More

  ಶುಭ ಕಾರ್ಯಕ್ಕೆ ಕಲ್ಯಾಣ ಮಂಟಪ ಉಚಿತ

  ಬೀದರ್: ಶುಭ ಕಾರ್ಯಗಳಿಗೆ ಕಲ್ಯಾಣ ಮಂಟಪ ಉಚಿತ ಕೊಡುವುದಾಗಿ ಘೋಷಿಸುವ ಮೂಲಕ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಕೆ) ಗ್ರಾಮದ ಶ್ರೀ ಕೈಲಾಶನಾಥೇಶ್ವರ ದೇವಸ್ಥಾನ ಟ್ರಸ್ಟ್ ಗಮನ ಸೆಳೆದಿದೆ.
  ಸಾರ್ವಜನಿಕರಿಗೆ ಮದುವೆ ಹಾಗೂ ಇತರ ಶುಭ ಕಾರ್ಯಗಳ ಆಯೋಜನೆಗೆ ನೆರವಾಗುವ ಉದ್ದೇಶದಿಂದ ಕಲ್ಯಾಣ ಮಂಟಪ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶಿವಪುತ್ರಪ್ಪ ವಾರದ ಹಾಗೂ ಕಾರ್ಯದರ್ಶಿ ಸುಭಾಷ್ ವಾರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  ಕಲ್ಯಾಣ ಮಂಟಪದಲ್ಲಿ ಶುಭ ಕಾರ್ಯಗಳಿಗೆ ಸಕಲ ಸೌಲಭ್ಯಗಳು ಇವೆ. 100*50 ಅಡಿಯ ವಿಶಾಲ ಸಭಾಂಗಣ, 70*50 ಅಡಿಯ ಡೈನಿಂಗ್ ಹಾಲ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದು ಹೇಳಿದ್ದಾರೆ.
  ಕಾರ್ಯಕ್ರಮಗಳಿಗೆ ಕುರ್ಚಿ, ಕಾರ್ಪೆಟ್‍ಗಳನ್ನು ಸಹ ಉಚಿತವಾಗಿ ಕೊಡಲಾಗುವುದು ಎಂದು ಹೇಳಿದ್ದಾರೆ.
  ಈಚಿನ ದಿನಗಳಲ್ಲಿ ಕಲ್ಯಾಣ ಮಂಟಪಗಳ ಶುಲ್ಕ ದುಬಾರಿಯಾಗಿದೆ. ಹೀಗಾಗಿ ಸಾರ್ವಜನಿಕರ ಆರ್ಥಿಕ ಹೊರೆ ಒಂದಿಷ್ಟು ಕಡಿಮೆ ಮಾಡಲು ಕಲ್ಯಾಣ ಮಂಟಪ ಉಚಿತವಾಗಿ ಕೊಡಲಾಗುತ್ತಿದೆ. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts