ಶೀಘ್ರದಲ್ಲೇ ಜೈವಿಕ ಇಂಧನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ

blank

ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಮುಂದಿನ ಕೆಲವೇ ತಿಂಗಳುಗಳಲ್ಲಿ ಮಹತ್ತರ ಬದಲಾವಣೆಗಳಾಗಲಿದ್ದು, ಇದಕ್ಕೆ ಮಂಡಳಿಯು ಪೂರಕ ವಾತಾವರಣ ಸೃಜನೆ ಮಾಡಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ. ಸುಧೀಂದ್ರ ತಿಳಿಸಿದರು.
ನಗರದ ಎನ್‌ಐಇ ಕಾಲೇಜಿನ ದಕ್ಷಿಣ ಕ್ಯಾಂಪಸ್‌ನಲ್ಲಿ ಜರ್ಮನಿಯ ಫಚೋಚ್ಶುಲೆ, ಡಾರ್‌ಟ್ಮುಂಡ್ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್ ಆ್ಯಂಡ್ ಆರ್ಟ್ಸ್, ಐಇಐ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿರುವ ‘ಸುಸ್ಥಿರ ತಂತ್ರಜ್ಞಾನ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಅಲ್ಲದೇ ಉನ್ನತ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲು ಕಾರ್ಯಪ್ರವೃತವಾಗಿದೆ. ಬಯೋ ಬ್ರಿಕೇಟ್ಸ್, ಪೆಲೆಟ್ಸ್, ಬಯೋ ಡೀಸಲ್, 2 ಜಿ ಎಥೆನಾಲ್, ಕಂಪ್ರೆಸ್ಡ್ ಬಯೋಗ್ಯಾಸ್, ಗ್ರೀನ್ ಹೈಡ್ರೋಜನ್ ಮುಂತಾದ ಜೈವಿಕ ಇಂಧನ ಕ್ಷೇತ್ರದ ವಿಭಾಗಗಳಲ್ಲಿ ಒಂದು ಲಕ್ಷ ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಅವಕಾಶಗಳು ಇವೆ ಎಂದರು.
ಜೈವಿಕ ಇಂಧನ ಕ್ಷೇತ್ರದ ಸುಸ್ಥಿರ ಬೆಳವಣಿಗೆಯು ಅಗಾಧವಾದ ವಿಸ್ತಾರವನ್ನು ಹೊಂದಿರುವುದರಿಂದ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳು ಇವೆ. ಕರ್ನಾಟಕ ರಾಜ್ಯವು ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ರಾಷ್ಟ್ರಕ್ಕೆ ಜೈವಿಕ ಇಂಧನ ನೀತಿ-2009 ರೂಪಿಸಿ ಅನುಷ್ಠಾನಗೊಳಿಸಿದ ಮೊಟ್ಟ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಅಲ್ಲದೆ ನೀತಿಯ ಅನುಷ್ಠಾನ ಪ್ರಕ್ರಿಯೆಯನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಿದೆ ಎಂದು ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯದಂತೆ ಸಮಾಜದ ಎಲ್ಲ ಹಂತದಲ್ಲೂ ಸುಸ್ಥಿರತೆ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಮಂಡಳಿಯು ಜೈವಿಕ ಇಂಧನ ಕ್ಷೇತ್ರದ ಸುಸ್ಥಿರತೆಗೆ ಅನುಕೂಲವಾಗುವ ಬಂಡವಾಳ ಹೂಡಿಕೆಗೆ ಹೂಡಿಕೆದಾರರನ್ನು ಆಕರ್ಷಿಸಲು ‘ನೂತನ ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ’ ನಿರೂಪಿಸಲು ಈಗಾಗಲೇ ಕ್ರಮವಹಿಸಿದೆ. ಈ ವಾರದಲ್ಲಿಯೇ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ಐಟಿ-ಬಿಟಿ ಸಚಿವರು, ಜೈವಿಕ ಇಂಧನ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವ ತಂತ್ರಜ್ಞರು, ನೀತಿ ನಿರೂಪಕರು, ವಿಷಯ ಪರಿಣಿತರು, ಮಂಡಳಿಯ ಜೈವಿಕ ಇಂಧನ ಕಾರ್ಯಯೋಜನೆಗಳ ಭಾಗಿದಾರರೊಂದಿಗೆ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಲ್.ಶಿವಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಆರ್.ಲೋಹಿತ್, ಯೋಜನಾ ಸಲಹೆಗಾರ ಡಾ. ಜಿ.ಎನ್. ದಯಾನಂದ, ಎನ್‌ಐಇ ಅಧ್ಯಕ್ಷ ಎಂ.ಎಸ್.ರಂಗನಾಥ್, ಗೌರವ ಕಾರ್ಯದರ್ಶಿ ಎಸ್.ಬಿ. ಉದಯ ಶಂಕರ್, ಖಜಾಂಚಿ ಸತ್ಯಕುಮಾರ್, ನಿರ್ದೇಶಕರಾದ ದೀಪಕ್, ರಾಮಪ್ರಸಾದ್, ಪ್ರಾಂಶುಪಾಲೆ ರೋಹಿಣಿ ನಾಗಪದ್ಮ, ಸಂಚಾಲಕರಾದ ಡಾ.ಶ್ಯಾಮ್ ಸುಂದರ್, ಡಾ.ಎನ್.ಶರತ್ಚಂದ್ರ ಇದ್ದರು.

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…