ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ

ಆನಂದಪುರ: ಹೋಳಿ ಹಬ್ಬದ ನಿಮಿತ್ತ ಸಮೀಪದ ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವರ ಮಹಾರಥೋತ್ಸವ ಗುರುವಾರ ಅತ್ಯಂತ ವೈಭವದಿಂದ ಜರುಗಿತು.

ರಥೋತ್ಸವ ನಿಮಿತ್ತ ಬೆಳಗ್ಗೆ ದೇವರಿಗೆ ರುದ್ರಾಭಿಷೇಕ, ಅಷ್ಟೋತ್ತರ ಸೇವೆ ಇತ್ಯಾದಿ ಧಾರ್ವಿುಕ ವಿಧಿಗಳು ನಡೆದವು. ನಂತರ ಕೆಂಡದಾರ್ಚನೆ ನಡೆಯಿತು. ವೀರಗಾಸೆ ಕಲಾವಿದರಿಂದ ಆಕರ್ಷಕ ವೀರಗಾಸೆ ಪ್ರದರ್ಶನ ಸಹ ನಡೆಯಿತು. ದೇವರ ಉತ್ಸವ ಮೂರ್ತಿಯ ರಥೋತ್ಸವ ನಂತರ ಧರ್ಮಸಭೆ ಮತ್ತು ದಾಸೋಹ ನಡೆಸಲಾಯಿತು. ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು. ದೇವಾಲಯ ಅಭಿವೃದ್ಧಿ ಸಮಿತಿ ಮತ್ತು ಮುಜರಾಯಿ ಸಮಿತಿ ಪದಾಧಿಕಾರಿಗಳು, ಅರ್ಚಕ ಕುಟುಂಬದವರು ನೇತೃತ್ವ ವಹಿಸಿದ್ದರು.