ಶೀಘ್ರದಲ್ಲೇ ಕುರುಕ್ಷೇತ್ರ

ದರ್ಶನ್ ಅಭಿಮಾನಿಗಳು ಹೆಚ್ಚು ಕಾತರದಿಂದ ಕಾಯುತ್ತಿರುವ ಚಿತ್ರವೆಂದರೆ ಅದು ‘ಕುರುಕ್ಷೇತ್ರ’. ಒಂದು ವರ್ಷದ ಹಿಂದೆ ಸೆಟ್ಟೇರಿದ್ದ ಈ ಚಿತ್ರ, ಬಹುತಾರಗಣದ ಕಾರಣಕ್ಕಾಗಿ ನಿರೀಕ್ಷೆ ಮೂಡಿಸಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗಾಗಲೇ ಈ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ ದೊಡ್ಡ ಕ್ಯಾನ್ವಾಸ್​ನಲ್ಲಿ ತಯಾರಾಗುತ್ತಿರುವುದರಿಂದ ಸಹಜವಾಗಿಯೇ ಕೆಲಸಗಳು ಕೊಂಚ ತಡವಾಗಿವೆ. ಈ ನಡುವೆ ನಿರ್ವಪಕ ಮುನಿರತ್ನ ಚುನಾವಣೆಯಲ್ಲಿ ಬಿಜಿಯಾಗಿದ್ದರು. ಒಟ್ಟಿನಲ್ಲಿ ‘ಕುರುಕ್ಷೇತ್ರ’ ಯಾವ ಹಂತದಲ್ಲಿದೆ ಎಂಬ ಬಗ್ಗೆ ಯಾರೂ ಸೂಕ್ತ ಮಾಹಿತಿ ನೀಡಿರಲಿಲ್ಲ. ಈಗ ಸ್ವತಃ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಸಿಹಿ ಸುದ್ದಿ ನೀಡಿದ್ದಾರೆ. ‘ಕುರುಕ್ಷೇತ್ರ ಚಿತ್ರದ ನನ್ನ ಡಬ್ಬಿಂಗ್ ಭಾಗ ಸಂಪೂರ್ಣವಾಗಿ ಮುಗಿದಿದೆ. ಇನ್ನೇನು ಚಿತ್ರದ ಮುಂದಿನ ಚಟುವಟಿಕೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ’ ಎಂದು ಟ್ವೀಟ್ ಮಾಡಿದ್ದಾರೆ ‘ಚಾಲೆಂಜಿಂಗ್ ಸ್ಟಾರ್’.

Leave a Reply

Your email address will not be published. Required fields are marked *