ಶ್ರೀಗಂಧಕ್ಕೆ ಮಾತ್ರ ಪರವಾನಗಿ

Latest News

1300 ಕೋಟಿ ರೂಪಾಯಿ ಅನುದಾನ ಕೊಟ್ಟಾಗ ಕಳ್ಳ ಬಿಲ್ ಮಾಡಿ ದುಡ್ಡು ಲಪಟಾಯಿಸಿದರು ಎಂದ ಎಚ್​ಡಿಕೆ

ಬೆಂಗಳೂರು: ಅವರು ಎರಡನೇ ಬಾರಿ ನನ್ನ ಬೆನ್ನಿಗೆ ಚೂರಿ ಹಾಕಿದ್ರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಟಿಕೆಟ್ ಕೊಡಲು ನಿರಾಕರಿಸಿದ್ದೆ. ಆದರೆ ದೇವೇಗೌಡರನ್ನು...

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ ಬಾಂಗ್ಲಾ, ಪಿಂಕ್​ ಬಣ್ಣದ ಸ್ವೀಟ್ಸ್ ಫೋಟೋ ಶೇರ್​ ಮಾಡಿದ ಗಂಗೂಲಿ!

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ...

ಚನ್ನರಾಯಪಟ್ಟಣದಲ್ಲಿ ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಚನ್ನರಾಯಪಟ್ಟಣ: ಸೋಲು-ಗೆಲುವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಪಟ್ಟಣದ ನವೋದಯ ಸಂಘದ ಶಾಲಾ ಆವರಣದಲ್ಲಿ ನವೋದಯ ವಿದ್ಯಾ ಸಂಘದ ವತಿಯಿಂದ...

ಚನ್ನರಾಯಪಟ್ಟಣದಲ್ಲಿ ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಚನ್ನರಾಯಪಟ್ಟಣ: ಸೋಲು-ಗೆಲುವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಪಟ್ಟಣದ ನವೋದಯ ಸಂಘದ ಶಾಲಾ ಆವರಣದಲ್ಲಿ ನವೋದಯ ವಿದ್ಯಾ ಸಂಘದ ವತಿಯಿಂದ...

ಗಂಡಸಿ ಗ್ರಾಮದಲ್ಲಿ ಕಾರ್ತಿಕ‌ ಮಹೋತ್ಸವ

ಅರಸೀಕೆರೆ:ತಾಲೂಕಿನ ಗಂಡಸಿ ಗ್ರಾಮದಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇಗುಲದ ಆವರಣದಲ್ಲಿ ಕಾರ್ತಿಕ ಮಹೋತ್ಸವ ಆಯೋಜಿಸಲಾಗಿತ್ತು. ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ಶ್ರೀ ವೀರಸೋಮೇಶ್ವರ ಪ್ರಸನ್ನ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡು...
  • ನಮ್ಮ ಜಮೀನಿನಲ್ಲಿ ಹಲಸು, ಮಾವು, ಶ್ರೀಗಂಧ, ರಕ್ತಚಂದನ ಮತ್ತು ತೇಗದ ಗಿಡಗಳನ್ನು ನೆಡಬೇಕೆಂದು ನಿಶ್ಚಯಿಸಿದ್ದೇನೆ. ಈ ಕುರಿತು ಮಾಹಿತಿ ಕೊಡಿ.

| ರಮೇಶ್ ಭಟ್ ಮೂಡುಬೆಟ್ಟು ಕೊಡವೂರು, ಉಡುಪಿ

ಶ್ರೀಗಂಧ, ರಕ್ತಚಂದನ ಮತ್ತು ಸಾಗುವಾನಿ ಗಿಡಗಳನ್ನು ನೀವು ಸಾಮಾಜಿಕ ಅರಣ್ಯ ವಿಭಾಗದಲ್ಲಿರುವ ಎಸ್​ಎಂಎಎಫ್ ಯೋಜನೆಯಲ್ಲಿ ಪಹಣಿ ನೀಡಿ ಜಾಗ ತೋರಿಸಿ ಉಚಿತವಾಗಿ ಪಡೆಯಬಹುದು. ಅತ್ಯಂತ ಕಡಿಮೆ ಬೆಲೆಯಲ್ಲಿಯೂ ಸಹ ಸಸಿಗಳು ಸಿಗುತ್ತವೆ. ಉಳಿದಂತೆ ಹಲಸು, ಮಾವು, ಗೋಡಂಬಿ, ನೆಲ್ಲಿ, ಹುಣಸೆ, ನುಗ್ಗೆ, ಕರಿಬೇವು, ಕೋಕಂ, ಪೇರಲೆ, ದಾಲ್ಚಿನ್ನಿ ಮುಂತಾದವುಗಳನ್ನು ಖಾಸಗಿ ನರ್ಸರಿಗಳಲ್ಲಿ ಕೊಳ್ಳುವುದು ಒಳ್ಳೆಯದು. ಅದರಲ್ಲೂ ಕಸಿ ಮಾಡಿದ ಗಿಡಗಳಾದರೆ ಬೇಗ ಫಸಲು ಬರುತ್ತವೆ. ಕೆಲವು ನೆಟ್ಟ ವರ್ಷವೇ ಫಸಲು ಬರುವವೂ ಇವೆ. ಶ್ರೀಗಂಧ, ರಕ್ತಚಂದನ ಮತ್ತು ಸಾಗುವಾನಿ 15 ವರ್ಷಗಳಿಗೆ ಕಟಾವಿಗೆ ಬರುವ ಕಾರಣ ಅಲ್ಲಿಯವರೆಗೆ ಒಂದಿಲ್ಲೊಂದು ಇತರ ಅರಣ್ಯ ಗಿಡಗಳಿಂದ ಆದಾಯವನ್ನು ಪಡೆಯುತ್ತಿರಬಹುದು.

ನೆನಪಿಡಿ, ಸದ್ಯದಲ್ಲಿ ಶ್ರೀಗಂಧಕ್ಕೆ ಮಾತ್ರ ಕಾನೂನು ಸಡಿಲ ಮಾಡಿ ಪರವಾನಿಗೆ ಕೊಡಬೇಕೆಂದು ತೀರ್ವನಿಸಲಾಗಿದೆಯೇ ಹೊರತು ಉಳಿದ ಅರಣ್ಯ ಸಸ್ಯಗಳಿಗಲ್ಲ. ಹೀಗಾಗಿ ಉಳಿದ ಅರಣ್ಯ ಸಸಿಗಳನ್ನು ನೆಟ್ಟು ಬೆಳೆಸುವ ಕನಸು ಮಾತ್ರ ಕಾಣಿರಿ. ಅವುಗಳನ್ನು ಕಡಿದು, ಮಾರಿ, ಕೋಟ್ಯಧೀಶರಾಗುವ ಕನಸು ಕಾಣಬೇಡಿ. ಉಳಿದ ಮರಗಳನ್ನು ಕಡಿಯಲು ಪರವಾನಗಿ ಸಿಗುವುದು ತುಂಬ ಕಷ್ಟ.

ನೀವು ಏನೆಲ್ಲ ಸಸ್ಯಗಳನ್ನು ಬೆಳೆಸ ಬೇಕೆಂದಿದ್ದರೂ ಅದಕ್ಕೆ ಮೊದಲಿಗೆ ನೀರು ಬೇಕಲ್ಲ? ಅದರ ವ್ಯವಸ್ಥೆ ಹೇಗೆ ಮಾಡುವಿರಿ ಎನ್ನುವುದನ್ನು ತಿಳಿಸಿಲ್ಲ. ಏಕೆಂದರೆ, ಅರಣ್ಯದ ಸಸ್ಯಗಳಾದರೂ ನೆಟ್ಟು ಬೆಳೆಸುವುದಾದರೆ ಕನಿಷ್ಠ ಮೂರು ವರ್ಷಗಳ ಕಾಲ ನೀರು ಬೇಕು. ಬರೀ ಮಳೆಯೊಂದನ್ನೇ ನಂಬಿ ಅದಾಗಿಯೇ ಬೆಳೆಯುತ್ತದೆ ಎಂದು ಸುಮ್ಮನಿದ್ದರೆ ಬಿಸಿಲಿಗೆ ಸುಟ್ಟು ಹೋಗುವುದು ನಿಶ್ಚಿತ. ಜಲಾನಯನ ಯೋಜನೆಯಲ್ಲಿ ನೀಡಿದ ಅರಣ್ಯ ಸಸಿಗಳನ್ನು ಅನೇಕರು ಹೀಗೆ ಕಳೆದುಕೊಂಡಿದ್ದಾರೆ. ಸಸಿಗಳು ಉಚಿತವಾಗಿ ಸಿಕ್ಕಿದ್ದಕ್ಕೆ ಸತ್ತರೂ ಯಾರಿಗೂ ಪಶ್ಚಾತ್ತಾಪವಾಗಿಲ್ಲ! ಮಳೆ ನೀರನ್ನು ಮಾತ್ರ ನಂಬಿ ನೆಡುವುದಾದರೆ, ಪ್ರತಿ ವರ್ಷ ಕನಿಷ್ಠ ಶೇ. 50ರಷ್ಟು ಸಸಿಗಳನ್ನು ನೆಡುತ್ತಿರಬೇಕಾಗುತ್ತದೆ.

ಶ್ರೀಗಂಧದ ಬಗ್ಗೆ ನೀವೀಗಾಗಲೇ ಓದಿರುತ್ತೀರಿ. ಆದರೆ ರಕ್ತಚಂದನದ ಸಸಿಗಳು ಬೆಳೆಯುವುದು ತುಂಬ ನಿಧಾನ. ನಾಲ್ಕಾರು ವರ್ಷಗಳಾದರೂ ಅವು ಒಂದೇ ರೀತಿಯಲ್ಲಿ ಕಂಕಿಂ ಅನ್ನದೇ ಇರುತ್ತವೆ. ಮೊಳಕಾಲು ಮಟ್ಟಕ್ಕೆ ಬೆಳವಣಿಗೆ ನಿಂತೇ ಹೋಗಿರುತ್ತದೆ. ಅದರ ಜೊತೆಯಲ್ಲೇ ನೆಟ್ಟ ಹೈಬ್ರೀಡ್ ಸಾಗುವಾನಿ, ಹೆಬ್ಬೇವುಗಳೆಲ್ಲ ಆಕಾಶಕ್ಕೆ ಮುಖ ಮಾಡಿರುತ್ತವೆ. ಆಗ ನಿಮಗೆ ಚಿಂತೆಯಾಗುವುದು ಸಹಜ. ರಕ್ತಚಂದನವನ್ನು ಪ್ರತ್ಯೇಕವಾಗಿ ನೆಡಿ. ಮತ್ತು ಅದಕ್ಕೆ ಪ್ರತ್ಯೇಕವಾಗಿ ಐದಾರು ವರ್ಷಗಳ ಕಾಲ ನೀರು, ಗೊಬ್ಬರ ನೀಡಿ. ಆಗ ಬೆಳವಣಿಗೆ ಕಾಣಿಸುತ್ತದೆ.

ಉಳಿದಂತೆ ಫಲ ನೀಡುವ ಸಸ್ಯಗಳಿಗೆ ನೀವು ನೀರನ್ನಾದರೂ ಕೆಲವು ವರ್ಷಗಳ ಕಾಲ ನೀಡಬೇಕಾದ್ದು ನ್ಯಾಯ. ಆಗ ಅವು ಬೇಗಬೇಗ ಫಲ ನೀಡಿ ನಿಮ್ಮ ಖರ್ಚುವಚ್ಚಗಳನ್ನು ಸರಿದೂಗಿಸುತ್ತ ಬರುತ್ತವೆ. ನೆಲ್ಲಿಯಾದರೆ ಕೊಳೆಯದ ಕಾರಣ ಒಣಗಿಸಿಯೂ ಮಾರಬಹುದು. ದಾಲ್ಚಿನ್ನಿಯನ್ನು ಒಂದು ವರ್ಷಗಳ ಕಾಲ ಇಟ್ಟು ಕೊಡಬಹುದು. ಮನೆ ಬಾಗಿಲಿಗೇ ಗಿರಾಕಿಗಳು ಬರುತ್ತಾರೆ. ಮಿಡಿಮಾವಾದರೆ ಉಪ್ಪಿನಕಾಯಿ ಮನೆಗೆ ಮತ್ತು ಹೆಚ್ಚಾದದ್ದು ಮಾರಾಟಕ್ಕೆ. ಗೋಡಂಬಿಯು ಯಾವತ್ತಿಗೂ ಮಾರಾಟವಾಗುವ ಬೆಳೆ. ಹುಣಸೆ ಪಿಕೆಎಂ-1, ಪಿಕೆಎಂ-2, ಉರಿಗಂ-1 ಮುಂತಾದ ತಳಿಗಳು ಕ್ವಿಂಟಾಲ್​ಗಟ್ಟಲೆ ಕಾಯಿಗಳನ್ನು ಮೂರೇ ವರ್ಷಗಳಲ್ಲಿ ಬಿಡುತ್ತವೆ. ಪಿಕೆಎಂ-1 ನುಗ್ಗೆ ತಳಿಯು ಗಿಡವೇ ಮುಚ್ಚಿ ಹೋಗುವಷ್ಟು ಕಾಯಿಗಳನ್ನು ಬಿಡುತ್ತದೆ. ಹೀಗೆ ನಾಟ ಮರಗಳ ಜೊತೆ ಫಲ ನೀಡುವ ಸಸ್ಯಗಳನ್ನು ಸೇರಿಸಿದರೆ ವರ್ಷಾವಧಿ ಒಂದಿಲ್ಲೊಂದು ಫಸಲು ನೀಡುತ್ತ ಜಮೀನನ್ನು ಫಲಭರಿತವಾಗಿರುವಂತೆ ನೋಡಿಕೊಳ್ಳುತ್ತವೆ. ಓದುಗರ ಪ್ರಶ್ನೆ

ನಮ್ಮ ತಂದೆ ಎರಡು ಎಕರೆ ಜಮೀನಿನಲ್ಲಿ 300 ಶ್ರೀಗಂಧದ ಗಿಡಗಳನ್ನು ಬೆಳೆಸಿದ್ದಾರೆ. ಅವುಗಳ ರಕ್ಷಣೆಗೆ, ಅರ್ಥಾತ್ ತಂತಿ ಬೇಲಿ ನಿರ್ಮಾಣ ಹಾಗೂ ಇನ್ನಿತರ ವ್ಯವಸ್ಥೆಗಳಿಗೆ ಸರ್ಕಾರದಿಂದ ಅಥವಾ ಯಾವುದಾದರೂ ಸಂಸ್ಥೆಗಳಿಂದ ಸಹಾಯ ಸೌಲಭ್ಯಗಳಿವೆಯೇ?

| ಮಾಲತೇಶ್ ಶ್ಯಾಗೋಟಿ, ಕುಂದಗೋಳ

- Advertisement -

Stay connected

278,667FansLike
575FollowersFollow
611,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...