ಶ್ರೀನಿವಾಸ್​ಗೆ ಮೇಯರ್ ಗದ್ದುಗೆ? ಒಕ್ಕಲಿಗ ವಿರೋಧಿ ಹಣೆಪಟ್ಟಿ ಕಿತ್ತುಹಾಕಲು ಬಿಜೆಪಿ ತಂತ್ರ

Latest News

ವೆದರ್ ವಾರ್: ಹವಾಮಾನವೇ ಯುದ್ಧಾಸ್ತ್ರ!

ಸುತ್ತಮುತ್ತಲಿನ ಶತ್ರುರಾಷ್ಟ್ರಗಳು ಯಾವ ಸಮಯದಲ್ಲಿ ಎಂಥ ರಣತಂತ್ರ ಹೆಣೆಯುತ್ತವೆ ಎಂಬುದೇ ಒಂದು ನಿಗೂಢ ಸಂಗತಿ. ನೆಲದ ಮೇಲೆ ಯುದ್ಧ ಮಾಡುತ್ತಾರೆ ಎಂದುಕೊಂಡರೆ ನೀರಿನಡಿ...

ಪ್ರಾಬ್ಲಂ ಬೇಸ್ಡ್ ಲರ್ನಿಂಗ್ ಪರಿಣಾಮಕಾರಿ ಶಿಕ್ಷಣಶಾಸ್ತ್ರ

ಸಮಸ್ಯೆ ಆಧರಿತ ಕಲಿಕೆ ವಿಧಾನ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಬಳಕೆಯಲ್ಲಿದೆ. ಈ ವಿಧಾನದಲ್ಲಿ ಇನ್ನೂ ಹೆಚ್ಚಿನ ಜ್ಞಾನ ಪಡೆಯುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಕೆಎಲ್​ಇ ತಾಂತ್ರಿಕ...

ಮಿನಿ ಕವಿಯ ಪರ್ಸಿನಲ್ಲಿ ಮನಿ ಇರುವುದಿಲ್ಲ

ಕಳ್ಳ!: ಇದು ಎರಡೇ ಅಕ್ಷರದ ಪದ. ಆದರೂ ಇದು ಮೂಡಿಸುವ ಸಂಚಲನ ಅಷ್ಟಿಷ್ಟಲ್ಲ. ಬೇಕಿದ್ದರೆ ನೀವೇ ಪರೀಕ್ಷಿಸಬಹುದು. ನಾಲ್ಕು ಜನ ಸ್ನೇಹಿತರು ಮಾತನಾಡುತ್ತ...

ಸಚಿನ್ ಜೀವನದ ಘಟನೆಗಳ ಅನಾವರಣ

ವಿಶ್ವ ಕ್ರಿಕೆಟ್​ನಲ್ಲಿ ಸಚಿನ್ ತೆಂಡುಲ್ಕರ್ ಎಂಬ ಹೆಸರು ಇಂದಿಗೂ ಬಹುದೊಡ್ಡ ಬ್ರಾ್ಯಂಡ್. ನಿರಂತರವಾಗಿ 24 ವರ್ಷ (1989-2013) ಭಾರತಿಯ ಕ್ರಿಕೆಟ್​ನ ಮಹಾರಾಜನಂತೆ ಕಂಗೊಳಿಸಿದ...

ವಿಜಯವಾಣಿ ಸಿನಿಮಾ ವಿಮರ್ಶೆ: ಬದುಕೇ ಕ್ಲಾಸ್, ಗಣಿ ಪಾಸ್

ಅವಮಾನ.. ಅವಮಾನ.. ಅವಮಾನ... ಹೀಗೆ ಹೆಜ್ಜೆ ಹೆಜ್ಜೆಗೆ ಅವಮಾನ ಎದುರಿಸಿದ ವ್ಯಕ್ತಿಗೆ ಕೊನೆಗೆ ಅದೇ ಅವಮಾನ ವರಮಾನ-ಸನ್ಮಾನವಾಗಿ ಪರಿಣಮಿಸುವುದೇ ‘ನಮ್ ಗಣಿ ಬಿಕಾಂ...

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಗಾದಿಗೆ ಬಿಜೆಪಿ ಕಾರ್ಪೋರೇಟರ್​ಗಳ ನಡುವಿನ ಪೈಪೋಟಿ ತೀವ್ರಗೊಂಡಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸೆ.27ರಂದು ನಡೆಯುವ ಚುನಾವಣೆಯಲ್ಲಿ ಸುಲಭವಾಗಿ ಪಾರುಪತ್ಯ ಸಾಧಿಸಬಹುದೆಂಬ ನಿರೀಕ್ಷೆ ಯಲ್ಲಿರುವ ಆಕಾಂಕ್ಷಿಗಳು ಗದ್ದುಗೆಗೇರಲು ಸಚಿವರ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

ಚುನಾವಣೆಗೆ ಇನ್ನು ಕೇವಲ 9 ದಿನ ಉಳಿದಿರುವುದರಿಂದ ಯಾರಿಗೆ ಮೇಯರ್ ಗೌನ್ ತೊಡುವ ಭಾಗ್ಯ ಕರುಣಿಸಬೇಕೆಂದು ಅಳೆದು ತೂಗುತ್ತಿರುವ ಬಿಜೆಪಿ ನಾಯಕರು, ಅಭ್ಯರ್ಥಿ ಆಯ್ಕೆಯಲ್ಲೂ ಭಿನ್ನ ತಂತ್ರಗಾರಿಕೆ ನಡೆಸಿದ್ದಾರೆ. ಒಕ್ಕಲಿಗ ವಿರೋಧಿ ಹಣೆ ಪಟ್ಟಿ ಕಿತ್ತುಹಾಕುವ ಸಲುವಾಗಿ ಎಲ್. ಶ್ರೀನಿವಾಸ್​ಗೆ ಮೇಯರ್ ಹುದ್ದೆ ಒಲಿಯುವ ಸಾಧ್ಯತೆಯಿದೆ.

