25.8 C
Bangalore
Thursday, December 12, 2019

ಶಿರಸಂಗಿಯ ತ್ಯಾಗರಾಜ ಲಿಂಗರಾಜ ದೇಸಾಯಿ

Latest News

6ರ ಬಾಲಕಿಯ ಅತ್ಯಾಚಾರ, ವಿವಾಹಿತನ ಬಂಧನ

ಬೆಳಗಾವಿ: ಕೇವಲ 6 ವರ್ಷದ ಬಾಲಕಿಯನ್ನು ವಿವಾಹಿತ ಯುವಕನೋರ್ವ ಬುಧವಾರ ಸಂಜೆ ಅತ್ಯಾಚಾರ ನಡೆಸಿದ್ದು, ಈ ಘಟನೆ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ. ಬಾಲಕಿಯ...

ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ: ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ

ಶಿವಮೊಗ್ಗ: ಮಂತ್ರಿ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದಿಲ್ಲ. ಶಾಸಕನಾಗಿಯೇ ಕ್ಷೇತ್ರದ ಅಭಿವೃದ್ಧಿ ಮಾಡುವ ಪ್ರಯತ್ನ ನಿರಂತರ ನಡೆಯುತ್ತದೆ ಎಂದು...

ಸ್ಮಶಾನ ಜಮೀನು ಒತ್ತುವರಿಗೆ ಗ್ರಾಮಸ್ಥರ ಆಕ್ರೋಶ

ಮೈಸೂರು: ತಾಲೂಕಿನ ಕಸಬಾ ಹೋಬಳಿ ಕಳಸ್ತವಾಡಿ ಗ್ರಾಮದ ಸರ್ವೇ ನಂ. 123,124,126,139,141ಹಾಗೂ142ರ ಮಧ್ಯೆ ಇರುವ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಸ್ಮಶಾನದ ಜಮೀನನ್ನು...

ಮೋದಿ-ಅಮಿತ ಷಾ ಪ್ರತಿಕೃತಿ ದಹನ

ವಿಜಯಪುರ: ಕೇಂದ್ರ ಸರ್ಕಾರದ ನೂತನ ಪೌರತ್ವ ನೀತಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು...

ಚಳಿಗಾಲದಲ್ಲಿ ಬರುವ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಕೆಲ ಟಿಪ್ಸ್​

ಚಳಿಗಾಲ ಬಂತೆಂದರೆ ಇನ್ನಿಲ್ಲದ ತೊಂದರೆ ಕೂಡ ಬರುತ್ತವೆ. ಶೀತ, ನೆಗಡಿ, ಕೆಮ್ಮು ಜತೆಗೆ ಜ್ವರ ಕೂಡ ಚಳಿಗಾಲ ಹೊತ್ತು ತರುತ್ತದೆ. ಇದ್ದಕ್ಕಿದ್ದಂತೆ ಬದಲಾಗುವ ಹವಮಾನ ಇಂತಹ ಸಮಸ್ಯೆ...

ಶಿರಸಂಗಿ ಸಂಸ್ಥಾನದ ಕೊನೆಯ ದೊರೆ ಲಿಂಗರಾಜ ದೇಸಾಯಿ ಅವರ ಆಡಳಿತವು ವೈಜ್ಞಾನಿಕ ಮನೋಧರ್ಮ, ಚಿಕಿತ್ಸಕದೃಷ್ಟಿ, ಪ್ರಗತಿಪರ ವಿಚಾರ ದೂರದೃಷ್ಟಿಯನ್ನು ಹೊಂದಿತ್ತು. ಶಿರಸಂಗಿ ಸಂಸ್ಥಾನದಲ್ಲಿ ಮಾತ್ರವಲ್ಲ, ಸುತ್ತಣ ಪರಿಸರದ ಮೇಲೆ ಅದು ಅಗಾಧ ಪರಿಣಾಮ ಉಂಟುಮಾಡಿತು. ಅಂದಿನ ಪುಣೆ-ಮುಂಬೈ, ಕಲ್ಕತ್ತಾ, ದೆಹಲಿ ಭಾಗಗಳ ಪರಿಚಯವಿದ್ದ ಲಿಂಗರಾಜರ ವಿಶ್ಲೇಷಣೆ, ಚಿಂತನೆ ಹಾಗೂ ವೈಜ್ಞಾನಿಕ ಮನೋಧರ್ಮ ಕಾರಣವಾಗಿ ಸಂಘಟನೆ, ಧರ್ಮ, ಶಿಕ್ಷಣ, ಸಹಕಾರ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಹಲವಾರು ಹೊಸ ಯೋಜನೆಗಳು ರೂಪುಗೊಂಡವು.

