ಬಸವಕಲ್ಯಾಣ: ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು , ಇಡೀ ಜೀವನದ ಉದ್ದಕ್ಕೂ ಕಲಿತರೂ ಮುಗಿಯದ ಜ್ಞಾನ ಕಣಜ. ನಾವು ಪಡೆಯುವ ಶಾಲಾ ಶಿಕ್ಷಣ ಅದರ ಒಂದು ಭಾಗ. ಶ್ರದ್ಧೆಯಿಂದ ಅಧ್ಯಯನ ಶೀಲರಾದವರು ಮಹತ್ವದ ಸಾಧನೆ ಮಾಡಬಲ್ಲರು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರೀಮಠದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ೨೦೧೪-೧೫ನೇ ಸಾಲಿನ ವಿದ್ಯಾರ್ಥಿ ಬಳಗದಿಂದ ಸೋಮವಾರ ಆಯೋಜಿಸಿದ್ದ ಗುರುವಂದನೆ ಹಾಗೂ ೭೫೫ನೇ ತುಲಾಭಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಇಡೀ ಜಗತ್ತೇ ಒಂದು ಪಾಠಶಾಲೆ, ಜೀವನವೇ ಶಿಕ್ಷಕ, ಅನುಭವಗಳೇ ಅಧ್ಯಾಯ, ಇಲ್ಲಿ ಶ್ರದ್ಧೆಯಿಂದ ಕಲಿತರೆ ಮಾತ್ರ ಶ್ರೇಯಸ್ಸಿನ ಬದುಕು ನಮ್ಮದಾಗಿಸಿಕೊಳ್ಳಬಹುದಾಗಿದೆ ಎಂದರು.
ಗುರುಭಕ್ತಿಯಿಂದ ನಮ್ಮನ್ನು ಗೌರವಿಸಿ ತುಲಾಭಾರ ಸೇವೆ ಮಾಡಿರುವುದು ಸಂತಸವಾಗಿದ್ದು, ಸಮಸ್ತ ವಿದ್ಯಾರ್ಥಿ ಬಳಗದ ಭವಿಷ್ಯ ಉಜ್ವಲಗೊಳ್ಳಲಿ ಎಂದು ಶುಭ ಹಾರೈಸಿದರು.
ಚಂದ್ರಕಾಂತ ಕಿವಡೆ, ಸುರೇಖಾ ಪಾಟೀಲ್ ಗದಲೇಗಾಂವ ಬಿ.ಮಾತನಾಡಿದರು.
ಡಾ.ಚಂದ್ರಕಾಂತ ಗುದಗೆ, ಪ್ರಮುಖರಾದ ಬಾಬು ಹೊನ್ನಾ ನಾಯಕ, ಮಲ್ಲಿನಾಥ ಹಿರೇಮಠ, ಸುನೀತಾ ನಾಲೂರೆ, ಹಣಮಂತ ಜಮಾದಾರ, ಉಮಾಕಾಂತ ಭಂಗೆ, ಅಹಮದ್ ಅಲಿ, ಅಮರೇಶ್ವರ ಸ್ವಾಮಿ, ಸಿದ್ರಾಮಯ್ಯ ಸ್ವಾಮಿ, ಬಸವರಾಜ ಹುಡೇ, ವಿಜಯಕುಮಾರ ಜಮಾದಾರ, ಪುಷ್ಪಾವತಿ ಇದ್ದರು.
ಕರೀಷ್ಮಾ ಶೇಕ್ ಸ್ವಾಗತಿಸಿದರು. ಶಿವಾನಂದ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಶಿವರಾಜ ಪೀರಜೆ ವಂದಿಸಿದರು. ವಿಜಯಲಕ್ಷ್ಮೀ ಪೂಜಾರಿ ಹಾಗೂ ಪ್ರತಿಮಾ ಕಾಂಬಳೆ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಶಿವರಾಜ ಚೌಡಾಪುರ, ಕಾರ್ತಿಕ ಸ್ವಾಮಿ ಯಲದಗುಂಡಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು.
ಒಂದು ದೇಶದ ಪ್ರಗತಿ ಆ ದೇಶದ ಶೈಕ್ಷಣಿಕ ಗುಣಮಟ್ಟದ ಮೇಲೆ ಅವಲಂಬಿಸಿದೆ ಎನ್ನುವುದು ಅರಿತು ಸಾಕ್ಷರ ದೇಶ ಕಟ್ಟುವಲ್ಲಿ ಎಲ್ಲರೂ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕು.
| ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಪೀಠಾಧಿಪತಿ, ಸಂಸ್ಥಾನ ಹಿರೇಮಠ ಹಾರಕೂಡ