ಶಿವಶರಣೆ ಕಲ್ಯಾಣಮ್ಮ ಐಕ್ಯಸ್ಥಳ ಅಭಿವೃದ್ಧಿಪಡಿಸಿ

ಬೈಲಹೊಂಗಲ: 12 ನೇ ಶತಮಾನದ ಮಾಹಾ ಶಿವಶರಣೆ ಕಲ್ಯಾಣಮ್ಮನವರ ಐಕ್ಯ ಸ್ಥಳವನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ, ಕರ್ನಾಟಕ ಅಂಬೇಡ್ಕರ್​ ಯುವ ಸೇನೆ ಎಸಿ ಮೂಲಕ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಸಂಟನೆ ಅಧ್ಯ ಪರಶುರಾಮ ರಾಯಬಾಗ ಮಾತನಾಡಿ, ತಾಲೂಕಿನ ತಿಗಡಿ ಗ್ರಾಮದಲ್ಲಿ ಶಿಥಿಲಗೊಂಡ ಹಳೆಕಟ್ಟಡದಲ್ಲಿ ಕಲ್ಯಾಣಮ್ಮನವರ ಮೂರ್ತಿ ಇದೆ. ಬಸವಣ್ಣ ಅವರ ಅನುಯಾಯಿ ಹರಳಯ್ಯ ಮತ್ತು ಧರ್ಮಪತ್ನಿ ಆದ ಕಲ್ಯಾಣಮ್ಮ ತಮ್ಮ ಇಬ್ಬರ ತೊಡೆಯ ಚರ್ಮದಿಂದ ಪಾದರೆ ತಯಾರಿಸಿ ವಿಶ್ವಗುರು ಬಸವಣ್ಣನವರಿಗೆ ನೀಡಿದ್ದರು. ಈ ಪಾದರೆಗಳನ್ನು ನಾನು ಧರಿಸುವದಿಲ್ಲ. ಸಾಾತ್​ ಶಿವನು ಧರಿಸಬೇಕು. ನೀವು ಮಾಹಾನ್​ ತ್ಯಾಗ ಜೀವಿಗಳಾಗಿದ್ದೀರಿ ಅಂತಾ ಕೊಂಡಾಡಿದ್ದರು. ಕಲ್ಯಾಣಮ್ಮ ಬಸವಣ್ಣ ಅವರ ಅನುಯಾಯಿಗಳಾಗಿ ಸಮಾನತೆಗಾಗಿ ಹೋರಾಡಿದ್ದರು.

ಕಲ್ಯಾಣಮ್ಮ ಐಕ್ಯ ಸ್ಥಳವನ್ನು ವೀಸಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲಾ ಆಡಳಿತ, ತಾಲೂಕು ಆಡಳಿತ ಹಾಗೂ ಕಿತ್ತೂರು ಮತೇತ್ರದ ಶಾಸಕರಾಗಲಿ ಅಭಿವೃದ್ಧಿಪಡಿಸಿಲ್ಲ. 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಈ ಸ್ಥಳವನ್ನು ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಿದರು. ಬಸವರಾಜ ಕಿತ್ತೂರ, ರಾಜೇಶ ತೊರಗಲ್ಲ, ಸುಭಾಷ ಸವದತ್ತಿ, ಬುದ್ದಿವಂತ ಕಟ್ಟಿಮನಿ, ಶಿವಾನಂದ ಸೊಲಬನ್ನವರ, ಶ್ರೀಕಾಂತ ದೊಡಮನಿ, ಪರುಶರಾಮ ಬನ್ನಿಗಿಡಿದ, ವಿನೋದ ಸವದತ್ತಿ, ರಾಮು ಕಳಂಕರ, ಈರಣ್ಣ ರಾಯಭಾಗ, ಅಶೋಕ ಸವದತ್ತಿ, ಪ್ರಕಾಶ ತೊರಗಲ್ಲ, ಭರಮಪ್ಪ ತೊರಗಲ್ಲ ಇತರರು ಇದ್ದರು.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…