ಶುದ್ಧ ನೀರಿನ ಘಟಕ ಆರಂಭ

ಶಿರಹಟ್ಟಿ: ಪಟ್ಟಣದ ಫಕೀರೇಶ್ವರ ಮಠದ ಬಳಿ ಅಲ್ಪಸಂಖ್ಯಾತರ ಇಲಾಖೆ ಯೋಜನೆಯಡಿ ನಿರ್ವಿುಸಲಾದ ಶುದ್ಧ ನೀರಿನ ಘಟಕಕ್ಕೆ ಮಂಗಳವಾರ ಬೋರವೆಲ್ ನೀರನ್ನು ಪೂರೈಸುವ ಮೂಲಕ ಪಟ್ಟಣದ ಜನತೆಗೆ ಶುದ್ಧ ನೀರು ಲಭ್ಯವಾಗುವಂತೆ ಮಾಡಲಾಗಿದೆ.
ಕೆ.ಎಚ್. ಪಾಟೀಲ ಪ್ರತಿಷ್ಠಾನದಿಂದ ನಿರ್ವಿುಸಿದ್ದ ಎರಡು ಶುದ್ಧ ನೀರಿನ ಘಟಕಗಳ ನಿರ್ವಹಣೆದಾರರು ಹೆಸ್ಕಾಂ ಬಿಲ್ ಭರಿಸದ ಕಾರಣ ಅವು ಬಂದ್ ಆಗಿದ್ದವು. ಹೀಗಾಗಿ ಪಟ್ಟಣದ ಜನತೆ ಶುದ್ಧ ನೀರಿಗಾಗಿ ಪಕ್ಕದ ಹರಿಪೂರ ಶುದ್ಧ ನೀರಿನ ಘಟಕಕ್ಕೆ ಮೊರೆ ಹೋಗಬೇಕಾಗಿ ಬಂದಿತ್ತು. ಹೀಗಾಗಿ ಪರ್ಯಾಯ ವ್ಯವಸ್ಥೆಯ ಮೂಲಕ ಅಲ್ಪಸಂಖ್ಯಾತರ ಇಲಾಖೆ ಯೋಜನೆಯಡಿ ಫಕೀರೇಶ್ವರ ಮಠದ ಬಳಿ 10 ಲಕ್ಷ ರೂ. ವೆಚ್ಚದಲ್ಲಿ ಭೂಸೇನಾ ನಿಗಮದಿಂದ ನಿರ್ವಿುಸಿದ ಶುದ್ಧ ನೀರಿನ ಘಟಕ ನೀರು ಪೂರೈಕೆಯ ಸಮಸ್ಯೆಯಿಂದ ಕಾರ್ಯಾರಂಭಗೊಳ್ಳದೇ ನನೆಗುದಿಗೆ ಬಿದ್ದಿತ್ತು.
ಈ ಕುರಿತು ಏ. 27 ರಂದು ‘ವಿಜಯವಾಣಿ’ ಪತ್ರಿಕೆಯಲ್ಲಿ ಶುದ್ಧ ನೀರಿನ ಘಟಕಗಳು ಸ್ಥಗಿತ ಎಂಬ ಶೀರ್ಷಿಕೆಯಡಿ ವಿಸõತ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯ ಪಪಂ ಮುಖ್ಯಾಧಿಕಾರಿ ಎಂ.ಕೆ. ಮುಗಳಿ ಅವರು ಶುದ್ಧ ನೀರಿನ ಘಟಕದ ಜಲ ಸಂಗ್ರಹಾಗಾರಕ್ಕೆ ಬೋರವೆಲ್​ನಿಂದ ನೀರು ಪೂರೈಸುವ ಕಾರ್ಯ ಮಾಡಿದ್ದಾರೆ. ಇದರಿಂದ ಪಟ್ಟಣದ ಜನತೆ ಶುದ್ಧ ನೀರಿಗಾಗಿ ಅಲೆದಾಡುವುದು ತಪ್ಪಿದಂತಾಗಿದೆ.
ಶುದ್ಧ ನೀರು ಪೂರೈಕೆಗೆ ಸಿದ್ಧವಾದ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ತಹಸೀಲ್ದಾರ್ ಅಶಪ್ಪ ಪೂಜಾರ, ಅಧಿಕಾರದಲ್ಲಿಷ್ಟು ದಿನ ಪಟ್ಟಣದ ಜನತೆಗೆ ಬೇಕಾದ ಮೂಲ ಸೌಲಭ್ಯ ಹಾಗೂ ಸ್ವಚ್ಛತೆ, ಪ್ಲಾಸ್ಟಿಕ್ ಚೀಲ ಬಳಕೆಯ ನಿಷೇಧಕ್ಕೆ ಒತ್ತು ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಪಪಂ ಮಾಜಿ ಸದಸ್ಯ ಸಿ.ಕೆ. ಮುಳಗುಂದ, ಜೆ.ಆರ್. ಕುಲಕರ್ಣಿ, ಮೌಲಾಸಾಬ್ ವಲ್ಲೇಸಾಬನವರ, ಪ್ರಭು ಹಲಸೂರ, ಪಪಂ ಕಂದಾಯ ನಿರೀಕ್ಷಕ ಗುರು ಪ್ರಸಾದ, ನಿಸ್ಸಾರ ಢಾಲಾಯತ್, ಭೂಸೇನಾ ನಿಗಮದ ಸಹಾಯಕ ಅನಿಲ, ಇತರರಿದ್ದರು.

Leave a Reply

Your email address will not be published. Required fields are marked *