More

  ಶಿರೂರಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ

  ಹುಬ್ಬಳ್ಳಿ: ವಿದ್ಯಾನಗರದ ಶಿರೂರ ಪಾರ್ಕ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಆಶ್ಲೇಷ ಬಲಿ (ನಾಗಾರಾಧನೆ) ಪೂಜೆ ಶ್ರದ್ಧಾ-ಭಕ್ತಿ ಹಾಗೂ ಧಾರ್ವಿುಕ ವಿಧಿ-ವಿಧಾನಗಳ ಮೂಲಕ ನಡೆಯಿತು.

  ಧರ್ಮದರ್ಶಿ ಶ್ರೀ ಆನಂದ ಗುರುಸ್ವಾಮಿ ನೇತೃತ್ವದಲ್ಲಿ ಆಶ್ಲೇಷ ಬಲಿ, ನಾಗಶಾಂತಿ, ನಾಗಹೋಮ ವಿಜೃಂಭಣೆಯಿಂದ ನೆರವೇರಿಸಲಾಯಿತು. ಅರ್ಚಕರಾದ ಅಜಿತ್ ಭಟ್, ಕಿರಣ್ ಭಟ್ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಅಧ್ಯಕ್ಷ ಆನಂದ ಸಂಕೇಶ್ವರ, ಉಪಾಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ, ಟ್ರಸ್ಟಿಗಳಾದ ಜಯರಾಮ್ ಶೆಟ್ಟಿ, ಪ್ರದೀಪ ಶೆಟ್ಟಿ, ಮಲ್ಲು ಸ್ವಾಮಿ ಇತರರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸರ್ಪದೋಷ ನಿವಾರಣೆಗಾಗಿ ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts