ಶ್ರೀರಾಮುಲು ಅವರಿಗೆ ಪೈಪೋಟಿ ಕೊಡುವಷ್ಟು ದೊಡ್ಡ ಮನುಷ್ಯ ನಾನಲ್ಲ

blank

ಚಿತ್ರದುರ್ಗ: ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಪೈಪೋಟಿ ಕೊಡುವಷ್ಟು ದೊಡ್ಡ ಮನುಷ್ಯ ನಾನಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜ ಯೇಂದ್ರ ಹೇಳಿದರು.
ನಗರದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಗುರುವಾರ ಭೇಟಿ ನೀಡಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆರ್ಶೀವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀರಾಮುಲು ಅವರು ಹಿರಿಯರಿದ್ದಾರೆ, ಸಂಸದ ಗೋವಿಂದ ಎಂ. ಕಾರಜೋಳ,ಶ್ರೀರಾಮುಲು ಸೇರಿದಂತೆ ಅನೇಕ ಹಿರಿಯರು,ಬಿ.ಎಸ್.ಯಡಿಯೂರಪ್ಪ,ಅನಂತಕುಮಾರ್ ಅವರಂಥ ಹಿರಿಯರೊಂದಿಗೆ ಪಕ್ಷದ ಸಂಘಟನೆಗೆ ಜತೆ,ಜತೆಯಲ್ಲೇ ಶ್ರಮಿಸಿದ್ದಾರೆ.
ಖಂಡಿತಾ ನಾನಂತೂ ಅವರಿಗೆ ಪೈಪೋಟಿ ಕೊಡುವಷ್ಟು ದೊಡ್ಡ ಮನುಷ್ಯನ ಅಲ್ಲ. ಈವರೆಗೂ ರಾಜ್ಯಾಧ್ಯಕ್ಷನಾಗಿ ಯಶಸ್ವಿಯಾಗಿ ಕಾರ‌್ಯ ನಿ ರ್ವಹಿಸುತ್ತಿದ್ದೇನೆ,ಮುಂದುವರಿಯ ಬೇಕೆಂಬುದು ಕಾರ್ರ‌್ಯಕರ್ತರ ಅಪೇಕ್ಷೆಯಾಗಿದೆ. ತಮಗೆ ಜವಾಬ್ದಾರಿ ವಹಿಸಿದರೆ 150 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆಂಬ ಶ್ರೀರಾಮುಲು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ಶಾಸಕರು,ಹಿರಿ ಯರು,ಜಿಲ್ಲಾಅಧ್ಯಕ್ಷರ ಅಭಿಪ್ರಾಯ ಏನಿದೆ ಎಂಬುದನ್ನು ಗಮನಿಸಿ ಸದ್ಯದಲ್ಲೇ ವರಿಷ್ಠರು ನಿರ್ಧರಿಸಲಿದ್ದಾರೆ, ಅವರ ತೀರ್ಮಾನಕ್ಕೆ ಎಲ್ಲ ರೂ ಬದ್ಧರಾಗಿರುತ್ತೇವೆ ಎಂದರು.
ನೋಟೀಸ್
ದೇಶ,ರಾಜ್ಯದಲ್ಲಿ ಎಲ್ಲೇ ಆಗಲಿ ಪಕ್ಷದ ಕಚೇರಿಗಳಲ್ಲಿ ಖಾಸಗಿ ಕಾರ‌್ಯಕ್ರಮಗಳಿಗೆ ಅವಕಾಶವಿಲ್ಲ. ಆದರೆ ಬಳ್ಳಾರಿ ಜಿಲ್ಲಾಧ್ಯಕ್ಷ ಅನಿಲ್ ಮೋಕಾ ಅವರು ಗೊತ್ತಿದ್ದೊ,ಗೊತ್ತಿಲ್ಲದೆಯೋ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಕುರಿತು ಅವರಿಗೆ ನೋಟಿಸ್ ಕೊಟ್ಟಿದ್ದು,ಅವರಿಂದ ಸ್ಪಷ್ಟನೆ ಬಂದ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ತಾವು ಯಾವುದೇ ಅಭಿಪ್ರಾಯ ನೀಡಿಲ್ಲವೆಂದರು. ಇಲ್ಲಿಗೆ ಬಂದಂಥ ವೇಳೆ ಅವರನ್ನು ಭೇಟಿ ಮಾಡಿ ಆರ್ಶೀವಾದ ಪಡೆಯುವುದು ಸಹಜ. ಇವತ್ತಿನ ಭೇಟಿಗೂ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ಸಂಸದ ಗೋವಿಂದ ಎಂ.ಕಾರಜೋಳ,ಎಂಎಲ್‌ಸಿ ಕೆ.ಎಸ್.ನವೀನ್,ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ,ಪ್ರೊ.ಲಿಂಗಪ್ಪ,ಎಸ್. ಕೆ.ಬಸವರಾಜನ್,ರಾಜ್ಯಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ,ಜಿಲ್ಲಾಧ್ಯಕ್ಷರಾದ ಎ.ಮುರುಳಿ,ಹನುಮಂತೇಗೌಡ, ಜಿ ಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಬಸವರಾಜನ್,ಮಲ್ಲಿಕಾರ್ಜುನ್,ಸುರೇಶ್‌ಸಿದ್ದಾಪುರ,ಬಾಳೆಕಾಯಿ ರಾಮದಾಸ್, ಕೆ.ಟಿ.ಕುಮಾರಸ್ವಾಮಿ, ವೆಂಕಟೇಶ್‌ಯಾದವ್,ಮಾಧುರಿಗಿರೀಶ್,ಮೋಹನ್,ಭಾರ್ಗವಿದ್ರಾವಿಡ,ಜಯಸಿಂಹ ಖಾಟ್ರೋಚ್,ರಾಜಶೇಖರ್,ನಾಗರಾಜ್‌ಬೇದ್ರೆ ಇತರರು ಇದ್ದರು.

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…