ತಾ ಅಥವಾ ರಾಜ್ಯದಲ್ಲಿ ಜನರಿಗೆ ಹೇಳಿದ್ದನ್ನು ಕೇಂದ್ರ ಸರ್ಕಾರ ನೀಡೋಕೆ ಆಗುತ್ತಾ?. ನೀವು ಕೊಟ್ಟ ಭರವಸೆಗಳನ್ನು ನೀವೇ ಈಡೇರಿಸಬೇಕು ನಿಮ್ಮ ಭರವಸೆಗಳಿಂದ ಹಿಂದೆ ಸರಿಯದೆ, ಜನರಿಗೆ ನೀವು ನೀಡಿರುವ ಭರವಸೆ ಈಡೇರಿಸಿ. ರಾಜ್ಯದ ಜನರಿಗೆ ಸುಳ್ಳು ಭರವಸೆ ಕೊಟ್ಟು ಅಧಿಕಾರದ ಗದ್ದುಗೆ ಏರಿದ್ದೀರಾ. ಕಾಂಗ್ರೆಸ್‌ನವರು ಹೇಳೋದು ಒಂದು ಮಾಡೋದು ಒಂದು. ಆ ಪಕ್ಷ ಜನರಿಗೆ ಮೋಸ ಮಾಡಿಯೇ ಮತ ತೆಗೆದುಕೊಳ್ಳೋದು. ಹೀಗಾಗಿ ಅವರು ನೀಡಿದ ಭರವಸೆ ಈಡೇರಿಸಲ್ಲ, ಜನರಿಗೆ ನಾಮ ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.

  See also  ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts