ಶಿಷ್ಟ ರಕ್ಷಣೆ ದುಷ್ಟ ಸಂಹಾರ ಯಕ್ಷಗಾನ  ಸಂದೇಶ

ಮಂಗಳೂರು:  ಯಕ್ಷಗಾನ ಕಾರವಳಿಯ ಜನಪ್ರಿಯ ಕಲೆಯಾಗಿದ್ದು ವೇಷಭೂಷಣ, ಹಾಡು, ನೃತ್ಯಗಳಿಂದ ವೈವಿಧ್ಯಮಯವಾಗಿದೆ. ಶಿಷ್ಟರಕ್ಷಣೆ, ದುಷ್ಟ ಸಂಹಾರ ಹೆಚ್ಚಿನ ಯಕ್ಷಗಾನ ಪ್ರಸಂಗಗಳ ಸಂದೇಶವಾಗಿದೆ ಎಂದು ಹೈಕೋರ್ಟ್​ ನ್ಯಾಯಮೂರ್ತಿ ಬಿ.ಎ.ಪಾಟೀಲ್​ ಹೇಳಿದರು.

ಅಜ್ಜರಕಾಡು ಪುರಭವನದಲ್ಲಿ ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ನಡೆದ ಯಕ್ಷಕಲಾ ವೈಭವ ರಾಜ್ಯಮಟ್ಟದ ಯಕ್ಷಗಾನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸದಾ ಕೆಲಸದ ಒತ್ತಡದಿಂದ ಇರುವ ವಕೀಲರ ಪ್ರತಿಭಾ ಪ್ರದರ್ಶನಕ್ಕೆ ಸ್ಪರ್ಧೆಗಳು ಉತ್ತಮ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಉಡುಪಿ ಬಾರ್​ ಅಸೋಸಿಯೇಷನ್​ ಮಾದರಿ ಎಂದು ಹೇಳಿದರು.

ಮುಖ್ಯ ಅತಿಥಿ ಜಿಲ್ಲಾ ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಮಾತನಾಡಿ, ಸಮಾಜವನ್ನು ನಿರಂತರ ಅವಲೋಕನ ಮಾಡುವುದರಿಂದ ವೃತ್ತಿಯಲ್ಲೂ ಸಾಧನೆ ಸಾಧ್ಯ. ಕಲಾಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹೊಸ ವಿಚಾರಗಲನ್ನು ಅರಿತುಕೊಳ್ಳಬಹುದು. ಯಕ್ಷಗಾನದಂಥ ಚಟುವಟಿಕೆಗಳು ಇದಕ್ಕೆ ಪೂರಕವಾಗಿದೆ. ಇದರಿಂದ ವೃತ್ತಿಪರತೆ ಹೆಚ್ಚುತ್ತಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಚ್​.ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಕಲಾ ವೈಭವದ ಅಧ್ಯಕ್ಷ ಸಿ.ವಿಜಯ್​ ಹೆಗ್ಡೆ, ಹಿರಿಯರಾದ ಎ.ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *