25.7 C
Bangalore
Sunday, December 15, 2019

ಶ್ರೀಗಂಧದಿಂದ ಲಾಭದ ಸುಗಂಧ

Latest News

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ

ಉಡುಪಿ: ತುಳು ಭಾಷಿಗ ತುಳು ಶಿವಳ್ಳಿ ಬ್ರಾಹ್ಮಣರು ಮಾತೃಭಾಷೆ ಮರೆಯುತ್ತಿದ್ದಾರೆ. ಅದು ಸಲ್ಲದು. ನಮ್ಮ ಸಂಸ್ಕೃತಿ-ಸಂಸ್ಕಾರಗಳ ಉಳಿವಿಗಾಗಿ ಶ್ರಮಿಸುವುದು ಗಾಯತ್ರಿ ಮಂತ್ರವನ್ನು ನಿತ್ಯವೂ...

ಕ್ರಿಕೆಟ್ ಪಂದ್ಯಾವಳಿ, ಡಿಎಆರ್ ಮೈದಾನದಲ್ಲಿ ಲಾಠಿಗೆ ಮಣಿದ ಲೇಖನಿ

ಬಳ್ಳಾರಿ: ಪೊಲೀಸ್ ವಾರ್ಷಿಕ ಕ್ರೀಡಾಕೂಟ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ಭಾನುವಾರ ಪೊಲೀಸರು ಮತ್ತು ಪತ್ರಕರ್ತರ ಮಧ್ಯೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ...

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಉಹಾಪೋಹ – ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ರಾಯಚೂರು: ಇನ್ನೆರಡು ಉಪ ಮುಖ್ಯಮಂತ್ರಿ ಹುದ್ದೆ ಸೃಜಿಸಲಾಗುತ್ತಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಮುಂದಿನ ಸಚಿವ ಸಂಪುಟದ ವಿಸ್ತರಣೆ, ಬದಲಾವಣೆಯನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು...

ಮೊಬೈಲ್ ಹಾಳು ಮಾಡಿದ್ದಕ್ಕೆ ಸೋದರ ಮಾವನೇ ಬಾಲಕಿಗೆ ಚಾಕು ಇರಿದು ಹತ್ಯೆ

ಶಿವಮೊಗ್ಗ: ಮೊಬೈಲ್ ವಿಚಾರದಲ್ಲಿ ಭಾನುವಾರ ಸೋದರ ಮಾವನೇ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಾಡಿಕೊಪ್ಪದಲ್ಲಿ ನಡೆದಿದೆ.5 ವರ್ಷದ ರಂಜನಿ ಹತ್ಯೆಯಾದ...

ಮಸ್ಕಿ ಕ್ಷೇತ್ರಕ್ಕೆ ಇನ್ನೆರಡು ತಿಂಗಳಲ್ಲಿ ಉಪಚುನಾವಣೆ ಸಾಧ್ಯತೆ – ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್

ಮಸ್ಕಿ: ಬಿಜೆಪಿ ಸೇರಿದ ಮೇಲೆ ಸಿಎಂ ಬಿ.ಎಸ್.ಯಡಿಯೂರಪ್ಪ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ಕೊಡಲು ಒಪ್ಪಿದ್ದಾರೆ. ಈಗಾಗಲೇ 50 ಕೋಟಿ ರೂ....

ಶ್ರೀ ಗಂಧ ನಮ್ಮ ರಾಜ್ಯದ ಸಾಂಪ್ರದಾಯಿಕ ಹಾಗೂ ರಾಜಮಾನ್ಯ ಬೆಳೆ. ಅದರ ಪ್ರಯೋಜನಗಳ ಅರಿವು ಹೆಚ್ಚಾಗುತ್ತಿದ್ದು, ಬೇಡಿಕೆಯೂ ದ್ವಿಗುಣಗೊಳ್ಳುತ್ತಿದೆ. ಹೆಚ್ಚು ಆರ್ಥಿಕ ಲಾಭ ತಂದುಕೊಡುವ ಶ್ರೀಗಂಧ ಬೆಳೆಯಲು ರೈತರು ಹಿಂದುಳಿದಿರುವುದು ವಿಪರ್ಯಾಸ. ಒಂದು ಎಕರೆ ಜಾಗದಲ್ಲಿ ಹದಿನೈದು ವರ್ಷಕ್ಕೆ ಒಂದರಿಂದ ಒಂದೂವರೆ ಕೋಟಿ ರೂ. ಆದಾಯ ಗಳಿಸುವ ಆಸಕ್ತಿಯಿದ್ದವರು ಇಂದಿನಿಂದಲೇ ಶ್ರೀಗಂಧ ಬೆಳೆಯಲು ಆರಂಭಿಸಬಹುದು.

ಶ್ರೀಗಂಧ ನಮ್ಮ ರಾಜ್ಯ ಸಾಂಪ್ರದಾಯಿಕ ಹಾಗೂ ರಾಜಮಾನ್ಯ ಬೆಳೆಯಾಗಿದ್ದು, ಅದರ ಉಪಯೋಗಗಳ ಸರಮಾಲೆ ಹಚ್ಚಾಗುತ್ತಿದ್ದು, ಇದಕ್ಕೆ ತಕ್ಕಂತೆ ಬೇಡಿಕೆಯೂ ದ್ವಿಗುಣಗೊಳ್ಳುತ್ತಿದೆ. ರೈತರು ಶ್ರೀಗಂಧ ಬೆಳೆಯಲು ಮುಂದಾದರೆ ಹೆಚ್ಚಿನ ಲಾಭ ಗಳಿಸಬಹುದು.

ಶ್ರೀಗಂಧದ ತವರೂರು ಎಂದು ಪ್ರಸಿದ್ಧವಾದ ಕರ್ನಾಟಕ ಸೇರಿ ದೇಶದಾದ್ಯಂತ ಶ್ರೀಗಂಧ ಕೃಷಿಯಿಂದ ರೈತರು ದೂರವಿರಲು ಅವರಲ್ಲಿರುವ ಭಯವೇ ಕಾರಣ. ಒಂದು ಎಕರೆ ಜಾಗದಲ್ಲಿ ಹದಿನೈದು ವರ್ಷಕ್ಕೆ ಒಂದರಿಂದ ಒಂದೂವರೆ ಕೋಟಿ ರೂ. ಆದಾಯ ಗಳಿಸುವ ಆಸಕ್ತಿಯಿದ್ದವರು ಇಂದಿನಿಂದಲೇ ಶ್ರೀಗಂಧ ಬೆಳೆಯಲು ಆರಂಭಿಸಬಹುದು. ಶ್ರೀಗಂಧ ಬೆಳೆಯ ಕುರಿತು ಸಾಕಷ್ಟು ಗೊಂದಲಗಳಿದ್ದು, ಅವುಗಳಿಗೆ ಪರಿಹಾರವನ್ನು ಇಲ್ಲಿ ತಿಳಿಸಲಾಗಿದೆ.

ಶ್ರೀಗಂಧಕ್ಕೆ ಸರ್ಕಾರ ಅನುಮತಿ ಅಗತ್ಯವಿಲ್ಲ: ರಾಜ್ಯ ಸರ್ಕಾರದ 2001ರ ಅರಣ್ಯ ಕಾಯ್ದೆ ತಿದ್ದುಪಡಿಯು ಎಲ್ಲ ಸಾರ್ವಜನಿಕರು ಮುಕ್ತವಾಗಿ ಶ್ರೀಗಂಧ ಬೆಳೆಯಲು ಅವಕಾಶ ನೀಡಿದೆ. ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೆ, ಸ್ವತಂತ್ರವಾಗಿ ಶ್ರೀಗಂಧ ಬೆಳೆಯಬಹುದು. ಸರ್ಕಾರವೇ ಶ್ರೀಗಂಧ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದು, ಈ ಕುರಿತು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್​ಡಿಎಲ್) ಸಂಪೂರ್ಣ ಮಾಹಿತಿ ನೀಡುತ್ತದೆ.

ರಿಯಾಯಿತಿ ದರಕ್ಕೆ ಶ್ರೀಗಂದ ಸಸಿಗಳು ಲಭ್ಯ: ಶ್ರೀಗಂಧ ಸಸಿಗಳು ಉಚಿತವಾಗಿ ಸಿಗುವುದಿಲ್ಲ. ಅರಣ್ಯ ಇಲಾಖೆ, ಸರ್ಕಾರಿ ಸ್ವಾಮ್ಯದ ಕೆಎಸ್​ಡಿಎಲ್ ಸಂಸ್ಥೆ ಹಾಗೂ ಬೆಂಗಳೂರಿನ ಮರ ವಿಜ್ಞಾನ ಸಂಸ್ಥೆಯಲ್ಲಿ 5 ರೂ.ನಿಂದ 10 ರೂ.ಗೆ ಒಂದರಂತೆ ಶ್ರೀಗಂಧ ಸಸಿಗಳನ್ನು ಮಾರಾಟ ಮಾಡಲಾಗುತ್ತದೆ. ಕೆಲವು ಖಾಸಗಿ ಫಾರಂಗಳು 25 ರೂ.ಗಳಿಂದ 50 ರೂ.ವರೆಗೆ ಒಂದರಂತೆ ಗಿಡಗಳನ್ನು ಮಾರಾಟ ಮಾಡುತ್ತಿವೆ. ಐದು ಎಕರೆಗಳಿಗಿಂತ ಕಡಿಮೆ ಶ್ರೀಗಂಧ ಬೆಳೆಯುವವರಿಗೆ ರಾಜ್ಯ ಸರ್ಕಾರ ಪ್ರತಿ ಗಿಡಕ್ಕೆ 10 ರೂ. ನಂತೆ ಮೂರು ವರ್ಷಗಳವರೆಗೆ ಪ್ರೋತ್ಸಾಹಧನ ನೀಡುತ್ತದೆ.

ಮಣ್ಣುಪರೀಕ್ಷೆ ಮತ್ತು ಅಂತರದ ನಾಟಿ: ಸಾಮಾನ್ಯ ಕೃಷಿ ಬೆಳೆಯಂತೆ ಕೆಂಪು, ಕಪ್ಪು ಹಾಗೂ ಮರಳುಮಿಶ್ರಿತ ಮಣ್ಣಿನಲ್ಲಿ ಶ್ರೀಗಂಧ ಬೆಳೆಯಬಹುದು. ಆದರೆ ಪಿಎಚ್ ಮೌಲ್ಯ ಆರರಿಂದ 8 ರ ಒಳಗಿರಬೇಕು. ಹೀಗಾಗಿ ಮಣ್ಣಿನ ಪರೀಕ್ಷೆ ಅಗತ್ಯವಾಗಿದೆ. ಜೌಗು ಪ್ರದೇಶದಲ್ಲಿ ಬೆಳೆಯಲು ಸಾಧ್ಯವಿಲ್ಲ. ಭೂಮಿ ಹದಗೊಳಿಸಿ ಎರಡು ಅಡಿ ಉದ್ದ, ಎರಡು ಅಡಿ ಅಗಲ ಹಾಗೂ ಎರಡು ಅಡಿ ಆಳಕ್ಕೆ ಗುಳಿ ತೆಗೆದು ಸ್ವಲ್ಪ ಕೊಟ್ಟಿಗೆ ಗೊಬ್ಬರ ಹಾಕಿ ಸಸಿ ನಾಟಿ ಮಾಡಬಹುದು. ಸಾಲುಗಳ ಅಂತರ 12 ಅಡಿ, ಹಾಗೂ ಗಿಡಗಳ ಅಂತರ 15 ಅಡಿ ಇರಬೇಕು. ಒಂದು ಎಕರೆಗೆ 200 ಗಿಡಗಳನ್ನು ಬೆಳೆಸಬಹುದು.

ಪರಾವಲಂಬಿ ಶ್ರೀಗಂಧ: ಶ್ರೀಗಂಧ ಪರಾವಲಂಬಿಯಾಗಿದ್ದು, ಇದರ ಬೇರು ಬಲಿಷ್ಠವಾಗಿರದೆ ಸತ್ತುಹೋಗುತ್ತದೆ. ಬೇರುಗಳು ಬೇರೆ ಗಿಡದ ಬೇರುಗಳಿಂದ ಪೋಷಕಾಂಶ ಹೀರಿಕೊಳ್ಳುತ್ತದೆ. ಹೀಗಾಗಿ ಪ್ರಾರಂಭಿಕ ಮೂರು ವರ್ಷಗಳವರೆಗೆ ಶ್ರೀಗಂದ ಗಿಡದಿಂದ 1.5 ಅಡಿ ಅಂತರದಲ್ಲಿ ಅಗಸೆ ಅಥವಾ ತೊಗರಿ ಗಿಡ ನಾಟಿ ಮಾಡಬೇಕು. 7.5 ಅಡಿ ಅಂತರದಲ್ಲಿ 15 ವರ್ಷ ಬಾಳಿಕೆ ಬರುವ ಹೆಬ್ಬೇವು, ಕಾಫಿ, ದಾಳಿಂಬೆ, ಅಡಿಕೆ, ನೆಲ್ಲಿಕಾಯಿ, ಸಿಲ್ವರ್ ಬೆಳೆಯಬಹುದು. ಜತೆಗೆ ಶ್ರೀಗಂಧದಲ್ಲಿ ಅಂತರ ಬೆಳೆಯಾಗಿ ಶೇಂಗಾ, ಸೀಮೆಹುಲ್ಲು, ಕಲ್ಲಂಗಡಿ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹರಿಶಿಣ, ಸೇರಿ ಇತರೆ ಎಲ್ಲ ತರಕಾರಿ ಬೆಳೆದು ಲಾಭ ಗಳಿಸಬಹುದು.

ಉಷ್ಣಾಂಶದ ತೊಂದರೆಯಿಲ್ಲ: ಕನಿಷ್ಠ ಐದು ಡಿಗ್ರಿಯಿಂದ 48 ಡಿಗ್ರಿ ಉಷ್ಣಾಂಶ ಪ್ರದೇಶದಲ್ಲಿ ಶ್ರೀಗಂಧ ಬೆಳೆಯಬಹುದು. ನಾಟಿ ಮಾಡಿ ಒಂದು ತಿಂಗಳವರೆಗೆ ಪ್ರತಿ ದಿನ ನೀರು ಪೂರೈಕೆ ಮಾಡಬೇಕು. ನಂತರ ಒಂದರಿಂದ ಮೂರು ತಿಂಗಳವರೆಗೆ ವಾರಕ್ಕೆ ಎರಡು ಬಾರಿ ಹಾಗೂ ಮೂರು ತಿಂಗಳ ನಂತರ ಕಟಾವಿನವರೆಗೆ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಬೇಕು. ಮಳೆಗಾಲದಲ್ಲಿ ಉತ್ತಮ ಮಳೆಯಾದರೆ ನೀರಿನ ಅವಶ್ಯಕತೆಯಿರುವುದಿಲ್ಲ. ಜತೆಗೆ ಐದು ವರ್ಷದ ನಂತರದ ಗಿಡಗಳಿಗೆ ಪ್ರತಿವರ್ಷ ನವೆಂಬರ್​ನಿಂದ ಜನವರಿವರೆಗೆ ನೀರು ಕೊಡದೆ ಒತ್ತಡ ನೀಡಿಬೇಕು. ಆಗ ಕಾಂಡದಲ್ಲಿ ಹೆಚ್ಚು ಚೇಗು ಬೆಳೆಯುತ್ತದೆ.

ವರ್ಷಕ್ಕೆ ಎರಡು ಬಾರಿ ಔಷಧ ಸಿಂಪಡಣೆ: ಸಾಮಾನ್ಯ ಕೃಷಿ ಬೆಳೆಗೆ ರೋಗ ಬಂದ ನಂತರ ನಿಯಂತ್ರಣ ಮಾಡಬಹುದು. ಆದರೆ ಮರಗಳಿಗೆ ರೋಗ ಬರದಂತೆ ತಡೆಗಟ್ಟುವುದು ಸೂಕ್ತ. ವಾರ್ಷಿಕ ಮೇ ಹಾಗೂ ಜನವರಿ ತಿಂಗಳಲ್ಲಿ ಎರಡು ಬಾರಿ ರೋಗ ಹಾಗೂ ಕೀಟ ಬಾಧೆ ನಿವಾರಕ ಔಷಧಿ ಸಿಂಪಡಣೆ ಮಾಡಬೇಕು. ಕೀಟಬಾಧೆಗೆ ಕ್ಲೋರೋಫಿರೋಪೋಸ್ (ಇಜ್ಝಟ್ಟಟಟಜಢ್ಟಟಟಟಠ) ಹಾಗೂ ಶಿಲೀಂದ್ರ ರೋಗ ನಿಯಂತ್ರಣಕ್ಕೆ ಬ್ಲಿಟೋಕ್ಸ್ ಅಥವಾ ಬಾವಿಸ್ಟಿನ್ (ಆಜಿಠಿಟ್ಡ ಟ್ಟ ಆಚಡಜಿಠಠಿಜ್ಞಿ) ಔಷಧಿಯನ್ನು ಸ್ಪ್ರೇ ಮಾಡಬಹುದು.

ಮರಗಳ್ಳರಿಂದ ರಕ್ಷಣೆ: ಹತ್ತು ವರ್ಷಗಳ ತನಕ ಶ್ರೀಗಂಧಕ್ಕೆಯಾವುದೇ ತೊಂದರೆಯಿಲ್ಲ. ನಂತರ ಕಾಪಾಡಿಕೊಳ್ಳುವುದು ಸವಾಲು. ಇದಕ್ಕೆ ನಾಯಿ ಸಾಕಣೆ, ತಂತಿಬೇಲಿ ಅಳವಡಿಕೆ, ಭದ್ರತಾ ಸಿಬ್ಬಂದಿ ನೇಮಕ, ಸೋಲಾರ್ ತಂತಿ ಅಳವಡಿಕೆ, ಸಿಸಿ ಟಿವಿ ಕ್ಯಾಮರಾ ಅಳವಡಿಸಬಹುದು. ಚಿಪ್ ಅಳವಡಿಕೆ ದುಬಾರಿಯಾಗಿದ್ದು ಬಹುಮಟ್ಟಿಗೆ ಸೂಕ್ತ. ಸರ್ಕಾರ ಸಂಸ್ಥೆಗಳಿಂದ ಚಿಪ್ ಖರೀದಿಸಿ ನಂತರ ರೈತರಿಗೆ ಕನಿಷ್ಠ 10 ರೂ.ನಿಂದ 50 ರೂ.ಗೆ ಒಂದು ಚಿಪ್ ಮಾರಾಟ ಮಾಡಬೇಕು.

15 ವರ್ಷಕ್ಕೆ ನಾಲ್ಕು ಲಕ್ಷ ಖರ್ಚು: ಶ್ರೀಗಂಧ ಗಿಡ ಖರೀದಿ, ನಾಟಿ, ಔಷಧಿ ಸಿಂಪಡಣೆ, ನೀರಿನ ಪೈಪ್ ಅಳವಡಿಕೆ, ವಿದ್ಯುತ್ ಸೇರಿ ಮೂರರಿಂದ ನಾಲ್ಕು ಲಕ್ಷ ಖರ್ಚು ಬರುತ್ತದೆ. ಆದರೆ ಮರಗಳನ್ನು ರಕ್ಷಿಸುವ ಖರ್ಚು ಹೆಚ್ಚಾಗಿದ್ದು, ಕಾವಲುಗಾರರು, ನಾಯಿ ಸಾಕಣೆ, ತಂತಿ ಬೇಲಿ ಅಥವಾ ತೋಟದ ಗಡಿಭಾಗದಲ್ಲಿರುವ ಮರಗಳಿಗೆ ಮೈಕ್ರೋಚಿಪ್ ಅಳವಡಿಕೆಗೆ ಎಂಟರಿಂದ 10 ಲಕ್ಷ ರೂ. ಖರ್ಚಾಗುತ್ತದೆ. ಆದರೆ ಅಂತರ ಬೆಳೆ ಬೆಳೆಯುವುದರಿಂದ ಈ ಖರ್ಚು ಕಂಡುಬರುವುದಿಲ್ಲ.

ಸರ್ಕಾರದಿಂದ ಖರೀದಿ: ಶ್ರೀಗಂಧಕ್ಕೆ ವಿಶ್ವದೆಲ್ಲೆಡೆ ಬೇಡಿಕೆಯಿದೆ. ಆದರೆ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ರೈತರು ಮುಕ್ತವಾಗಿ ಮಾರಲು ಅವಕಾಶವಿಲ್ಲ. ಈ ರಾಜ್ಯಗಳಲ್ಲಿ ಕಟಾವು ಮಾಡುವಾಗ ಅರಣ್ಯ ಇಲಾಖೆ ಅನುಮತಿ ಪಡೆಯುವ ಜತೆಗೆ ಸರ್ಕಾರದ (ಕೆಎಸ್​ಡಿಎಲ್) ಸಂಸ್ಥೆಗಳಿಗೆ ಮಾರಬೇಕು. ನೂರು ಗ್ರಾಂಗಳಿಗಿಂತ ಕಡಿಮೆ ತೂಕದ ಚೇಗು ತುಂಡುಗಳನ್ನು ಸ್ವತಂತ್ರವಾಗಿ ರಫ್ತು ಮಾಡಲು ಅವಕಾಶವಿದೆ. ಆದರೆ ಕರ್ನಾಟಕ, ಕೇರಳ, ತಮಿಳುನಾಡು ಹೊರತುಪಡಿಸಿ ದೇಶದ ಇತರ ರಾಜ್ಯಗಳಿಗೆ ಮುಕ್ತ ಮಾರಾಟಕ್ಕೆ ಅವಕಾಶವಿದೆ.

‘ರಾಜ್ಯ ಸರ್ಕಾರ ಶ್ರೀಗಂಧವನ್ನು ಸಾಮಾನ್ಯ ಕೃಷಿ ಬೆಳೆಯಾಗಿ ಪರಿಗಣಿಸಿ ಕರ್ನಾಟಕ, ಕೇರಳ, ತಮಿಳುನಾಡು ರೈತರು ಮುಕ್ತವಾಗಿ ಮಾರಲು ಅವಕಾಶ ನೀಡಬೇಕು. ಶ್ರೀಗಂಧ ಬೆಳೆಗೆ ಪ್ರೋತ್ಸಾಹಧನ ಹೆಚ್ಚಳ ಮಾಡಬೇಕು. ಮರಗಳ ರಕ್ಷಣೆಗೆ ಚಿಪ್ ಹಾಗೂ ಬೇಲಿ ಅಳವಡಿಕೆಗೆ ಸಹಾಯಧನ ನೀಡಬೇಕು. ಶ್ರೀಗಂಧ ಬೆಳೆಗಾರರ ಸಮಿತಿ ರಚಿಸಿ ಸ್ವತಂತ್ರವಾಗಿ ಗಂಧದ ಮಾರಾಟಕ್ಕೆ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಡಾ. ಅನಂತಪದ್ಮನಾಭ.

ಸರ್ಕಾರಿ ಭೂಮಿಯಲ್ಲಿ ಶ್ರೀಗಂಧ ಬೆಳೆ: ರಾಜ್ಯದಲ್ಲಿ ಕೇವಲ 350 ಜನರು ಶ್ರೀಗಂಧ ಬೆಳೆಯಲು (ಕೆಎಸ್​ಡಿಎಲ್) ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರ ಪ್ರಮಾಣ ಹೆಚ್ಚಾಗಲು ಸರ್ಕಾರ ಜಾಗೃತಿ ಮೂಡಿಸಬೇಕು. ಜತೆಗೆ ಸರ್ಕಾರದ ರಕ್ಷಣಾ ಪಡೆ ಭೂಮಿಗಳು ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಸರ್ಕಾರಿ ಜಾಗಗಳಲ್ಲಿ ಶ್ರೀಗಂಧ ಬೆಳೆಯುವ ಮೂಲಕ ರೈತರಿಗೆ ಪ್ರಾತ್ಯಕ್ಷಿಕೆ ಮತ್ತು ಪ್ರೋತ್ಸಾಹ ನೀಡಬೇಕು. ಅರಣ್ಯ ಇಲಾಖೆ ವಾರ್ಷಿಕ 50 ಹೆಕ್ಟೆರ್ ಪ್ರದೇಶದಲ್ಲಿ ಶ್ರೀಗಂಧ ನಾಟಿ ಮಾಡಿ ರಕ್ಷಿಸಿದರೆ ಕೆಎಸ್​ಡಿಎಲ್​ಗೆ ಅಗತ್ಯ ಶ್ರೀಗಂಧ ರಾಜ್ಯದಲ್ಲೇ ದೊರೆಯುತ್ತದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕ: 9880142825 (ಡಾ. ಅನಂತಪದ್ಮನಾಭ)

ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಅವರ ಹೆಸರಿನಲ್ಲಿ ಶ್ರೀಗಂಧದ ಮರ ನಾಟಿ ಮಾಡಿ. ಅವರು ಮದುವೆ ವಯಸ್ಸಿಗೆ ಬರುವಷ್ಟರಲ್ಲಿ ಶ್ರೀಗಂಧವೂ ಫಲ ಕೊಡುತ್ತದೆ. ಒಂದು ಶ್ರೀಗಂಧದ ಮರ ಕಡಿದು ಸಿಗುವ 1.5 ಲಕ್ಷದಿಂದ ಮದುವೆ ಖರ್ಚು ಮಾಡಬಹುದು.

| ಡಾ. ಎಚ್.ಎಸ್.ಅನಂತಪದ್ಮನಾಭ, ಶ್ರೀಗಂಧ ಬೆಳೆ ವಿಜ್ಞಾನಿ

ಚರ್ಮವ್ಯಾಧಿ ನಿವಾರಕ ಶ್ರೀಗಂಧ

ಶ್ರೀಗಂಧದಿಂದ ಸುಗಂಧ ಎಣ್ಣೆ ತಯಾರಿಕೆ, ಚರ್ಮದ ಕಾಯಿಲೆ ಹಾಗೂ ಕ್ಯಾನ್ಸರ್​ಗೆ ಔಷಧಿಯಾಗಿ, ಮೌಥ್ ಫ್ರೆಷ್ ಮಾಡುವ ದ್ರಾವಣದಲ್ಲಿ, ಸುಗಂಧದ್ರವ್ಯಗಳಲ್ಲಿ, ಸಾಬೂನು ಮತ್ತು ಮಾರ್ಜಕ ತಯಾರಿಕೆ, ಗಂಧದ ಕಡ್ಡಿ ತಯಾರಿಕೆ, ಲೈಂಗಿಕ ವ್ಯಾಧಿಗಳಿಗೆ, ರಾಸಾಯನಿಕ ತಯಾರಿಕೆಗೆ, ಸುಂದರ ಮೂರ್ತಿ ಕೆತ್ತನೆಗೆ ಬಳಕೆ ಮಾಡುತ್ತಾರೆ. ಶೀತವಲಯ ದೇಶಗಳಲ್ಲಿ ಚರ್ಮವ್ಯಾಧಿ ಹೆಚ್ಚಾಗಿದ್ದು, ಶ್ರೀಗಂಧದ ಔಷಧಿಗೆ ಬಹುಬೇಡಿಕೆಯಿದೆ.

ಶ್ರೀಗಂಧದ ವಿಜ್ಞಾನಿ ಡಾ. ಎಚ್.ಎಸ್. ಅನಂತಪದ್ಮನಾಭ

ಕನ್ನಡನಾಡು ಗಂಧದ ಬೀಡು ಎನ್ನುವ ಪ್ರಸಿದ್ಧಿಗೆ ಪೂರಕವಾಗುವಂತೆ ಮೈಸೂರಿನಲ್ಲಿ ಜನಿಸಿದ ಅನಂತಪದ್ಮನಾಭ ವಿಶ್ವದ ಬಹುತೇಕ ರಾಷ್ಟ್ರಗಳ ಶ್ರೀಗಂಧ ಬೆಳೆಗೆ ತಜ್ಞರಾಗಿ ಕೆಲಸ ಮಾಡುತ್ತಿರುವುದು ನಮ್ಮ ನಾಡಿನ ಹೆಮ್ಮೆ. 1964ರಿಂದ ಶ್ರೀಗಂಧ ಸೇವೆ ಆರಂಭಿಸಿದ್ದರೂ ಈವರೆಗೂ ಸ್ವಂತ ಆದಾಯಕ್ಕಾಗಿ ಒಂದು ಗಿಡವನ್ನೂ ಬೆಳೆಸದೆ, ನಿಸ್ವಾರ್ಥವಾಗಿ ಪರರ ಬೆಳೆಗಳಿಗೆ ಸಲಹೆ ನೀಡುತ್ತಿದ್ದಾರೆ. ಶ್ರೀಗಂಧ ಬೆಳೆಯ ಮಾರ್ಗದರ್ಶಕರಾಗಿ, ವಿಜ್ಞಾನಿಯಾಗಿ ಶ್ರೀಲಂಕಾ, ಥೈಲ್ಯಾಂಡ್, ಪಪುವಾ ನ್ಯೂಗಿನಿ, ಚೀನಾ, ಇಂಡೋನೇಷ್ಯ, ಹವಾಲಿ ದ್ವೀಪಗಳು, ಉತ್ತರ ಅಮೆರಿಕದ ಫೆಸಿಫಿಕ್ ಸ್ವೀಪಗಳು, ಕೋಸ್ಟರಿಕಾ, ಆಸ್ಟ್ರೇಲಿಯಾ ಸೇರಿ ಜಗತ್ತಿನ 156 ರಾಷ್ಟ್ರಗಳಲ್ಲಿ ಸೇವೆ ನೀಡುತ್ತಿದ್ದಾರೆ. ಈವರೆಗೂ 70 ಸಾವಿರ ಹೆಕ್ಟೇರ್ ವಿಸ್ತೀರ್ಣದ ಶ್ರೀಗಂಧ ಬೆಳೆಗೆ ತಜ್ಞರಾಗಿ ಕೆಲಸ ಮಾಡಿದ್ದು, ಒಂದು ಲಕ್ಷ ಹೆಕ್ಟೇರ್ ಶ್ರೀಗಂಧ ಬೆಳೆಸುವ ಗುರಿ ಹೊಂದಿದ್ದಾರೆ.

ಗಂಧದ ಎಲೆ, ಹೂವು, ಬೀಜಗಳೂ ಉಪಯುಕ್ತ

ಶ್ರೀಗಂಧದ ಎಲೆಗಳು ಹಾಗೂ ಹೂವುಗಳನ್ನು ಒಣಗಿಸಿ ಟೀ ಸೊಪ್ಪಿನ ಜೊತೆಯಲ್ಲಿ ಟೀ ತಯಾರಿಸಲು ಬಳಕೆ ಮಾಡಬಹುದು. ಎಲೆಗಳನ್ನು ಪುಡಿ ಮಾಡಿ ಚೀನಾದಲ್ಲಿ ಸೂಪ್ ಪೌಡರ್ ಆಗಿ ಬಳಕೆ ಮಾಡುತ್ತಿದ್ದಾರೆ. ಇನ್ನು ಹಣ್ಣುಗಳಿಂದ ರಾಸಾಯನಿಕ ಸಂಗ್ರಹಣೆ ಹಾಗೂ ಬೀಜಗಳಿಂದ ಔಷಧಿ ತಯಾರಿಕೆಗೆ ಎಣ್ಣೆ ತೆಗೆಯುವ ಸಂಶೋಧನಾ ಕಾರ್ಯಗಳು ನಡೆಯುತ್ತಿವೆ. ಆದರೆ ರೆಂಬೆಗಳನ್ನು ಉರುವಲಾಗಿ ಬಳಕೆ ಮಾಡಬಹುದು.

ಒಂದು ಮರದಿಂದ ಒಂದು ಲಕ್ಷ ರೂ. ಆದಾಯ

ಶ್ರೀಗಂಧ ಮರಗಳನ್ನು 15 ವರ್ಷಗಳ ನಂತರ ಕಟಾವು ಮಾಡಬಹುದು. ಆಗ ಒಂದು ಮರದಿಂದ ಕನಿಷ್ಠ 10ರಿಂದ 15 ಕೆ.ಜಿ ವರೆಗೆ ಗಂಧದ ಚೇಗು ನಿರೀಕ್ಷೆ ಮಾಡಬಹುದು. ಒಂದು ಕೆ.ಜಿ ಗಂಧಕ್ಕೆ 5ರಿಂದ 6 ಸಾವಿರ ರೂ. ಬೆಲೆಯಿದ್ದು, ಒಂದು ಮರದಿಂದ 50 ರಿಂದ 90 ಸಾವಿರ ರೂ. ಆದಾಯ ನಿರೀಕ್ಷೆ ಮಾಡಬಹುದು. ಒಂದು ಎಕರೆಯಲ್ಲಿ 200 ಮರ ಬೆಳೆಸಿದರೆ 20 ಗಿಡ ಹಾಳಾದರೂ. 180 ಗಿಡಗಳು ನಮ್ಮ ಕಟಾವಿಗೆ ಸಿಗುತ್ತವೆ. ಒಂದು ಎಕರೆಯಿಂದ 90 ಲಕ್ಷದಿಂದ 1.6 ಕೋಟಿ ರೂ.ವರೆಗೂ ಆದಾಯ ಗಳಿಸಬಹುದು.

-ಸತೀಶ್​ ಕೆ.ಬಳ್ಳಾರಿ

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...