ಶ್ರೀ ಶಿವಕುಮಾರ ಸ್ವಾಮೀಜಿ 3ನೇ ತಿಂಗಳ ಪುಣ್ಯಸ್ಮರಣೆ

ತುಮಕೂರು: ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 3ನೇ ತಿಂಗಳ ಪುಣ್ಯಸ್ಮರಣೆ ಪ್ರಯುಕ್ತ ಭಾನುವಾರ ಶ್ರೀಗಳ ಗದ್ದುಗೆ ಅಲಂಕರಿಸಿ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಮಠಕ್ಕೆ ಆಗಮಿಸಿದ ಭಕ್ತರು ಹಾಗೂ ಮಠದ ಮಕ್ಕಳಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನಾಡಿನೆಲ್ಲೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು.

ಪ್ರತಿ ತಿಂಗಳ 21ನೇ ತಾರೀಕಿನಂದು ಡಾ.ಶಿವಕುಮಾರಸ್ವಾಮೀಜಿ ಸ್ವಾಮೀಜಿ ಪುಣ್ಯಸ್ಮರಣೆಯಾಗಿ ಆಚರಿಸಲು ಸಿದ್ಧಗಂಗಾ ಮಠದ ಆಡಳಿತ ಮಂಡಳಿ ನಿರ್ಧರಿಸಿದ್ದು, ಭಾನುವಾರ ಮೂರನೇ ತಿಂಗಳ ವಿಶೇಷ ಪೂಜೆ ನಡೆಯಿತು.

Leave a Reply

Your email address will not be published. Required fields are marked *