ಶ್ರದ್ಧಾ ಭಕ್ತಿಯಿಂದ ನೆರವೇರಿದ ಕಳಸಾರೋಹಣ

 ಕಲಬುರಗಿ: ಅವರಾದ(ಬಿ) ಹತ್ತಿರದ ಶ್ರೀ ಸ್ವಾಮಿ ಸಮರ್ಥ ಮಂದಿರದ ಕಳಸಾರೋಹಣ ಶುಕ್ರವಾರ ಧಾರ್ಮಿಕ ಕಾರ್ಯಗಳೊಂದಿಗೆ ಪೂಜ್ಯರ ಸನ್ನಿಧಾನ ಮತ್ತು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಜೀಣೋದ್ಧಾರಗೊಂಡ ಮಂದಿರದಲ್ಲಿ ಗುರುಪೂರ್ಣಿಮೆ ಹಾಗೂ ಕಳಸಾರೋಹಣ ನಿಮಿತ್ತ ಮಂಗಳವಾರದಿಂದ ನಾಲ್ಕು ದಿನ ನಿರಂತರ ಪೂಜಾ ಕೈಂಕರ್ಯ ನೆರವೇರಿದವು. ಶುಕ್ರವಾರ ಬೆಳಗ್ಗೆ ಪಂಡಿತರು ದತ್ತಯಾಗ, ಗುರು ಮಂತ್ರ ಹವನ, ಪೂರ್ಣಾಹುತಿ, ಮಹಾಮಂಗಳಾರತಿ ನಡೆಸಿದರು.
ನಂತರ ಶುಭ ಘಳಿಗೆ 11.19ಕ್ಕೆ ಮಠಾಧೀಶರ ಸಮ್ಮುಖದಲ್ಲಿ ಮಂದಿರಕ್ಕೆ ಐದಡಿ ಎತ್ತರದ ಪಂಚಲೋಹಗಳಿಂದ ನಿರ್ಮಿಸಿದ ಕಳಸಾರೋಹಣ ಮಾಡಲಾಯಿತು. ಸಮಾಧಾನದ ಶ್ರೀ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ, ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಮುತ್ಯಾನ ಬಬಲಾದದ ಶ್ರೀ ಗುರುಪಾದಲಿಂಗ ಶಿವಯೋಗಿಗಳು, ಗಾಣಗಾಪುರದ ಶ್ರೀ ಪ್ರಕಾಶ ಮಹಾರಾಜ ಸಾಕ್ಷಿಯಾದರು.
ಸಮರ್ಥ ನೆಮ್ಮದಿ ತಾಣ: ಕಳಸಾರೋಣ ಬಳಿಕ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹಾಗೂ ಶ್ರೀ ಗುರುಪಾದಲಿಂಗ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಬಹಿರಂಗ ಸಭೆ ನಡೆಯಿತು. ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಮಂದಿರದಲ್ಲಿ ನಡೆದ ಕಳಸಾರೋಹಣದಿಂದ ವಿಶಿಷ್ಟ ಕಳೆ ಬಂದಿದೆ ಎಂದರು.
ಪ್ರಕೃತಿಗೆ ಮೀರಿದ್ದು ಬೇರಾವುದೂ ಇಲ್ಲ. ಪ್ರಕೃತಿಯ ಗಾಳಿ, ನೀರು ಮಧ್ಯೆ ಸ್ಥಾಪಿತವಾಗಿರುವ ಸ್ವಾಮಿ ಸಮರ್ಥರ ದೇಗುಲ ಕಲಬುರಗಿ ಜನತೆಯ ನೆಮ್ಮದಿ ತಾಣವಾಗಿದೆ ಎಂದು ಹೇಳಿದರು.
ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ರಾಮದಾಸ ವೆಂಗೊಲರ್ಕರ, ಉಪಾಧ್ಯಕ್ಷರಾದ ಬಸವರಾಜ ಮಾಡಗಿ, ಅನಿಲ ವಸಂತ, ಪದಾಧಿಕಾರಿಗಳಾದ ಹಣಮಂತ ಪ್ರಭು, ಶಿವಾನಂದ ಗುಡ್ಡ, ಮಲ್ಲಿಕಾರ್ಜುನ, ಅಲ್ಲಮಪ್ರಭು ಖೂಬಾ, ಬಸವರಾಜ ಭೀಮಳ್ಳಿ, ಡಾ.ಜಗನ್ನಾಥ ಬಿಜಾಪುರ ಇತರರಿದ್ದರು. 

 

Leave a Reply

Your email address will not be published. Required fields are marked *