| ಡಾ. ಸಿದ್ದಣ್ಣ ಉತ್ನಾಳ ಬೆಳಗಾವಿ

ಲಕ್ಷೋಪಲಕ್ಷ ಭಾರತೀಯ ಸಂಸ್ಥಾನಗಳಲ್ಲಿ ಚಿರಂತನವಾದ ಸ್ಥಾನ ಪಡೆದುದೆಂದರೆ ಶಿರಸಂಗಿ ಸಂಸ್ಥಾನ. ಈ ಸಂಸ್ಥಾನದ ಕೊನೆಯ ದೊರೆ ಲಿಂಗರಾಜ ದೇಸಾಯಿ (1861-1906) ‘ಶಿರಸಂಗಿ ಲಿಂಗರಾಜ ಟ್ರಸ್ಟ್’ ಸ್ಥಾಪಿಸಿ ತಮ್ಮ ಸಂಸ್ಥಾನದ ಸಮಸ್ತ ಸಂಪತ್ತನ್ನೂ ಸಾರ್ವಜನಿಕ ಹಿತಾಸಕ್ತಿಗಾಗಿ ವಿನಿಯೋಗಿಸಲು ಮರಣಪತ್ರ ಬರೆದರು. ಇಂಥ ಪುಣ್ಯಪುರುಷನನ್ನು ಜನ್ಮದಿನದ (10 ಜನವರಿ 1861) ಸಂದರ್ಭದಲ್ಲಿ ನೆನೆಯುವುದು ಅವಶ್ಯ.

‘ಅರವತ್ತನಾಲ್ಕನೆಯ ಪುರಾತನ ಶಿವಶರಣ’ ಎಂದು ಸಮಕಾಲೀನರಿಂದ ಬಣ್ಣಿಸಿಕೊಂಡ ಲಿಂಗರಾಜರು ಸದಾ ಸಾರ್ವಜನಿಕ ಚಿಂತನೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೊಲ-ಮನೆ-ಆಸ್ತಿ ದನ-ಕರು ಮುಂತಾದ ಪ್ರಪಂಚದಲ್ಲಿಯೇ ಲಿಂಗಾಯತ ಸಮುದಾಯ ತಲ್ಲೀನವಾಗಿತ್ತು. ಈ ಸಮುದಾಯ ಪುರೋಗಾಮಿ ದೃಷ್ಟಿಕೋನವನ್ನು ಹೊಂದದಿದ್ದರೆ ಕರ್ನಾಟಕದ ಏಳ್ಗೆ ಸಾಧ್ಯವಿಲ್ಲ ಎಂದು ಲಿಂಗರಾಜರು ನಂಬಿದ್ದರು. ಶಿಕ್ಷಣದ ಮೂಲಕವೇ ಹೊಸ ವಿಚಾರಗಳ ಸೆಳೆತ ಸಾಧ್ಯ ಎಂಬ ಸತ್ಯವನ್ನು ಕಂಡುಕೊಂಡ ಅವರು ಲಿಂಗಾಯತ ಸಮಾಜ ಶಿಕ್ಷಣದ ಕಡೆಗೆ ಹೊರಳುವಂತೆ ಮಾಡಿದರು.

ಹರಿದು ಹಂಚಿಹೋಗಿದ್ದ ಲಿಂಗಾಯತ ಸಮಾಜವನ್ನು ಒಗ್ಗೂಡಿಸಿ ಸಮಾಜದ ಏಳ್ಗೆಗೆ ಬಳಸಲು ಸಾಮಾಜಿಕ ಸಂಘಟನೆಗೆ ಮುಂದಾದರು. ಅರಟಾಳ ರುದ್ರಗೌಡರು, ವಾರದ ಮಲ್ಲಪ್ಪನವರು, ಪುಟ್ಟಣ್ಣ ಶೆಟ್ಟರು ಮುಂತಾದ ಆ ಕಾಲದ ಹಿರಿಯರ ಜೊತೆಗೆ ಸಮಾಲೋಚಿಸಿ ಸಮಾಜದ ಸಂಘಟನೆಗೆ ಮುಂದಾದರು. ಲಿಂಗಾಯತ ಎಜ್ಯುಕೇಶನ್ ಫಂಡ್​ನಿಂದ ಧನಸಹಾಯ, ವಿಜಾಪುರದಲ್ಲಿ ಲಿಂಗಾಯತ ಹಾಸ್ಟೆಲ್, ಧಾರವಾಡದಲ್ಲಿ ಉಮಾಬಾಯಿ ವಸತಿನಿಲಯಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಬಡಲಿಂಗಾಯತ ಮಕ್ಕಳ ಬದುಕಿಗೆ ಶಿಕ್ಷಣದ ಸಂಸ್ಕಾರ ದೊರೆಯುವಂತೆ ಮಾಡಿದರು. ಧರ್ಮವು ವ್ಯವಹಾರಧರ್ಮಕ್ಕೆ ಪೂರಕವಾಗಿರಬೇಕೆಂದು ನಂಬಿದ್ದ ಲಿಂಗರಾಜರು ದಿನನಿತ್ಯ ಕಾಶಿಗೆ ಬರುವ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸಬೇಕೆಂದು ಕಾಶಿಯ ಜಂಗಮವಾಡಿ ಮಠಕ್ಕೆ 150 ಎಕರೆ ಭೂಮಿ, ಅನೇಕ ದತ್ತಿಗಳನ್ನು ದಾನವಾಗಿ ನೀಡಿದರು. ಕಾಡಸಿದ್ದೇಶ್ವರ ಕನೇರಿ ಮಠ, ರಾಮೇಶ್ವರ ಕ್ಷೇತ್ರ – ಹೀಗೆ ಹತ್ತುಹಲವಾರು ಧರ್ಮಕ್ಷೇತ್ರಗಳಿಗೆ ದಾನಧರ್ಮವನ್ನು ಮಾಡಿದರು.

ವ್ಯಾಪಾರ, ವ್ಯವಹಾರಗಳನ್ನು ಆಧುನಿಕ ದೃಷ್ಟಿಯಿಂದ ಮಾಡಬೇಕೆಂದು ಹೇಳುತ್ತಿದ್ದ ಲಿಂಗರಾಜರು ವಿಜಾಪುರದಲ್ಲಿ ಸಹಕಾರ ತತ್ವದಡಿಯಲ್ಲಿ ‘ಏಳೂರ ಗೌಡರ ದಲ್ಲಾಳಿ ಮಂಡಲಿ’ಯನ್ನು ಸ್ಥಾಪಿಸಿ ಲಿಂಗಾಯತ ಸಮಾಜದ ರೈತರಿಗೆ ಅನುಕೂಲವನ್ನು ಕಲ್ಪಿಸಿಕೊಟ್ಟರು. ಒಕ್ಕಲುತನವನ್ನೇ ಮುಖ್ಯ ಕಾಯಕವೆಂದು ನಂಬಿದ್ದ ಲಿಂಗಾಯತ ಜನರ ಬದುಕಿಗೆ ಬೆಳಕು ಸಿಗುವುದು ಈ ಕ್ಷೇತ್ರದಲ್ಲಿ ಉಂಟಾದ ಆಧುನಿಕ ವೈಜ್ಞಾನಿಕ ಆವಿಷ್ಕಾರಗಳನ್ನು ನಮ್ಮ ರೈತರು ಅಳಡಿಸಿಕೊಂಡಾಗ ಮಾತ್ರ ಎಂದು ಲಿಂಗರಾಜರು ನಂಬಿದ್ದರು. ಆದ್ದರಿಂದ ಈ ತತ್ತ್ವವನ್ನು ಸಾಬೀತುಪಡಿಸಲು ಅವರು ಹಾವೇರಿ ಹತ್ತಿರದ ದೇವಿಹೊಸೂರ ಗ್ರಾಮದಲ್ಲಿ 150 ಎಕರೆ ಜಮೀನನ್ನು ಖರೀದಿಸಿ ಕೃಷಿಪದ್ಧತಿಯ ಸೂತ್ರಗಳನ್ನು ಸಮಾಜದ ರೈತರಿಗೆ ಹೇಳುವ ವ್ಯವಸ್ಥೆಯನ್ನು ಮಾಡಿದರು. ನಮ್ಮ ಕೃಷಿಯು ಮಳೆನೀರನ್ನೇ ಅವಲಂಬಿಸಿದೆ. ಆದರೆ ಮಳೆಯು ಸಕಾಲಕ್ಕೆ ಒದಗದೆ ರೈತರು ತೊಂದರೆ ಅನುಭವಿಸುತ್ತಾರೆ. ಹೀಗಾಗಿ ಆಧುನಿಕ ಕೃಷಿ ತರಬೇತಿ ಶಾಖೆಯನ್ನು ನವಲಗುಂದ ಮತ್ತು ಶಿರಸಂಗಿ ಊರುಗಳಲ್ಲಿ ದೊಡ್ಡ ಕೆರೆಗಳನ್ನು ನಿರ್ವಿುಸಿ ಆ ಮೂಲಕ ರೈತರ ಹೊಲಗಳಿಗೆ, ಬೆಳೆಗಳಿಗೆ ನೀರುಣಿಸುವ ತಂತ್ರಜ್ಞಾನವನ್ನು ರೂಢಿಗೆ ತಂದರು. ಪರಂಪರಾಗತ ಒಕ್ಕಲುತನವನ್ನು ಮೈಗೂಡಿಸಿಕೊಂಡ ಅಂದಿನ ರೈತರು ಈ ಹೊಸ ತಂತ್ರಜ್ಞಾನವನ್ನು ಅನುಸರಿಸುವುದು ಸ್ವಲ್ಪ ಕಷ್ಟದಾಯಕವಾಗಿತ್ತು. ತಾವು ಸ್ವತಃ ರೈತರನ್ನು ಕಂಡು ಬದಲಾವಣೆ ಜೀವನದ ಅನಿವಾರ್ಯ ಅಂಗ ಎಂಬುದನ್ನು ತಿಳಿಹೇಳಿ ಕೃಷಿಯಲ್ಲಿ ಆಧುನಿಕಪದ್ಧತಿಯನ್ನು ಜಾರಿಗೆ ತಂದು ತಮ್ಮ ಬದುಕನ್ನು ಸುಧಾರಿಸಿಕೊಳ್ಳಲು ಮಾಗೋಪಾಯಗಳನ್ನು ಸೂಚಿಸಿದರು.

ಸಂಪ್ರದಾಯದಲ್ಲಿ ನಮ್ಮ ಸಮಾಜ ಕೊರಗುತ್ತಿದೆ ಎಂಬುದನ್ನು ಮನಗಂಡಿದ್ದ ಲಿಂಗರಾಜರು ಅನೇಕ ಸಾಮಾಜಿಕ ಬದಲಾವಣೆಗಳನ್ನು ಕುರಿತು ಜನರಿಗೆ ತಿಳಿಹೇಳಿದರು. ‘ವಿಧವಾ ವಿವಾಹ’ ಎಂಬ ಪರಿಕಲ್ಪನೆಯನ್ನು ಪುರಸ್ಕರಿಸಿ ತಮ್ಮ ಪ್ರಗತಿಪರ ಚಿಂತನೆಯನ್ನು ಸಮಾಜಮುಖಿ ಧೋರಣೆಯನ್ನಾಗಿ ರೂಪಿಸಿ ಸಾರ್ವತ್ರಿಕಗೊಳಿಸಲು ಹಗಲು-ರಾತ್ರಿ ಶ್ರಮಿಸಿದರು. ಅವರು ಸಮಾಜದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಅಹರ್ನಿಶಿ ಚಿಂತಿಸಿದರು. ಸಮಾಜದ ಬೆಳವಣಿಗಾಗಿ ತಮ್ಮ ಸರ್ವಸ್ವವನ್ನು ದಾನ ಮಾಡುವ ಮೂಲಕ ಇಂದು ಲಿಂಗರಾಜ ದೇಸಾಯಿ ಅವರು ‘ತ್ಯಾಗವೀರ ಲಿಂಗರಾಜ ದೇಸಾಯಿ’ ಎಂದು ಇತಿಹಾಸದಲ್ಲಿ ಪ್ರಸಿದ್ಧರಾದರು. ಅವರು ಹುಟ್ಟಿನಿಂದ ಕುಡುಒಕ್ಕಲಿಗರಾದರೂ ಸಮಸ್ತ ಲಿಂಗಾಯತ ಸಮಾಜದ ಅಭಿವೃದ್ಧಿಯೊಂದನ್ನೇ ಗುರಿಯಾಗಿಟ್ಟುಕೊಂಡು ದುಡಿದು ತಮ್ಮ ವಿಚಾರಗಳಿಂದ ಅಜರಾಮರರಾದರು. ತಮ್ಮ ಪ್ರಗತಿಪರ ಚಿಂತನೆ, ಆಧುನಿಕ ದೃಷ್ಟಿಕೋನ, ಮತ್ತು ವೈಜ್ಞಾನಿಕ ಮನೋಧರ್ಮ ಕಾರಣವಾಗಿ ಅವರು ಆಧುನಿಕ ಕರ್ನಾಟಕದ ನಿರ್ವಪಕರಾಗಿದ್ದಾರೆ. ಕೃಷಿ ಸಹಕಾರ, ಶಿಕ್ಷಣ, ಸಂಘಟನೆ, ಸಮಾಜ ಮುಂತಾದ ಕ್ಷೇತ್ರಗಳ ಲಿಂಗರಾಜರು ಮಾಡಿದ ಸಾಧನೆ ಅದ್ಭುತವಾದದು, ಅನನ್ಯವಾದದು. ಈ ಮಹನೀಯರು ಬರೆದ ಮೃತ್ಯುಪತ್ರದ ಪ್ರಕಾರ ‘ನವಲಗುಂದ ಶಿರಸಂಗಿ ಟ್ರಸ್ಟ್’ ಬೆಳಗಾವಿಯಲ್ಲಿ ಪ್ರಾರಂಭವಾಗಿ ಲಿಂಗಾಯತ ಮಕ್ಕಳಿಗೂ, ಕೆ.ಎಲ್.ಇ. ಸಂಸ್ಥೆಗೂ, ನಾಡಿನ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೂ ಕೊಟ್ಟ ದಾನವು ಕರ್ನಾಟಕ ಇತಿಹಾಸದ ಎರಡನೆಯ ಘಟ್ಟವಾಗಿ ಇಂದಿಗೂ ಆಚಂದ್ರಾರ್ಕವಾಗಿ ಬೆಳಗುತ್ತಿದೆ. ಲಿಂಗರಾಜರ ಸ್ಮರಣೆ ಆಧುನಿಕ ಕರ್ನಾಟಕದ ಸಾಂಸ್ಕೃತಿಕ ಅಭಿವೃದ್ಧಿಯ ಸ್ಮರಣೆಯೇ ಆಗಿದೆ.

Stay connected

278,742FansLike
588FollowersFollow
625,000SubscribersSubscribe

ವಿಡಿಯೋ ನ್ಯೂಸ್

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...