More

  ಶೆಟಕಾರ್ ಪ್ರೌಢಶಾಲೆಗೆ ಶೇ 93.51 ಫಲಿತಾಂಶ

  ಬೀದರ್: ಚಿದಂಬರ ಶಿಕ್ಷಣ ಸಂಸ್ಥೆ ಸಂಚಾಲಿತ ನಗರದ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 93.51 ರಷ್ಟು ಫಲಿತಾಂಶ ಪಡೆದು ಸಾಧನೆಗೈದಿದೆ.
  12 ಅಗ್ರಶ್ರೇಣಿ, 79 ಪ್ರಥಮ ದರ್ಜೆ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
  ಪ್ರಿಯಾ ಮಲ್ಲಿಕಾರ್ಜುನ ಶೇ 94.88, ವಿಜಯಾ ಸಂಜುಕುಮಾರ ಶೇ 92.80, ಶಿವಾನಂದ ವೈಜಿನಾಥ ಶೇ 92.48, ಪ್ರೀತಿ ಮಲ್ಲಿಕಾರ್ಜುನ ಶೇ 91.36, ಅಕ್ಷತಾ ಧನರಾಜ ಶೇ 91.26, ಶಿವಾನಿ ಸಂತೋಷ ಶೇ 91.04, ರಮಣ ರಾಹುಲ್ ಶೇ 89.12 ರಷ್ಟು ಅಂಕ ಗಳಿಸಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ತಿಳಿಸಿದ್ದಾರೆ.
  ವಿದ್ಯಾರ್ಥಿಗಳ ಸಾಧನೆಗೆ ಚಿದಂಬರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಆಡಳಿತಾಧಿಕಾರಿ ಸಂತಸ ವ್ಯಕ್ತಪಡಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts