ಶೋಷಿತರಿಗೆ ವಿದ್ಯೆ ನೀಡಿದ ಮಹಾನ್ ತಾಯಿ ಫುಲೆ

ಆನೇಕಲ್: ದೇಶದಲ್ಲಿ ಪ್ರಥಮ ಬಾರಿಗೆ ಶೋಷಿತರಿಗೆ ವಿದ್ಯೆ ನೀಡಿದ ಮಹಾನ್ ತಾಯಿ ಸಾವಿತ್ರಿಬಾಯಿ ಫುಲೆ ಎಂದು ಪ್ರಜಾ ಪರಿವರ್ತನ ವೇದಿಕೆ ಅಧ್ಯಕ್ಷ ಬಿ.ಗೋಪಾಲ್ ತಿಳಿಸಿದರು.

ಪಟ್ಟಣದ ಶ್ರೀರಾಮ ಕುಟೀರದಲ್ಲಿ ಗುರುವಾರ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಹಾಗೂ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಣೆಯಲ್ಲಿ ಮಾತನಾಡಿದರು. ಶಿಕ್ಷಣಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ಸಾವಿತ್ರಿ ಬಾಯಿ ಫುಲೆ ಜನ್ಮದಿನ ಶಿಕ್ಷಕಿಯರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಣೆ ಮಾಡಿರುವುದು ಶ್ಲಾಘನೀಯ ಎಂದರು.

ದೇಶದ ಹೆಣ್ಣು ಮಕ್ಕಳು ಇಂದು ಶಿಕ್ಷಣ ಪಡೆಯುತ್ತಿದ್ದಾರೆ ಎಂದರೆ ಅದಕ್ಕೆ ಫುಲೆ ಕಾರಣಕರ್ತರು. ಆದರೆ ನಮ್ಮನ್ನು ಆಳುವ ಸರ್ಕಾರಗಳು ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಅವರಿಗೆ ಸೂಕ್ತ ಗೌರವಕೊಟ್ಟಿಲ್ಲ ಎಂದು ಬೇಸರಿಸಿದರು.

ಸಬ್​ವುಂಗಲ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯರಾದ ಜಯಲಕ್ಷ್ಮೀ ಹಾಗೂ ಸುನೀತಾ ಅವರನ್ನು ಸನ್ಮಾನಿಸಿಸಲಾಯಿತು. ಸಬ್​ವುಂಗಲ ಸರ್ಕಾರಿ ಶಾಲೆ ಮಕ್ಕಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಂಚಿಕೆಯನ್ನು ಸಂದೂರು ಗ್ರಾಪಂ ಸದಸ್ಯ ಹಾಗೂ ಪ್ರಜಾ ಪರಿವರ್ತನಾ ವೇದಿಕೆ ಮುಖಂಡ ಚೆನ್ನೇನ ಅಗ್ರಹಾರ ವೆಂಕಟೇಶ್ ನೀಡಿದರು.

ಹೋರಾಟಗಾರರಾದ ಅರೇಹಳ್ಳಿ ಅಶ್ವತ್ಥ್, ಸಿ.ರಾವಣ, ಮಾಯಸಂದ್ರ ಸಂಪಂಗಿ, ಗೊಲ್ಲಹಳ್ಳಿ ರಗ್ಗೇಶ್, ಮಹದೇವ್, ಆನೇಕಲ್ ಶಂಕರ್, ಎಚ್.ಎಂ.ವೆಂಕಟೇಶ್, ಜಿ.ವಿ.ರೆಡ್ಡಿ, ರಾಚಮಾನಹಳ್ಳಿ ಮಂಜು, ಆನಂದ್ ಚಕ್ರವರ್ತಿ, ಸುಗುಣಾ, ಅಂಬಿಕಾ, ಅಶೀನಾ, ಸಂಬ್ರಮ್ ಜಯಲಕ್ಷ್ಮೀ, ವಜ್ರಪ್ಪ ಮೀನಾಕ್ಷಿ, ನೆರಳೂರು ಗ್ರಾಪಂ ಅಧ್ಯಕ್ಷೆ ವಿಜಯ್ ಕುಮಾರಿ, ಮಹಿಳಾ ಸಂಘದ ಅಧ್ಯಕ್ಷೆ ಸುನೀತಾ ಮತ್ತಿತರರು ಇದ್ದರು.