ಶ್ರೀಲಂಕಾ ಸ್ಪೋಟದಲ್ಲಿ ಮಂಡ್ಯ ಜಿಲ್ಲೆ ಬೆಟ್ಟದಕೋಟೆಯ ರಮೇಶ್​ ಸಾವು

ಮಂಡ್ಯ: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಕನ್ನಡಿಗರ ಪೈಕಿ ನಾಗಮಂಗಲದವರು ಒಬ್ಬರು ಸೇರಿದ್ದಾರೆ.

ತಾಲೂಕಿನ ಬೆಟ್ಟದಕೋಟೆ ಗ್ರಾಮದ ನಿವೃತ್ತ ನೌಕರ ಲೇ. ಲಕ್ಷ್ಮಣಗೌಡ ಎಂಬುವರ ಪುತ್ರ ರಮೇಶ್ (30) ಉಗ್ರರು ಸಿಡಿಸಿದ ಬಾಂಬ್​ಗೆ ಬಲಿಯಾಗಿದ್ದಾರೆ. 

ಕೆಲ ವರ್ಷಗಳಿಂದ ತುಮಕೂರಿನಲ್ಲಿ ನೆಲೆಸಿದ್ದ ರಮೇಶ್​ ಅಲ್ಲಿ ಬಾರ್ ನಡೆಸುತ್ತಿದ್ದರು.  ಸ್ನೇಹಿತರ ಜತೆಗೂಡಿ ಕಳೆದ ಶನಿವಾರ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ನಾಗಮಂಗಲ ತಾಲೂಕಿನ ಬೆಟ್ಟದ ಕೋಟೆ ಗ್ರಾಮಕ್ಕೆ ರಮೇಶ್ ಮೃತದೇಹ ತಂದು ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಿದ್ದತೆ ನಡೆಸಿದ್ದಾರೆ.

ಬುಧವಾರ ರಾತ್ರಿ ಅಥವಾ ಗುರುವಾರ ಮೃತದೇಹ ಸ್ವಗ್ರಾಮ ತಲುಪುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರಿಗೆ ಪತ್ನಿ ಮಂಜುಳಾ, ಒಂದು ಗಂಡು, 1 ಹೆಣ್ಣುಮಗುವಿದೆ.

Leave a Reply

Your email address will not be published. Required fields are marked *