ಶ್ರೀ ಉಳವಿ ಚನ್ನಬಸವೇಶ್ವರ ರಥೋತ್ಸವ

ವಿಜಯವಾಣಿ ಸುದ್ದಿಜಾಲ ಧಾರವಾಡ: ಶ್ರಾವಣ ಮಾಸದ ಅಂಗವಾಗಿ ಇಲ್ಲಿನ ಯುಬಿ ಹಿಲ್​ನ ಶ್ರೀ ಉಳವಿ ಚನ್ನಬಸವೇಶ್ವರ ರಥೋತ್ಸವ ಸೋಮವಾರ ಭಕ್ತರ ಹಷೋದ್ಘಾರದೊಂದಿಗೆ ಭವಿಜೃಂಭಣೆಯಿಂದ ನಡೆಯಿತು.

ಮಧ್ಯಾಹ್ನ 3.30ಕ್ಕೆ ದೇವಸ್ಥಾನದ ಆವರಣದಲ್ಲಿ ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ರಥ, ಹಿಂದಿ ಪ್ರಚಾರ ಸಭಾ ವೃತ್ತದವರೆಗೆ ಸಾಗಿ ಮರಳಿ ದೇವಸ್ಥಾನಕ್ಕೆ ಆಗಮಿಸಿತು. ಜಾಂಝå್, ಭಜನೆ, ಹೆಜ್ಜೆಮೇಳ, ನಂದಿಕೋಲು ಸೇರಿ ವಿವಿಧ ಕಲಾ ತಂಡಗಳು ರಥೋತ್ಸವದಲ್ಲಿ ಮೆರಗು ನೀಡಿದವು. ರಥೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಭಕ್ತರು ‘ಹರ ಹರ ಮಹಾದೇವ…’ ಜೈಕಾರ ಹಾಕುತ್ತ ರಥಕ್ಕೆ ನಿಂಬೆಹಣ್ಣು, ಉತ್ತತ್ತಿ ಸಮರ್ಪಿಸಿ ಕೃತಾರ್ಥರಾದರು.

ಬೆಳಗ್ಗೆ ಉಳವಿ ಚನ್ನಬಸವೇಶ್ವರ ಹಾಗೂ ವೀರಭದ್ರೇಶ್ವರರಿಗೆ ಮಹಾರುದ್ರಾಭಿಷೇಕ, ವಚನ ಪಠಣ, ವಿವಿಧ ಧಾರ್ವಿುಕ ಕಾರ್ಯಕ್ರಮ ನಡೆದವು. ಸಾಣೇಹಳ್ಳಿ ಮಠಾಧೀಶ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಹಾಪ್ರಸಾದ ಪೂಜೆ ನೆರವೇರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ದೇವರ ದರ್ಶನ ಪಡೆದು ಪ್ರಸಾದ ಸೇವಿಸಿದರು.

ಅಗಡಿ ಅಕ್ಕಿಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ರಥೋತ್ಸವದ ಸಮ್ಮುಖ ವಹಿಸಿದ್ದರು. ಉಳವಿ ಬಸವೇಶ್ವರ ಧರ್ಮ ಫಂಡ್ ಅಧ್ಯಕ್ಷ ಸಣ್ಣಬಸಪ್ಪ ಪಟ್ಟಣಶೆಟ್ಟಿ, ಕಾರ್ಯಧ್ಯಕ್ಷ ಡಾ ಕೆ.ಎಂ. ಗೌಡರ, ಗೌರವ ಕಾರ್ಯದರ್ಶಿ ಬಿ. ಎಂ. ಸೂರಗೊಂಡ, ಪದಾಧಿಕಾರಿಗಳಾದ ಬಾಬಣ್ಣ ವಾಣಿ, ಜಿ.ಬಿ. ಅಳಗವಾಡಿ, ಟಿ.ಎಲ್.ಪಾಟೀಲ, ಎಂ.ಎಲ್. ಹಿರೇಗೌಡರ, ಸುರೇಶ ಹೆಗ್ಗೇರಿ, ಎನ್.ಬಿ. ಗೋಲಣ್ಣವರ, ಡಿ.ಬಿ. ಪಾಟೀಲ, ಪಿ.ಎಸ್. ದಂಡಿನ್, ವಿಜಯೇಂದ್ರ ಪಾಟೀಲ, ಬಿ.ಸಿ. ತಾಯಣ್ಣವರ, ವಿ.ಎಸ್. ಅರಳಲೇಮಠ, ಇತರರು ಇದ್ದರು.