ಶ್ರೀ ಪದ್ಮಾವತಿಗೆ 108 ಉಡಿ ಸಮರ್ಪಣೆ

ರಿಪ್ಪನ್​ಪೇಟೆ: ನಾಲ್ಕನೇ ಸಂಪತ್ ಶುಕ್ರವಾರ ಅಂಗವಾಗಿ ಹೊಂಬುಜದ ಪಾರ್ಶ್ವನಾಥ ಜಿನಾಲಯದಲ್ಲಿ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಮಹಾಪೂಜೆ ಬಳಿಕ ಶ್ರೀ ಪದ್ಮಾವತಿ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆದವು. ದೇವಿಗೆ 108 ಉಡಿ ಸಹಿತ ವಿವಿಧ ಖಾದ್ಯ ಸಮರ್ಪಿಸಲಾಯಿತು. ತಮಿಳುನಾಡು, ಮಹಾರಾಷ್ಟ್ರ ಮತ್ತಿತರ ಭಾಗಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಆಶೀರ್ವಚನ ನೀಡಿದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಮನುಷ್ಯ ವಿಚಾರಶೀಲ ಜೀವಿಯಾಗಿದ್ದು ಚಿಂತನ ಮತ್ತು ಮನನ ಅವನ ಗುಣಲಕ್ಷಣವಾಗಿದೆ. ಆಚಾರ-ವಿಚಾರಗಳು ಮಾನವ ಜೀವನದ ಎರಡು ಚಕ್ರಗಳು. ಆಚಾರ ಯಾವಾಗ ವಿಚಾರದೊಂದಿಗೆ ಸಮನ್ವಿತವಾಗುತ್ತದೆಯೋ ಆಗ ಜೀವನದಲ್ಲಿ ವಿವೇಕ ಪ್ರಕಟಗೊಳ್ಳುತ್ತದೆ. ವಿವೇಕಪೂರ್ಣ ಧರ್ವಚರಣೆಯಿಂದ ಮಾನವ ಜೀವನಕ್ಕೆ ಮಹತ್ವ ಬರುತ್ತದೆ ಎಂದರು.

Leave a Reply

Your email address will not be published. Required fields are marked *