ಶೂನ್ಯ ಕೃಷಿಯತ್ತ ಚಿತ್ತ ಹರಿಸಿ

ವಿಜಯವಾಣಿ ಸುದ್ದಿಜಾಲ ಲಕ್ಷ್ಮೇಶ್ವರ

ತಾಲೂಕಿನ ಗೋವನಾಳದಲ್ಲಿ ಭಾನುವಾರ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಗ್ರಾಮದ ರೈತರು ಸ್ಥಳೀಯ ಹುತಾತ್ಮ ರೈತರ ಭಾವಚಿತ್ರಕ್ಕೆ (ವೀರಗಲ್ಲು) ಪೂಜೆ ನೆರವೇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ರೈತ ಪರ ಹೋರಾಟಗಾರರಾದ ಗ್ರಾಮದ ರೈತರಾದ ಫಕೀರಗೌಡ ಮಣಕಟ್ಟಿ, ರಾಮಣ್ಣ ಹುಬ್ಬಳ್ಳಿ, ಉಡಚಪ್ಪ ವಾಲಿಕಾರ ಅವರು 1993 ರಲ್ಲಿ ಬೆಂಗಳೂರಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋಗಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಸ್ಮರಣಾರ್ಥ ಗೋವನಾಳ ಗ್ರಾಮಸ್ಥರು ಗ್ರಾಮದ ಅಗಸಿಯಲ್ಲಿ ವೀರಗಲ್ಲು ಸ್ಥಾಪಿಸಿದ್ದು, ಪ್ರತಿವರ್ಷ ರೈತ ಹುತಾತ್ಮ ದಿನಾಚರಣೆಯಂದು ಸ್ಮರಿಸುತ್ತಾರೆ.

ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ, ಕೃಷಿಯಲ್ಲಿ ರೈತರು ಬದಲಾವಣೆಗೆ ತಕ್ಕಂತೆ ಒಗ್ಗಿಕೊಳ್ಳಬೇಕು. ಜತೆಗೆ ಮೂಲ ಕೃಷಿ, ಶೂನ್ಯ ಬಂಡವಾಳ ಕೃಷಿಯತ್ತ ಚಿತ್ತ ಹರಿಸಬೇಕಿದೆ. ಭೂಮಿಗೆ ವಿಪರೀತ ರಾಸಾಯನಿಕ, ಕ್ರಿಮಿನಾಶಕ ಹಾಕದೆ ಜೀವಾಮೃತದಂತಹ ಸಾವಯುವ ಕೃಷಿಯತ್ತ ಮರಳಿ ಬರಬೇಕಿದೆ. ಸಾವಯುವ ಕೃಷಿಗೆ ಸರ್ಕಾರ ಸಾಕಷ್ಟು ಒತ್ತು ನೀಡುತ್ತಿದೆ. ಸಿರಿಧಾನ್ಯ ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಪ್ರತಿ ಹೆಕ್ಟೇರ್​ಗೆ 10 ಸಾವಿರ ರೂ. ನೀಡುತ್ತಿದೆ. ಕೃಷಿಯಲ್ಲಿ ಇಂದು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ರೈತರು ನ್ಯಾಯಯುತ ಬೇಡಿಕೆಗಾಗಿ ಸಂಘಟಿತರಾಗಬೇಕಾಗುತ್ತದೆ. ದೇಶದ ಬೆನ್ನುಲುಬಾದ ರೈತರು, ಶಿಕ್ಷಕರು, ಸೈನಿಕರನ್ನು ಗೌರವಿಸಬೇಕು ಎಂದರು.

ಗ್ರಾಮದ ರೈತ ಮುಖಂಡರಾದ ಭರಮಣ್ಣ ರೊಟ್ಟಿಗವಾಡ, ಈಶ್ವರಪ್ಪ ಸೊರಟೂರ, ಶೇಖರಗೌಡ ಕೊರಡೂರ, ನಾಗರಾಜ ದೊಡ್ಡಮನಿ, ಅಣ್ಣಪ್ಪ ರಾಮಗೇರಿ ಮಾತನಾಡಿದರು.

ಗ್ರಾಪಂ ನಿವೃತ್ತ ನೌಕರರಾದ ಡಿ.ಎಂ. ನದೀಮುಲ್ಲಾ, ನೀಲಪ್ಪ ಹೊಸಮನಿ, ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ ಅವರನ್ನು ಗ್ರಾಮದ ಪರವಾಗಿ ಸನ್ಮಾನಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮವ್ವ ದೊಡ್ಡಮನಿ, ಸದಸ್ಯರಾದ ನಿಂಗಪ್ಪ ಹುಬ್ಬಳ್ಳಿ, ಚಂದ್ರು ತಳವಾರ, ರಾಜರತ್ನ ಹುಲಗೂರ, ಫಕೀರಗೌಡ ದೊಡ್ಡಗೌಡರ, ಬಸನಗೌಡ ಪೊಲೀಸ್​ಪಾಟೀಲ, ವೈ.ಡಿ. ಮರಿಲಿಂಗನಗೌಡ್ರ, ದಿವಾನಸಾಬ್ ಮಸೂತಿ, ಈರನಗೌಡ ನಾಗನಗೌಡ್ರ, ಷಣ್ಮುಖಯ್ಯ ಗಡ್ಡದೇವರಮಠ, ಮಂಜನಗೌಡ ಕೆಂಚನಗೌಡರ, ಚನ್ನಪ್ಪ ಅಲಸಂದಿ, ಎಸ್.ಬಿ. ಕೊರಡೂರ, ರಮೇಶ ರ್ಬಾ, ಎಸ್.ಎನ್. ಕೊರಡೂರ, ಚಂದ್ರಗೌಡ ಕರಿಗೌಡ್ರ ಇತರರಿದ್ದರು. ನಾಗರಾಜ ಪೂಜಾರ ನಿರೂಪಿಸಿದರು.

Leave a Reply

Your email address will not be published. Required fields are marked *