ಶೈಕ್ಷಣಿಕ ಪ್ರಗತಿ ಅಣಿಗೆ ತರಬೇತಿ ಅಸ್ತ್ರ

3 Min Read
ಶೈಕ್ಷಣಿಕ ಪ್ರಗತಿ ಅಣಿಗೆ ತರಬೇತಿ ಅಸ್ತ್ರ

ಜಯತೀರ್ಥ ಪಾಟೀಲ ಕಲಬುರಗಿ
ಮಕ್ಕಳಲ್ಲಿ ಕೌಶಲ, ಸ್ಪರ್ಧಾತ್ಮಕ ಮನೋಭಾವ, ಬದ್ಧತೆ, ಸಂಪರ್ಕ ಕೌಶಲ, ವಿಷಯದ ಮನನಕ್ಕೆ ಒತ್ತು ನೀಡುವ ಮೂಲಕ ಆರಂಭಿಕ ಹಂತದಲ್ಲೇ ಶೈಕ್ಷಣಿಕವಾಗಿ ಅಪ್ಗ್ರೇಡ್ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ.
ಸೇತುಬಂಧ, ನಲಿ-ಕಲಿ, ಗಣಿತ ಕಲಿಕಾ ಆಂದೋಲನ, ಮಕ್ಕಳ ಹಕ್ಕುಗಳು ಮತ್ತು ಹದಿಹರೆಯದವರ ಸಮಸ್ಯೆ, ಪಾಠ ವೀಕ್ಷಣೆ ಸೇರಿ ಹಲವು ಯೋಜನೆಗಳ ಮೂಲಕ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಪ್ರಗತಿಗೆ ಇಲಾಖೆ ಮುಂದಾಗಿದೆ. ಮಕ್ಕಳ ಜತೆಗೆ ಶಿಕ್ಷಕರನ್ನು ಅಪ್ಡೇಟ್ ಮೂಲಕ ಸುಧಾರಣೆಗೆ ಯತ್ನಿಸುತ್ತಿದೆ.
ಈ ವರ್ಷ ಕರೊನಾ ಪರಿಣಾಮ ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರೌಢ ಶಾಲೆ ಮುಖ್ಯ ಶಿಕ್ಷಕರವರೆಗೆ ಎಲ್ಲ ಹಂತದ ಶಿಕ್ಷಕರಿಗೆ ಆನ್ಲೈನ್ ತರಬೇತಿ ನೀಡುವ ಬೃಹತ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಶೈಕ್ಷಣಿಕ ವಿಷಯ: ಸೇತುಬಂಧ, ಪರಿಹಾರ ಬೋಧನೆ, ಗಣಿತ ಕಲಿಕಾ ಆಂದೋಲನ, ನಲಿ-ಕಲಿ, ಸಮುದಾಯ ಭಾಗವಹಿಸುವಿಕೆ, ಪಾಠ ವೀಕ್ಷಣೆ, ಗ್ರಂಥಾಲಯ ನಿರ್ವಹಣೆ, ಕಲಿಕೋಪಕರಣ ಬಳಕೆ, ಶಾಲಾ ಅಭಿವೃದ್ಧಿ ಯೋಜನೆ, ಮಕ್ಕಳ ಹಕ್ಕುಗಳ ಮತ್ತು ಹದಿಹರೆಯದವರ ಸಮಸ್ಯೆ, ವಿಜನ್-ಮಿಷನ್, ಒತ್ತಡ ಮತ್ತು ಸಮಯ ನಿರ್ವಹಣೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವುದು, ಆಡಳಿತಾತ್ಮಕವಾಗಿ ಖರೀದಿ ಪ್ರಕ್ರಿಯೆ, ನಗದು ಪುಸ್ತಕ ನಿರ್ವಹಣೆ, ರಿಜಿಸ್ಟ್ರರ್ ನಿರ್ವಹಣೆ, ಕೋವಿಡ್-19 ಮುನ್ನೆಚ್ಚರಿಕೆ, ಬಿಸಿಯೂಟ ಮತ್ತು ಕ್ಷೀರಭಾಗ್ಯ ನಿರ್ವಹಣೆ, ಪ್ರೋತ್ಸಾಹದಾಯಕ ಯೋಜನೆಗಳ ಸದ್ಬಳಕೆ, ಮುಖ್ಯ ಶಿಕ್ಷಣ ಜವಾಬ್ದಾರಿ ಹೀಗೆ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ಪರಿಣಾಮಕಾರಿ ತರಬೇತಿ ನೀಡಲಿದ್ದಾರೆ.

ನಲಿ-ಕಲಿ: ನಲಿ ಕಲಿ ಶಿಕ್ಷಕರ ನಿರಂತರ ಆರು ದಿನದ ತರಬೇತಿ ಆಯೋಜಿಸಿದ್ದು, ನಿತ್ಯ ಸರಾಸರಿ 13000 ಶಿಕ್ಷಕರು ಭಾಗಿಯಾಗಿದ್ದರು. ಪ್ರೌಢಶಾಲೆ ಮುಖ್ಯ ಶಿಕ್ಷಕರ ಆರು ದಿನದ ತರಬೇತಿಯಲ್ಲಿ ನಿತ್ಯ 1200 ಜನ, ನಂತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಆರು ದಿನದ ತರಬೇತಿಯಲ್ಲಿ 8000 ಶಿಕ್ಷಕರು ಭಾಗವಹಿಸಿದ್ದಾರೆ. ಹೀಗಾಗಿ ವಿಭಾಗದ 22200 ಶಿಕ್ಷಕರ ಒಂದೊಂದು ವಾರದ ತರಬೇತಿ ಪೂರ್ಣಗೊಂಡಿದೆ.
ಈಗ ನಲಿ ಕಲಿ ಇಂಗ್ಲಿಷ್ ತರಗತಿ ನಿರ್ವಹಣಾ ತರಬೇತಿ ಜೂನ್ 3 (ಬುಧವಾರ)ರಿಂದ ಪ್ರಾರಂಭವಾಗಲಿದೆ. ಅಂದಾಜು 1300 ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಈ ಎಲ್ಲ ತರಬೇತಿಗೂ ಅಜೀಂ ಪ್ರೇಮ್ಜಿ ಫೌಂಡೇಷನ್ ತಾಂತ್ರಿಕ ನೆರವು ನೀಡಿದೆ. ಈಗ ದೈಹಿಕ ಶಿಕ್ಷಣ ಶಿಕ್ಷಕರ ಹಾಗೂ ಚಿತ್ರಕಲಾ ಶಿಕ್ಷಕರ ತರಬೇತಿ ಬಾಕಿ ಇದೆ. ಅದರ ರೂಪುರೇಷೆ ಸಿದ್ಧವಾಗುತ್ತಿದೆ. ಪ್ರತಿ ತರಬೇತಿಯಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಷಯ ಚಚರ್ೆಯಾಗಲಿದೆ.
ರಾಜ್ಯಕ್ಕೆ ಮಾದರಿಯಾಗಿ ಸೇತು ಬಂಧ ಸಾಹಿತ್ಯ ರಚಿಸಲಾಗುತ್ತಿದೆ. ಕಲಬುರಗಿ ವಿಭಾಗದ ಸಂಪನ್ಮೂಲ ಶಿಕ್ಷಕರು ತಯಾರಿಸಿದ ಸಾಹಿತ್ಯವನ್ನು ಬೆಳಗಾವಿ ವಿಭಾಗದವರು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟರಲ್ಲೇ 4ರಿಂದ 7ನೇ ತರಗತಿವರೆಗಿನ ಸೇತು ಬಂಧ ಸಾಹಿತ್ಯ ವಿಭಾಗದ ಎಲ್ಲ ಶಿಕ್ಷಕರ ಕೈ ಸೇರಲಿದೆ. ಇಷ್ಟೆಲ್ಲ ತರಬೇತಿ ಸಕರ್ಾರದ ನಯಾಪೈಸೆ ಪೈಸೆ ಖಚರ್ಿಲ್ಲದೆ ನಡೆಯುತ್ತಿದೆ.
ಕಲಬುರಗಿ ಶಿಕ್ಷಣ ಆಯುಕ್ತಾಲಯಕ್ಕೆ ಐಎಎಸ್ ಅಧಿಕಾರಿ ಬೇಕೆಂಬ ಬೇಡಿಕೆ ಇದೀಗ ಈಡೇರಿದ್ದು, ಈ ನಿಟ್ಟಿನಲ್ಲಿ ಆಯುಕ್ತ ನಲೀನ್ ಅತುಲ್ ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಕಲ್ಯಾಣ ಕನರ್ಾಟಕದ ಶೈಕ್ಷಣಿಕ ಪ್ರಗತಿಗೆ ವಿನೂತನ ಹೆಜ್ಜೆ ಇರಿಸುತ್ತಿದ್ದಾರೆ.

See also  ನೈಟ್ ಲ್ಯಾಂಡಿಂಗ್ಗೆ ಗ್ರೀನ್ ಸಿಗ್ನಲ್

ನಲಿ-ಕಲಿ ಕಾರ್ಯಕ್ರಮ ತುಂಬ ಮಹತ್ವದ್ದಾಗಿದ್ದು, ಮುಖ್ಯಶಿಕ್ಷಕರಿಗೂ ಈ ತರಬೇತಿ ನೀಡಲಾಗಿದೆ. ಮೂರು ವರ್ಷದಿಂದ ಈ ತರಬೇತಿ ಆಗಿರಲಿಲ್ಲ. ಎಸ್ಸೆಸ್ಸೆಲ್ಸಿಗಿಂತ ಪ್ರಾಥಮಿಕ ಹಂತದಲ್ಲೇ ಮಕ್ಕಳನ್ನು ತಿದ್ದಿತೀಡಿ ಪೂರ್ವಸಿದ್ಧತೆ ಮಾಡಬೇಕು. ಈ ಹಂತದಲ್ಲಿ ಮಕ್ಕಳಿಗೆ ಹಲವಾರು ರೀತಿಯ ಸ್ಕಿಲ್ಸ್ ಬಗ್ಗೆ ತಿಳಿವಳಿಕೆ ಕೊಡಬೇಕು. ಸೇತುಬಂಧ, ಕಾ್ರೃಶ್ಕೋಸರ್್ ಸೇರಿ ನಾನಾ ಕಾರ್ಯಕ್ರಮಗಳ ಮೂಲಕ ಅಪ್ಡೇಟ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ.
| ನಲೀನ್ ಅತುಲ್ ಆಯುಕ್ತ,
ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ

Share This Article