ಶಿರ್ವದಲ್ಲಿ ಶಿಲಾಯುಗದ ಕಲ್ಲಿನ ಕೊಡಲಿ ಪತ್ತೆ

ಶಿರ್ವ (ಉಡುಪಿ ಜಿಲ್ಲೆ): ಮೂಡುಬೆಳ್ಳೆ ಗ್ರಾಪಂ ವ್ಯಾಪ್ತಿಯ ಬಂಟಕಲ್ಲು ಪ್ರದೇಶದ ಸಡಂಬೈಲು-ಸೇಡಿಪಟ್ಲದ ರಮೇಶ್ ಪಾಟ್ಕರ್ ಅವರ ಜಾಗದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಸುಭಾಸ್ ನಾಯಕ್ ಬಂಟಕಲ್ಲು ಮತ್ತು ಶೃುತೇಶ್ ಆಚಾರ್ಯ ಮೂಡುಬೆಳ್ಳೆ ಕ್ಷೇತ್ರ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಶಿಲಾಯುಗಕ್ಕೆ ಸಂಬಂಧಿಸಿದ ಕಲ್ಲಿನ ಕೈ ಕೊಡಲಿ ಪತ್ತೆ ಮಾಡಿದ್ದಾರೆ. ಕರ್ನಾಟಕದಲ್ಲಿ ದೊರಕುತ್ತಿರುವ ನೂತನ ಶಿಲಾಯುಗದ ಅವಶೇಷಗಳ ಕಾಲಮಾನ ಅಂದಾಜು ಕ್ರಿ.ಪೂ 3,000 ವರ್ಷಗಳಷ್ಟು ಪುರಾತನ ಎಂಬುದು ವಿದ್ವಾಂಸರ ಅಭಿಮತ. ಕಲ್ಲಿನ ಕೊಡಲಿಯ ಮುಂಭಾಗವನ್ನು ಉಜ್ಜಿ ನಯ ಗೊಳಿಸಲಾಗಿದೆ. ಕಲ್ಲಿನ ಕೊಡಲಿಯನ್ನು ಡಾಲರೈಟ್ ಶಿಲೆಯಿಂದ ಮಾಡಿದ್ದು, ಇದು 7 ಸೆ.ಮೀ. ಅಗಲ, 9 ಸೆ.ಮೀ ಉದ್ದ ಮತ್ತು 19 ಸೆ.ಮೀ ಸುತ್ತಳತೆ ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.

Leave a Reply

Your email address will not be published. Required fields are marked *