ಒಂದು ಏಟು, ಎರಡು ಗುರಿ: ಮೇಯರ್ ಚುನಾವಣೆ ಘೋಷಣೆ ಯಾದ ದಿನದಿಂದ ಬೆಳೆಯುತ್ತಿರುವ ಬಿಜೆಪಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಯಾರ ಆಯ್ಕೆ ಎಷ್ಟು ಸಮಂಜಸ ಎಂಬ ಮೌಲ್ಯಮಾಪನ ನಡೆಯುತ್ತಿದೆ. ಈ ಮಧ್ಯೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಇಡಿ ವಶದಿಂದಾಗಿ ಬಿಜೆಪಿಗೆ ಅಂಟಿಕೊಂಡಿರುವ ಒಕ್ಕಲಿಗ ವಿರೋಧಿ ಹಣೆಪಟ್ಟಿ ಕಿತ್ತು ಹಾಕಲು ಒಕ್ಕಲಿಗ ಸಮುದಾಯಕ್ಕೆ ಮೇಯರ್ ಪಟ್ಟ ಕಟ್ಟಲು ಚಿಂತನೆ ನಡೆದಿದೆ.

ಮೇಯರ್ ರೇಸ್​ನಲ್ಲಿ ಮುಂಚೂಣಿಯಲ್ಲಿರುವ ಕುಮಾರಸ್ವಾಮಿ ಲೇಔಟ್ ವಾರ್ಡ್ ಕಾಪೋರೇಟರ್ ಹಾಗೂ ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್​ಗೆ ಮಣೆ ಹಾಕಲು ಚರ್ಚೆ ತೀವ್ರವಾಗಿದೆ. ಪಕ್ಷದ ಮಟ್ಟದಲ್ಲಿ ಈವರೆಗೂ ಒಮ್ಮತದ ತೀರ್ಮಾನ ಕೈಗೊಳ್ಳದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಣ ಒಕ್ಕಲಿಗರಾದ ಎಲ್. ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ನಗರದಲ್ಲಿ ಒಕ್ಕಲಿಗರ ಸಂಖ್ಯೆ ಅಧಿಕವಾಗಿದ್ದು, ಪಾಲಿಕೆಯಲ್ಲಿ ಈ ಸಮಯದಾಯಕ್ಕೆ ಸೇರಿದ ಸದಸ್ಯರಿದ್ದರೂ 2015ರ ನಂತರ ಯಾರಿಗೂ ಬೆಂಗಳೂರಿನ ಪ್ರಥಮ ಪ್ರಜೆಯಾಗುವ ಅವಕಾಶ ದೊರೆತಿಲ್ಲ. ಹೀಗಾಗಿ ಈ ಬಾರಿ ಒಕ್ಕಲಿಗ ಸಮುದಾಯದ ನಾಯಕ ಮೇಯರ್ ಆಗುವ ಸಾಧ್ಯತೆ ಅಧಿಕವಾಗಿದೆ.

ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವರು

ಕಾಡುಮಲ್ಲೇಶ್ವರ ವಾರ್ಡ್​ನಿಂದ ಎರಡು ಬಾರಿ (2010, 2015) ಜಯ ಗಳಿಸಿರುವ ಮತ್ತು 2010-11ನೇ ಸಾಲಿನ ತೆರಿಗೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಮಂಜುನಾಥ ರಾಜು ಉಪಮುಖ್ಯ ಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಬೆಂಬಲದೊಂದಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 2010ರಲ್ಲಿ ನಾಗರಬಾವಿ ವಾರ್ಡ್, 2015ರಲ್ಲಿ ಗೋವಿಂದರಾಜನಗರ ವಾರ್ಡ್​ನಿಂದ ಆಯ್ಕೆಯಾದ ಸದಸ್ಯ ಉಮೇಶ್ ಶೆಟ್ಟಿ ಪರ ವಿ. ಸೋಮಣ್ಣ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.

ದೇವ್ರಾಣೆಗೂ ಮೇಯರ್ ಗಾದಿ ಬೇಡ

ವೃಷಭಾವತಿನಗರ ವಾರ್ಡ್ ಕಾಪೋರೇಟರ್ ಹಾಗೂ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಅವರನ್ನು ಮೇಯರ್ ಮಾಡುವ ಮೂಲಕ ಅವರ ಪತಿ ಗೋಪಾಲಯ್ಯ ಅವರಿಗೆ ಬಿಜೆಪಿ ಸರ್ಕಾರ ಗಿಫ್ಟ್ ನೀಡಲಿದೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಅನರ್ಹತೆ ಕುರಿತ ತೀರ್ಪು ಸುಪ್ರೀಂಕೋರ್ಟ್​ನಿಂದ ಬಂದ ನಂತರ ಮಂತ್ರಿಯಾಗುವ ಲೆಕ್ಕಾಚಾರ ಹಾಕಿರುವ ಗೋಪಾಲಯ್ಯ, ಪತ್ನಿಗಾಗಿ ಮೇಯರ್ ಸ್ಥಾನವನ್ನು ದೇವರಾಣೆಗೂ ಕೇಳಿಲ್ಲ ಎಂದು ಆಪ್ತವಲಯದಲ್ಲಿ ಹೇಳಿಕೊಂಡಿದ್ದಾರೆ.

- Advertisement -

Stay connected

278,507FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....